More

    ಪ್ರೇಯಸಿಯ ಚಿತ್ರಕ್ಕೆ ಸಲ್ಮಾನ್​ ಬಂಡವಾಳ; ಅಷ್ಟಕ್ಕೂ ಅಸಲಿ ಕಥೆಯೇ ಬೇರೆ ಇದೆ!

    ಬಾಲಿವುಡ್​ ನಟ ಸಲ್ಮಾನ್​ ಖಾನ್​, ನಟನೆ ಜತೆಗೆ ಹಲವು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಹೊಸ ಹೊಸ ಕಲಾವಿದರನ್ನು, ತಮ್ಮ ಕುಟುಂಬದ ಕೆಲವರನ್ನು ಬಾಲಿವುಡ್​ಗೆ ಪರಿಚಯಿಸಿದ್ದಾರೆ. ಹೀಗಿರುವಾಗಲೇ ರೊಮ್ಯಾನಿಯಾ ಬೆಡಗಿ, ಸಲ್ಮಾನ್​ ಖಾನ್​ ಪ್ರೇಯಸಿ ಎಂದೇ ಕರೆಸಿಕೊಳ್ಳುವ ಲುಲಿಯಾ ವೆಂಚರ್​ ಚಿತ್ರವನ್ನು ಸ್ವತಃ ಸಲ್ಮಾನ್​ ಖಾನ್​ ನಿರ್ಮಾಣ ಮಾಡಲಿದ್ದಾರೆ ಎಂಬ ಸುದ್ದಿ ಸದ್ಯ ಬಾಲಿವುಡ್​ನಲ್ಲಿ ಹರಿದಾಡುತ್ತಿದೆ.

    ಇದನ್ನೂ ಓದಿ: ತೆರೆಮೇಲೆ ಮತ್ತೆ ಮುನ್ನಾಭಾಯಿ, ಸರ್ಕಿಟ್​ ಮೋಡಿ!?

    ಸಲ್ಮಾನ್​ ಖಾನ್​ ಬಂಡವಾಳ ಹೂಡುವುದಕ್ಕೆ ಮುಖ್ಯ ಕಾರಣ, ಲೂಲಿಯಾ ನಟಿಸಬೇಕಿದ್ದ ಸಿನಿಮಾವೊಂದು ಸ್ಥಗಿತಗೊಂಡಿದ್ದು. ಹೌದು. ಕಳೆದ ಎರಡು ವರ್ಷಗಳ ಹಿಂದೆಯೇ ಪ್ರೇಮ್​ ಸೋನಿ ನಿರ್ದೇಶನದಲ್ಲಿ ಶೀರ್ಷಿಕೆ ಅಂತಿಮವಾಗದ ಚಿತ್ರದಲ್ಲಿ ಲೂಲಿಯಾ ನಾಯಕಿಯಾಗಿ ಆಯ್ಕೆಯಾಗಿದ್ದರು. ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಆ ಸಿನಿಮಾ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡುವ ಖುಷಿಯಲ್ಲಿದ್ದರು ಲೂಲಿಯಾ. ಆ ಚಿತ್ರದ ಒಂದಷ್ಟು ಭಾಗದ ಚಿತ್ರೀಕರಣವೂ ಆಗಿತ್ತು. ಆದರೆ, ಇದೀಗ ಆ ಸಿನಿಮಾ ನಿಂತಿದೆ. ಹಾಗಾಗಿ ಪ್ರೇಯಸಿ ಸಲುವಾಗಿ ಸ್ವತಃ ಸಲ್ಮಾನ್​ ಖಾನ್​, ಹೊಸ ಚಿತ್ರವೊಂದನ್ನು ನಿರ್ಮಾಣ ಮಾಡಲಿದ್ದಾರಂತೆ.

    ಇದನ್ನೂ ಓದಿ: ಶಿವಣ್ಣ ಮತ್ತು ದರ್ಶನ್ ಪಾಲಿಗೆ ಇಂದು ಮರೆಯಲಾಗದ ದಿನ!

    ಸದ್ಯ ಫಾರ್ಮ್​ ಹೌಸ್​ನಲ್ಲಿ ಜಾಕ್​ಲೀನ್​ ಮತ್ತು ಲುಲಿಯಾ ವೆಂಚರ್ ಜತೆಗೆ ಕಾಲಕಳೆಯುತ್ತಿರುವ ಸಲ್ಮಾನ್​ ಖಾನ್​, ಲಾಕ್​ಡೌನ್ ತೆರವಾಗುವುದನ್ನೇ ಕಾಯುತ್ತಿದ್ದಾರೆ. ಲಾಕ್​ಡೌನ್​ ಮುಗಿಯುತ್ತಿದ್ದಂತೆ, ಸಿನಿಮಾ ಕೆಲಸಗಳಿಗೆ ಚಾಲನೆ ಸಿಗುತ್ತಿದ್ದಂತೆ ಲೂಲಿಯಾಗೋಸ್ಕರ ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರಂತೆ. ಹಾಗಾದರೆ ಆ ಚಿತ್ರದಲ್ಲಿ ಸಲ್ಮಾನ್​ ಇರ್ತಾರಾ? ಸದ್ಯಕ್ಕೆ ಅದಿನ್ನೂ ನಿಗೂಢ! (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts