More

    ಅತಿಥಿ ಶಿಕ್ಷಕರು, ಉಪನ್ಯಾಸಕರ ವೇತನ ಹೆಚ್ಚಳ?; ಸರ್ಕಾರ ಒಪ್ಪಿದರೆ ಸಿಹಿ ಸುದ್ದಿ

    ಎನ್.ಎಲ್.ಶಿವಮಾದು ಬೆಂಗಳೂರು
    ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳದ ಭರವಸೆ ಬೆನ್ನಲ್ಲೇ ಸರ್ಕಾರಿ ಶಾಲಾ ಮತ್ತು ಪಿಯು ಕಾಲೇಜುಗಳಲ್ಲಿ ಬೋಧನೆ ಮಾಡುತ್ತಿರುವ ಉಪನ್ಯಾಸಕರ ವೇತನ ಹೆಚ್ಚಳಕ್ಕೂ ಸರ್ಕಾರ ಮುಂದಾಗಿದೆ.

    ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವಸೆ ಸಲ್ಲಿಸಲಾಗಿದ್ದು, ಅನುಮತಿ ಸಿಕ್ಕರೆ ಅತಿಥಿ ಶಿಕ್ಷಕರಿಗೆ ಸಿಹಿ ಸುದ್ದಿ ಸಿಗಲಿದೆ. ಸದ್ಯ ಪ್ರಾಥಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿರುವ ಶಿಕ್ಷಕರಿಗೆ 10 ಸಾವಿರ ರೂ., ಪ್ರೌಢಶಾಲೆ ಶಿಕ್ಷಕರಿಗೆ 10,500 ಮತ್ತು ಪಿಯು ಕಾಲೇಜುಗಳಲ್ಲಿ ಬೋಧಿಸುವವರಿಗೆ 12 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ.

    ಶಿಕ್ಷಕರ ಸಂಘದ ಒತ್ತಾಯದ ಮೇರೆಗೆ ಹಿಂದಿನ ಬಿಜೆಪಿ ಸರ್ಕಾರವು 2022ರಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಕ್ರಮವಾಗಿ ಇದ್ದ 8 ಸಾವಿರ ರೂ. ಮತ್ತು 8,500ಕ್ಕೆ ತಲಾ 2 ಸಾವಿರ ರೂ. ಮತ್ತು ಪಿಯು ಉಪನ್ಯಾಸಕರಿಗೆ 9 ಸಾವಿರದಿಂದ 3 ಸಾವಿರ ರೂ. ಸೇರಿಸಿ 12 ಸಾವಿರಕ್ಕೆ ಹೆಚ್ಚಿಸಿತ್ತು. ಮತ್ತಷ್ಟು ಹೆಚ್ಚಳ ಮಾಡಬೇಕೆಂಬುದು ಶಿಕ್ಷಕರ ಆಗ್ರಹವಾಗಿದೆ.

    ಇಲಾಖೆ ಹಂತದಲ್ಲಿ ಚರ್ಚೆ: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ತಲಾ 2 ಸಾವಿರ ರೂ.ಮತ್ತು ಪಿಯು ಉಪನ್ಯಾಸಕರಿಗೆ 3 ಸಾವಿರ ರೂ. ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಂಬಂಧ ಇಲಾಖೆ ಹಂತದಲ್ಲಿ ಚರ್ಚೆ ನಡೆಸಲಾಗಿದೆ.

    ನಿರಂತರ ಬೇಡಿಕೆ: ಪದವಿ ಕಾಲೇಜು ಅತಿಥಿ ಉಪನ್ಯಾಸಕರಿಗೆ ಕಳೆದ 2 ವರ್ಷದಲ್ಲಿ ದುಪ್ಪಟ್ಟು ವೇತನ ಹೆಚ್ಚಳ ಮಾಡಲಾಗಿದೆ. ನಾವು ಕೂಡ ತುಂಬಾ ಕಡಿಮೆ ವೇತನಕ್ಕೆ ಕರ್ತವ್ಯ ಮಾಡುತ್ತಿದ್ದೇವೆ. ಆದ್ದರಿಂದ ಕನಿಷ್ಠ ವೇತನ ನಿಗದಿ ಮಾಡಬೇಕೆಂಬುದು ಅತಿಥಿ ಶಿಕ್ಷಕರ ನಿರಂತರ ಬೇಡಿಕೆಯಾಗಿತ್ತು. ಅದರಂತೆ, ಈಗ ಶಿಕ್ಷಣ ಇಲಾಖೆಯು ಬೇಡಿಕೆ ಈಡೇರಿಸುವ ಮನಸ್ಸು ಮಾಡಿದೆ.

    ಶೇ.5 ಕೃಪಾಂಕ ನೀಡುವುದು, ದೆಹಲಿ, ಪಂಜಾಬ್, ಹರಿಯಾಣ ಮಾದರಿಯಲ್ಲಿ ಕಾಯಂಗೊಳಿಸುವುದೂ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂಬುದು ಅತಿಥಿ ಶಿಕ್ಷಕರ ಒತ್ತಾಯವಾಗಿದೆ.

    ಬಜೆಟ್​ನಲ್ಲಿ ಘೋಷಣೆ ಸಾಧ್ಯತೆ: ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬಜೆಟ್​ಪೂರ್ವ ಸಭೆಯಲ್ಲಿಯೂ ಚರ್ಚೆ ನಡೆದಿದೆ ಎಂದು ತಿಳಿದುಬಂದಿದ್ದು, ಆಯವ್ಯಯದಲ್ಲಿ ಘೋಷಣೆ ಯಾಗುವ ನಿರೀಕ್ಷೆ ಹೊಂದಲಾಗಿದೆ.

    ಸರ್ಕಾರಿ ಶಾಲಾ ಅತಿಥಿ ಶಿಕ್ಷಕರು ಮತ್ತು ಪಿಯು ಉಪನ್ಯಾಸಕರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಒಪ್ಪಿಗೆ ನೀಡಿದರೆ, ವೇತನ ಹೆಚ್ಚಳ ಮಾಡಲಾಗುತ್ತದೆ.

    | ರಿತೇಶ್​ಕುಮಾರ್ ಸಿಂಗ್, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts