More

    ಮಧ್ಯ ಪ್ರದೇಶದಲ್ಲಿ ಐಫಾ 2020: ಸಲ್ಮಾನ್​, ದೀಪಿಕಾ, ಕತ್ರಿನಾ ಕೈಫ್​ರಿಂದ ಇಂದು ಸುದ್ದಿಗೋಷ್ಠಿ

    ಭೋಪಾಲ್​: ಬಾಲಿವುಡ್​ನ ಅತ್ಯಂತ ಪ್ರಸಿದ್ಧ ಅವಾರ್ಡ್​ ಫಂಕ್ಷನ್​ ಆಗಿರುವ ಐಫಾ ಅವಾರ್ಡ್ಸ್​ ಈ ಬಾರಿ ಮಧ್ಯಪ್ರದೇಶದಲ್ಲಿ ನಡೆಯಲಿದೆ. ಇದೇ ಮೊದಲನೇ ಬಾರಿಗೆ ಮಧ್ಯ ಪ್ರದೇಶದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಅದರ ಕುರಿತಾಗಿ ಇಂದು ರಾಜ್ಯದ ಮುಖ್ಯಮಂತ್ರಿ ಮತ್ತು ಬಾಲಿವುಡ್​ನ ಸ್ಟಾರ್​ ನಟ, ನಟಿಯರಿಂದ ಸುದ್ದಿಗೋಷ್ಠಿ ನಡೆಯಲಿದೆ.

    2019ರಲ್ಲಿ ಮೊಟ್ಟ ಮೊದಲನೆ ಬಾರಿಗೆ ಮುಂಬೈನಲ್ಲಿ ಐಫಾ ಅವಾರ್ಡ್​ ಫಂಕ್ಷನ್​ ನಡೆದಿತ್ತು. ಈ ವರ್ಷ ಮಧ್ಯಪ್ರದೇಶದಲ್ಲಿ ಕಾರ್ಯಕ್ರಮ ನಡೆಯಲಿದ್ದು, ರಾಜಧಾನಿ ಭೋಪಾಲ್​ ಅಥವಾ ವ್ಯಾವಹಾರಿಕ ರಾಜಧಾನಿಯಾಗಿರುವ ಇಂದೋರ್​ನಲ್ಲಿ ಕಾರ್ಯಕ್ರಮವನ್ನು ಮಾಡಲಾಗುವುದು ಎನ್ನಲಾಗಿದೆ. ಇಂದು ಸಂಜೆ ಐದು ಗಂಟೆಗೆ ಭೋಪಾಲ್​ನಲ್ಲಿ ಸುದ್ದಿಗೋಷ್ಠಿ ನಡೆಯಲಿದ್ದು, ಮುಖ್ಯಮಂತ್ರಿ ಕಮಲ್​ ನಾಥ್​, ನಟ ಸಲ್ಮಾನ್​ ಖಾನ್​, ನಟಿಯರಾದ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್​ ಸೇರಿದಂತೆ ಅನೇಕರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

    ಇಂದಿನ ಸುದ್ದಿಗೋಷ್ಠಿಯ ಪೋಸ್ಟರ್​ನ್ನು ಐಫಾ ಅವಾರ್ಡ್ಸ್​ನ ಅಧಿಕೃತ ಖಾತೆಯಲ್ಲಿ ಟ್ವೀಟ್​ ಮಾಡಲಾಗಿದೆ. ಕಳೆದ 20 ವರ್ಷಗಳಿಂದ ಐಫಾ ಅವಾರ್ಡ್ಸ್​ ಕಾರ್ಯಕ್ರಮ ನಡೆಯುತ್ತಲಿದ್ದು, ಬಾಲಿವುಡ್​ನಲ್ಲಿ ತೆರೆ ಮೇಲಿನ ಮತ್ತು ತೆರೆ ಹಿಂದಿನ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts