More

  ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟಿಗರ ಸಲಿಂಗ ವಿವಾಹ

  ಮೆಲ್ಬೋರ್ನ್: ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟಿಗರಾದ ಡೆಲಿಸ್ಸಾ ಕಿಮ್ಮಿನ್ಸ್ ಮತ್ತು ಲೌರಾ ಹ್ಯಾರಿಸ್ ಭಾನುವಾರ ಸಲಿಂಗ ವಿವಾಹವಾಗಿದ್ದಾರೆ. ಇವರಿಬ್ಬರು ಕಳೆದ ಕೆಲ ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು.

  ಆಸ್ಟ್ರೇಲಿಯಾದ ಮಹಿಳಾ ಟಿ20 ಲೀಗ್ ಬಿಗ್‌ಬಾಷ್‌ನಲ್ಲಿ ಇಬ್ಬರೂ ಬ್ರಿಸ್ಬೇನ್ ಹೀಟ್ಸ್ ತಂಡದ ಪರ ಆಡುತ್ತಾರೆ. ಕಳೆದ ವರ್ಷ ಟೂರ್ನಿಯ ಫೈನಲ್ ಪಂದ್ಯದ ಬೆನ್ನಲ್ಲೇ ಇಬ್ಬರೂ ನಿಶ್ಚಿತಾರ್ಥವನ್ನು ಪ್ರಕಟಿಸಿದ್ದರು. ಈ ವರ್ಷ ಏಪ್ರಿಲ್‌ನಲ್ಲೇ ವಿವಾಹವಾಗುವ ಯೋಜನೆ ಹೊಂದಿದ್ದರೂ, ಕರೊನಾ ವೈರಸ್ ಹಾವಳಿಯಿಂದಾಗಿ ವಿವಾಹವನ್ನು ಮುಂದೂಡಿದ್ದರು.

  ‘ಎಲ್ಲರಿಗೂ ಧನ್ಯವಾದಗಳು. ನಮ್ಮ ವಿವಾಹದ ದಿನ ನಮ್ಮ ಜೀವನದ ಶ್ರೇಷ್ಠ ದಿನ. ಈ ದಿನವನ್ನು ನಮ್ಮೊಂದಿಗೆ ಕಳೆದ ನಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಧನ್ಯವಾದಗಳು. ನಿಮ್ಮೊಂದಿಗೆ ಕಳೆದ ಉತ್ತಮ ಸಮಯಕ್ಕಾಗಿ ಕೃತಜ್ಞರಾಗಿರುತ್ತೇವೆ’ ಎಂದು 31 ವರ್ಷದ ಡೆಲಿಸ್ಸಾ ಕಿಮ್ಮಿನ್ಸ್ ವಿವಾಹದ ಚಿತ್ರಗಳೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಅವರು ಆಸೀಸ್ ಪರ 16 ಏಕದಿನ ಮತ್ತು 41 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ವರ್ಷ ಟಿ20 ವಿಶ್ವಕಪ್ ಜಯಿಸಿದ ಆಸೀಸ್ ತಂಡದ ಸದಸ್ಯೆಯೂ ಅಗಿದ್ದರು. 29 ವರ್ಷದ ಲೌರಾ ಹ್ಯಾರಿಸ್ ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ.

  ಇದನ್ನೂ ಓದಿ: ಐಪಿಎಲ್ ಪ್ರಾಯೋಜಕತ್ವಕ್ಕೆ ಪತಂಜಲಿ ವಿಧಿಸಿದ ಷರತ್ತು ಏನು ಗೊತ್ತೇ?

  ಮಹಿಳಾ ಕ್ರಿಕೆಟ್‌ನಲ್ಲಿ ಸಲಿಂಗ ವಿವಾಹ ಹೊಸದಲ್ಲ
  ಮಹಿಳಾ ಕ್ರಿಕೆಟ್‌ನಲ್ಲಿ ಸಲಿಂಗ ವಿವಾಹ ಇದೇ ಮೊದಲಲ್ಲ. ಈ ಹಿಂದೆ ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರ್ತಿಯರಾದ ಲಿಯ ತಹುಹು ಮತ್ತು ಆಮಿ ಸಟ್ಟರ್ಥ್‌ವೇಟ್ 2017ರಲ್ಲಿ ವಿವಾಹವಾಗಿದ್ದರೆ, ದಕ್ಷಿಣ ಆಫ್ರಿಕಾದ ಡಾನ್ ವಾನ್ ನೈಕರ್ಕ್ ಮತ್ತು ಮರಿಜಾನೆ ಕಾಪ್ 2018ರಲ್ಲಿ ದಾಂಪತ್ಯ ಆರಂಭಿಸಿದ್ದರು. ಆಸ್ಟ್ರೇಲಿಯಾದಲ್ಲೂ ಅಲೆಕ್ಸ್ ಬ್ಲ್ಯಾಕ್‌ವೆಲ್-ಲಿನ್ಸೆ ಅಸ್ಕೆವ್, ಮೆಗನ್ ಸ್ಕಾಟ್-ಜೆಸ್ ಹೊಲಿಯೋಕ್, ಜೆಸ್ ಜೊನಾಸೆನ್-ಸಾರಾ ವೆಯರ್ನ್ ಈಗಾಗಲೆ ಸಲಿಂಗ ವಿವಾಹವಾಗಿರುವ ಮಹಿಳಾ ಕ್ರಿಕೆಟಿಗರಾಗಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts