More

    ಸಮಂತಾ ಅಕ್ಕಿನೇನಿ ಪಡೆದಿದ್ದು 1 ಕೋಟಿ ರೂಪಾಯಿ!

    ದಕ್ಷಿಣದ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಇತ್ತೀಚಿನ ದಿನಗಳಲ್ಲಿ ಸಿನಿಮಾ ಆಯ್ಕೆ ವಿಚಾರದಲ್ಲಿ ತುಂಬ ಚ್ಯೂಸಿ ಆಗಿದ್ದಾರೆ. ಆಯ್ದುಕೊಳ್ಳುವ ಸಿನಿಮಾಗಳ ಸಂಖ್ಯೆ ಕಡಿಮೆಯಾಗುತ್ತಿವೆಯಾದರೂ, ತಮ್ಮ ಬೇಡಿಕೆಯನ್ನು ಮಾತ್ರ ಕಡಿಮೆ ಮಾಡಿಕೊಂಡಿಲ್ಲ. ಅದ್ಯಾವ ಮಟ್ಟಿಗೆ ಅಂದರೆ, ಸಿನಿಮಾ ಹೊರತುಪಡಿಸಿ ಬೇರೆ ಬೇರೆ ಕಾರ್ಯಕ್ರಮಗಳಿಗೂ ಅವರು ಭರ್ಜರಿ ಸಂಭಾವನೆಯನ್ನೇ ಪಡೆದುಕೊಳ್ಳುತ್ತಿದ್ದಾರೆ.

    ಹೌದು, ‘ಆಹಾ’ ಓಟಿಟಿ ವೇದಿಕೆಯಲ್ಲಿ ಶುರುವಾಗಿರುವ ‘ಸ್ಯಾಮ್ ಜ್ಯಾಮ್ ಟಾಕ್ ಶೋಗೆ ಬರೋಬ್ಬರಿ 1 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡು ಸಮಂತಾ ಸುದ್ದಿಯಲ್ಲಿದ್ದಾರೆ. ಅಚ್ಚರಿ ಏನೆಂದರೆ ಈ ಟಾಕ್ ಶೋ ಕೇವಲ ಎಂಟು ಸಂಚಿಕೆಗಳದ್ದು. ಒಂದೊಂದು ಸಂಚಿಕೆಯ ಅವಧಿ ಒಂದು ಗಂಟೆ. ಸೆಲೆಬ್ರಿಟಿಗಳ ಜತೆಗಿನ ಮಾತು, ಹರಟೆ, ಮೋಜು ಮಸ್ತಿಯನ್ನೇ ಮುಖ್ಯವಾಗಿರಿಸಿಕೊಂಡು ಈ ಶೋವನ್ನು ಸಮಂತಾ ನಿರೂಪಣೆ ಮಾಡುತ್ತಿದ್ದಾರೆ. ಇನ್ನುಳಿದಂತೆ ತಮಿಳಿನ ಒಂದು ಸಿನಿಮಾ ಒಪ್ಪಿಕೊಂಡಿದ್ದು, ಫ್ಯಾಮಿಲಿ ಮ್ಯಾನ್ 2 ವೆಬ್​ಸರಣಿಯಲ್ಲಿಯೂ ಅವರು ನಟಿಸಿದ್ದಾರೆ. -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts