More

    ಸಲ್ಮಾನ್​​ ಖಾನ್​​​​ ರೀತಿಯಲ್ಲೇ ಡ್ರೆಸ್​​​​ ಧರಿಸಿಕೊಂಡು ರೈಲಿನಲ್ಲಿ ಹೆಜ್ಜೆ ಹಾಕಿದ ಯುವಕ, ವಿಡಿಯೋ ವೈರಲ್​..!

    ಮುಂಬೈ: ಮೆಟ್ರೋ ರೈಲಿನಲ್ಲಿ ಡ್ಯಾನ್ಸ್​​​ ಮಾಡುವ ವಿಡಿಯೋಗಳು ಆಗಾಗ ವೈರಲ್​​​​​ ಆಗುತ್ತಲೇ ಇರುತ್ತೆ. ಅದ್ರಲ್ಲೂ ಮೊನ್ನೆಯಷ್ಟೆ ಯುವತಿಯೊಬ್ಬರು ಜವಾನ್​​​ ಸಿನಿಮಾದ ಸೀನ್​ ಒಂದನ್ನ ಮೆಟ್ರೋನಲ್ಲಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿತ್ತು.


    ಇದೀಗ ವ್ಯಕ್ತಿಯೊಬ್ಬ ಮುಂಬೈನ ಲೋಕಲ್​​ ಮೆಟ್ರೋ ಟ್ರೈನ್​ನಲ್ಲಿ ಸಲ್ಮಾನ್​ ಖಾನ್​ ರೀತಿಯೇ ಉಡುಪು ಧರಿಸಿ, ಹೆಜ್ಜೆ ಹಾಕಿರುವ ವಿಡಿಯೋ ವೈರಲ್​​ ಆಗಿದೆ. ಎಕ್ಸ್​​​(ಟ್ವಿಟ್ಟರ್​​ನಲ್ಲಿ) ಈ ವಿಡಿಯೋವನ್ನ ಪೋಸ್ಟ್​ ಮಾಡಲಾಗಿದ್ದು, ಈ ವ್ಯಕ್ತಿ ನೇರಳೆ ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿ, ಚಲಿಸುತ್ತಿರುವ ರೈಲಿನೊಳಗೆ ಉತ್ಸಾಹದಿಂದ ನೃತ್ಯ ಮಾಡಿದ್ದಾನೆ.


    ಹೀಗೆ ಡ್ಯಾನ್ಸ್​​ ಮಾಡುತ್ತಿದ್ದ ವ್ಯಕ್ತಿಯನ್ನ ಕಂಡು ಸುತ್ತಲೂ ನೆರೆದಿದ್ದ ಜನರು ಹರ್ಷೋದ್ಗಾರದಿಂದ ಚಪ್ಪಾಳೆ ತಟ್ಟಿ ಆತನನ್ನು ಪ್ರೋತ್ಸಾಹಿಸಿದ್ದಾರೆ.
    ಆದರೆ, ಸೆಂಟ್ರಲ್ ರೈಲ್ವೇ ಈ ವಿಡಿಯೋವನ್ನು ಗಂಭೀರವನ್ನು ಪರಿಗಣಿಸಿದ್ದು, ರೈಲುಗಳಲ್ಲಿ ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ಪ್ರಯಾಣಿಕರಿಗೆ ಸಂದೇಶ ನೀಡಿದೆ.

    ಇಂತಹ ನಡವಳಿಕೆಯು ಸಹ-ಪ್ರಯಾಣಿಕರಿಗೆ ತೊಂದರೆಯನ್ನುಂಟುಮಾಡುತ್ತದೆ ಹಾಗಾಗಿ ರೈಲು ಪ್ರಯಾಣದ ಸಮಯದಲ್ಲಿ ಯಾರೂ ಇಂತಹ ಡ್ಯಾನ್ಸ್​ ಅಥವಾ ರೀಲ್ಸ್​​ ಮೇಕಿಂಗ್​ಗೆ ಪ್ರೋತ್ಸಾಹಿಸ ಬಾರದೆಂದು ತನ್ನ ಅಧಿಕೃತ ಖಾತೆಯಿಂದ ಮಾಡಲಾಗಿರುವ ಎಕ್ಸ್​ ಪೋಸ್ಟ್​​ನಲ್ಲಿ ತಿಳಿಸಿದೆ.


    ಮುಂಬೈ ಲೋಕಲ್ ಟ್ರೈನ್‌ಗಳಲ್ಲಿ ಜನರು ನೃತ್ಯ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಮಹಿಳೆಯೊಬ್ಬರು ಬೆಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇತ್ತೀಚೆಷ್ಟೆ ವೈರಲ್​ ಆಗಿತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts