More

    ಅಪ್ರಾಪ್ತಳನ್ನು ಮದುವೆಯಾದ ಸಲಿಂಗಿ ಅಂದರ್

    ಭೋಪಾಲ್: ಭಾರತದಲ್ಲಿ ಸಲಿಂಗಿಗಳ ವಿವಾಹ ಕಾನೂನುಬದ್ಧವಾಗಿ ಗುರುತಿಸಲ್ಪಟ್ಟಿಲ್ಲವಾದರೂ, ಇಬ್ಬರು ಹುಡುಗಿಯರು ಪರಸ್ಪರ ವಿವಾಹವಾಗಿದ್ದಾರೆ.
    ಅವರಲ್ಲಿ ಒಬ್ಬರು ವರನ ಉಡುಪನ್ನು ಮತ್ತು ಇನ್ನೊಬ್ಬರು ಸಾಂಪ್ರದಾಯಿಕ ವಧುವಿನಂತೆ ಉಡುಪು ಧರಿಸಿ. ಕಳೆದ ತಿಂಗಳು ಮಧ್ಯಪ್ರದೇಶದ ಗುಣಾ ಜಿಲ್ಲೆಯಲ್ಲಿ ಓಡಿಹೋಗಿ ಮದುವೆಯಾಗಿದ್ದಾರೆ.

    ಇದನ್ನೂ ಓದಿ : ಕೊವಿಡ್​-19 ವಿರುದ್ಧ ಹೋರಾಟದಲ್ಲಿ ಸೋತು, ಶರಣಾಗಿದ್ದಾರೆ ಪ್ರಧಾನಿ ಮೋದಿ: ರಾಹುಲ್​ ಗಾಂಧಿ

    ಅಂದಾಜು ಒಂದು ತಿಂಗಳ ನಂತರ ಜೂನ್ 22 ರಂದು ಅವರ ಕುಟುಂಬಗಳು ಪೊಲೀಸರನ್ನು ಸಂಪರ್ಕಿಸಿ ಅವರು ಕಾಣೆಯಾದ ಕುರಿತು ದೂರನ್ನು ದಾಖಲಿಸಿದ್ದಾರೆ. ತನಿಖೆ ಪ್ರಾರಂಭಿಸಿದ ಪೊಲೀಸರು ಶುಕ್ರವಾರ ಅವರನ್ನು ಪತ್ತೆಹಚ್ಚಿದರು. ‘ವಧು’ ಅಪ್ರಾಪ್ತ ವಯಸ್ಕಳು ಎಂದು ತಿಳಿದು ಅಧಿಕಾರಿಗಳೇ ಆಘಾತಕ್ಕೊಳಗಾಗಿದ್ದಾರೆ. ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳನ್ನು ರಕ್ಷಿಸುವ (ಪೋಕ್ಸೊ) ಕಾಯ್ದೆಯಡಿ ಪೊಲೀಸರು ‘ವರನನ್ನು’ ಬಂಧಿಸುವುದರೊಂದಿಗೆ ಅವರ ವೈವಾಹಿಕ ಸಂಬಂಧ ಕೊನೆಗೊಂಡಿದೆ. ಸಮಾಲೋಚನೆಯ ನಂತರ, ಅಪ್ರಾಪ್ತ ಬಾಲಕಿಯನ್ನು ಆಕೆಯ ಕುಟುಂಬವು ಕರೆದೊಯ್ದಿದೆ.

    ಇದನ್ನೂ ಓದಿ: ಸಂತ್ರಸ್ತರಿಗಾಗಿ ಮಿಡಿದ ಈ ನಟರಿಗೆ ‘ಭಾರತ ರತ್ನ’ ಸಿಗಲಿ: ಅಭಿಯಾನ ಶುರು

    ಸುದ್ದಿ ಸಂಸ್ಥೆಯೊಂದರ ವರದಿಯ ಪ್ರಕಾರ, ಶಿವಪುರಿಯ ನಿವಾಸಿ ಬಂಧಿತ ಆರೋಪಿ ಅಪ್ರಾಪ್ತ ವಯಸ್ಕಳ ಸೋದರಸಂಬಂಧಿ. ಸಂಬಂಧಿಕರ ಮನೆಯಲ್ಲಿ ಭೇಟಿಯಾಗುತ್ತಿದ್ದ ಅವರು ಒಂದು ವರ್ಷದ ಡೇಟಿಂಗ್ ನಂತರ ಮದುವೆಯಾಗಲು ನಿರ್ಧರಿಸಿದರು.
    ಮತ್ತೊಂದು ಘಟನೆಯಲ್ಲಿ ಗಂಡಂದಿರಿಗೆ ವಿಚ್ಛೇದನ ನೀಡಿದ ನಂತರ ಇಬ್ಬರು ಮಹಿಳೆಯರು ಮದುವೆಯಾಗಿದ್ದಾರೆ.

    ಕಳೆದ ವರ್ಷ ಉತ್ತರ ಪ್ರದೇಶದ ಬುಂದೇಲ್‌ಖಂಡ್ ಪ್ರದೇಶದಲ್ಲಿ ಇಬ್ಬರು ಮಹಿಳೆಯರು ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾದರು. ವರದಿಯೊಂದರ ಪ್ರಕಾರ, ಕಾಲೇಜಿನಲ್ಲಿ ಭೇಟಿಯಾದ ಇಬ್ಬರು ಮಹಿಳೆಯರು ಪರಸ್ಪರ ಪ್ರೀತಿಸುತ್ತಿದ್ದರು. ನಂತರ, ಅವರ ಕುಟುಂಬಗಳು ಪುರುಷರೊಂದಿಗೆ ವಿವಾಹ ಮಾಡುವ ಮೂಲಕ ಅವರಿಬ್ಬರನ್ನು ಬೇರ್ಪಡಿಸಿದರು.

    ಇದನ್ನೂ ಓದಿ:  ದೇಶದ ಪ್ರಥಮ ಕಲ್ಲುಹೂವು ಉದ್ಯಾನ ಅಭಿವೃದ್ಧಿಪಡಿಸಿದೆ ಉತ್ತರಾಖಂಡ…!

    ಆರು ವರ್ಷಗಳ ನಂತರ, ಮಹಿಳೆಯರು ತಮ್ಮ ಗಂಡಂದಿರಿಗೆ ವಿಚ್ಛೇದನ ನೀಡಿ ಪರಸ್ಪರ ಮದುವೆಯಾದರು. ಆದರೆ, ಸಲಿಂಗಿಗಳ ವಿವಾಹಕ್ಕೆ ಅವಕಾಶವಿಲ್ಲ ಎಂದು ಉಲ್ಲೇಖಿಸಿ ರಿಜಿಸ್ಟ್ರಾರ್ ಅವರ ಮದುವೆಯನ್ನು ಕಾನೂನುಬದ್ಧಗೊಳಿಸಲು ನಿರಾಕರಿಸಿದರು ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

    ಕರೊನಾ ಸೋಂಕಿನ 3 ಹೊಸ ಲಕ್ಷಣಗಳು ಪತ್ತೆ; ಎಚ್ಚರ… ನಿಮ್ಮಲ್ಲಿ ಈ ಸಮಸ್ಯೆಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ಬೇಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts