More

    ವಚನಗಳಿಂದ ಸಮಷ್ಠಿಯ ವಿಚಾರಧಾರೆ

    ರಾಯಚೂರು: ಶರಣರು ರಚಿಸಿದ ವಚನಗಳು ಸಮಷ್ಠಿಯ ವಿಚಾರಧಾರೆಗಳನ್ನು ಕಟ್ಟಿಕೊಡುತ್ತಿದ್ದು, ವಚನ ಸಾಹಿತ್ಯ ವಿಶ್ವ ಸಾಹಿತ್ಯಕ್ಕೆ ನಮ್ಮ ದೇಶದಿಂದ ನೀಡಲಾದ ವಿಶಿಷ್ಠ ಕೊಡುಗೆಯಾಗಿದೆ ಎಂದು ಮೈಸೂರಿನ ಧಾರ್ಮಿಕ ಚಿಂತಕ ಶಂಕರ ದೇವನೂರು ಹೇಳಿದರು.
    ಸ್ಥಳೀಯ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದಿಂದ ಶುಕ್ರವಾರ ಏರ್ಪಡಿಸಿದ್ದ ಬಸವ ಮತ್ತು ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಾನವ ವಿಕಾಸಕ್ಕೆ ಕಾರಣವಿದ್ದು ಬಸವಣ್ಣರ ವಿಚಾರಧಾರೆಗಳು ಎಂದರು.
    12ನೇ ಶತಮಾನದ ಕಾಲ ವಿವೇಕದ ಕಾಲವಾಗಿತ್ತು, ಆದರೆ ನಾವು ಇಂದು ಅವಿವೇಕದ ಕಾಲದಲ್ಲಿರುವುದು ದುರಂತದ ವಿಚಾರವಾಗಿದೆ. ಜಿಡ್ಡುಗಟ್ಟಿದ ಸಮಾಜಕ್ಕೆ ಶರಣರ ಸಂಕುಲ ಜಿಡ್ಡು ಬಿಡಿಸುವ ಕೆಲಸವನ್ನು ಮಾಡಿತ್ತು. ಶರಣರು ಒಂದು ವರ್ಗ, ಜಾತಿಗೆ ಸಿಮೀತವಾಗಿಲ್ಲ. ಅವರ ಚಿಂತನೆಗಳನ್ನು ನಮ್ಮದಾಗಿಸಿಕೊಂಡು ಬದುಕಬೇಕು.
    ನಾವು ಇರುವುದನ್ನು ಅರಿಯಲು ಭೂಮಿಗೆ ಬಂದಿದ್ದೇವೆ. ಸಾವು ನಮ್ಮ ಜೀವನದ ದೊಡ್ಡ ದುರಂತವಲ್ಲ. ನಮ್ಮ ನಡೆ, ಕ್ರಿಯೆಯಲ್ಲಿ ಅಪ್ರಬುದ್ಧತೆ ಮತ್ತು ಅನಾಗರಿಕರಾಗಿ ಬದುಕುವುದು ನಿಜವಾದ ಸಾವಾಗಿದೆ. ಇವತ್ತಿನ ಗೊಂದಲದ ಸ್ಥಿತಿಯಲ್ಲಿ ವೈಭವದ ಆಚರಣೆಗಿಂತ ಶರಣರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಶಂಕರ ದೇವನೂರು ಹೇಳಿದರು.
    ಬಿಚ್ಚಾಲಿಯ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಚೌಕಿಮಠದ ಡಾ.ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
    ಕಾರ್ಯಕ್ರಮದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣಭೂಪಾಲ ನಾಡಗೌಡ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ, ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು , ಮುಖಂಡರಾದ ನಾಗನಗೌಡ ಹರವಿ, ನಾಗರಾಜ ಮಸ್ಕಿ, ದಾನಮ್ಮ ಸುಭಾಶ್ಚಂದ್ರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts