More

    ಬಸವೇಶ್ವರ, ಹೇಮರಡ್ಡಿ ಮಲ್ಲಮ್ಮ ನೆನಹು

    ಕೊಪ್ಪಳ: ರಾಜ್ಯದ ಸಾಂಸತಿಕ ನಾಯಕ, ವಿಶ್ವಗುರು ಬಸವೇಶ್ವರ ಹಾಗೂ ಶಿವ ಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಜಿಲ್ಲಾಡಳಿತದಿಂದ ಶುಕ್ರವಾರ ಸರಳವಾಗಿ ಆಚರಿಸಲಾಯಿತು.

    ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ಪುಷ್ಪಾರ್ಚನೆ ಮೂಲಕ ನೆರವೇರಿಸಲಾಯಿತು. ಡಿಸಿ ನಲಿನ್​ ಅತುಲ್​, ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಡಿಸಿ ಸಾವಿತ್ರಿ ಕಡಿ ಹಾಗೂ ಇತರ ಗಣ್ಯರು ಬಸವಣ್ಣ ಹಾಗೂ ಹೇಮರಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

    ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ರೆಡ್ಡಿ ಸಮುದಾಯ ಮುಖಂಡರಾದ ಪ್ರಭು ಹೇಬ್ಬಾಳ, ಶರಣಪ್ಪ ವಕೀಲ, ವಿರುಪಣ್ಣ ನವೋದಯ, ಹೇಮರೆಡ್ಡಿ ಕೆಂಚರೆಡ್ಡಿ, ಮನೋಹರ, ಶಿವರೆಡ್ಡಿ, ಶಂಕರಗೌಡ ಹಿರೇಗೌಡ್ರ, ಸುರೇಶ ಇತರರಿದ್ದರು.

    ಕಾರ್ಯಕ್ರಮ ಬಳಿಕ ಜಿಲ್ಲಾಡಳಿತದ ಅಧಿಕಾರಿಗಳು ನಿಜ ಶರಣ ಅಂಬಿಗರ ಚೌಡಯ್ಯ ಉದ್ಯಾನದಲ್ಲಿನ ಮಹನಿಯರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಎಸ್ಪಿ ಯಶೋದಾ ವಂಟಗೋಡಿ, ಕೊಪ್ಪಳ ತಹಸೀಲ್ದಾರ್​ ವಿಠ್ಠಲ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ಜಿಲ್ಲಾ ವಕೀಲರ ಸಂದ ಅಧ್ಯಕ್ಷ ಎ.ವಿ.ಕಣವಿ, ಪ್ರಮುಖ ಬಸವರಾಜ ಬಳ್ಳೊಳ್ಳಿ ಇತರರಿದ್ದರು.

    ಸರ್ಕಾರಿ ಕಾಲೇಜಿನಲ್ಲಿ ಆಚರಣೆ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಬಸವೇಶ್ವರ ಹಾಗೂ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ತಿಮ್ಮಾರೆಡ್ಡಿ ಮೇಟಿ ಮಾತನಾಡಿ, ಬಸವಣ್ಣ 12 ನೇ ಶತಮಾನದಲ್ಲಿ ವಚನ ಚಳವಳಿ ಮೂಲಕ ಸಮಾಜ ಸುಧಾರಣೆ ಬಯಸಿದರು. ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದರು. ಹೇಮರಡ್ಡಿ ಮಲ್ಲಮ್ಮ ಮಹಾ ಸಾದ್ವಿ. ಸಂಸಾರದ ತೊಂದರೆ ಮೆಟ್ಟಿ ನಿಂತು ಭಕ್ತಿ ಮಾರ್ಗ ತೋರಿದಳು ಎಂದರು. ಉಪನ್ಯಾಸಕ ಮಹಾಂತೇಶ ನೆಲಾಗಣಿ, ಸಿಬ್ಬಂದಿ ನಿಂಗಪ್ಪ ಕೆ., ಹಸನ್​ಸಾಬ್​ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts