More

    ವೇತನಕ್ಕೆ ಹೆಚ್ಚಿನ ಹಣ ಬಿಡುಗಡೆಗೊಳಿಸಿ

    ಕೋಹಳ್ಳಿ: ಆರ್ಥಿಕ ಸಾಮಾಜಿಕ ಭದ್ರತೆ ಇಲ್ಲದೆ ದಿನಪೂರ್ತಿ ಕೆಲಸ ನಿರ್ವಹಿಸುತ್ತಿರುವ ಗ್ರಾಪಂ ಸಿಬ್ಬಂದಿ, ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಗ್ರಾಪಂ ಕಾರ್ಯಾಲಯದ ಎದುರು ಶುಕ್ರವಾರ ಭಿತ್ತಿಪತ್ರ ಪ್ರದರ್ಶಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಮೌನ ಪ್ರತಿಭಟನೆ ನಡೆಸಲಾಯಿತು.

    ಗ್ರಾಪಂ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಡಗಿ ಮಾತನಾಡಿ, ಕಾರ್ಮಿಕ ದಿನಾಚರಣೆಗೆ ಅರ್ಥ ಬರಬೇಕಾದರೆ ಪಂಚಾಯಿತಿ ನೌಕರರ ವಾರ್ಷಿಕ ವೇತನಕ್ಕೆ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಆಶಾ ಕಾರ್ಯಕರ್ತೆ ಶೋಭಾ ಬಡಚಿ ಮಾತನಾಡಿ, ಕೋವಿಡ್-19 ನಿಯಂತ್ರಣ ಕರ್ತವ್ಯ ಮುಗಿಯುವವರೆಗೂ ಮಾಸಿಕ 10 ಸಾವಿರ ವಿಶೇಷ ಪ್ರೋತ್ಸಾಹಧನ ನೀಡಬೇಕು. ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ ನೀಡಬೇಕು ಎಂದು ಆಗ್ರಹಿಸಿದರು.

    ವಾಟರ್‌ಮನ್ ಹನುಮಂತ ಸತ್ತಿ, ಪ್ರಕಾಶ ಸಿಂಗೆ, ಕಲ್ಮೇಶ ಸತ್ತಿ, ಸಾಗರ ಕೇಸ್ಕರ, ಕಾಶೀನಾಥ ಬೇವಿನಗಿಡದ, ಸಿದ್ಧ್ದರಾಮೇಶ್ವರ ಮೋಟಗಿ, ಗೀತಾ ಕುರಾಡೆ, ಶೋಭಾ ಪತ್ತಾರ, ಮಂಗಲ ಕನ್ನಾಳ, ಸುನಂದಾ ಚಿಕ್ಕಟ್ಟಿ, ಶಾಂತಾ ಬಿರಾದಾರ, ಜಿ.ಎಸ್.ಪೋತದಾರ, ಮೀನಾಕ್ಷಿ ಕನ್ನಾಳ, ಆಶಾ ಕಾರ್ಯಕರ್ತೆಯರಾದ ಈಶ್ವರಿ ಮುಧೋಳ, ಸೀಮಾ ಝರೆ, ಲಕ್ಷ್ಮೀ ಝರೆ, ರಾಜಶ್ರೀ ಸತ್ತಿ, ಜಮುನಾ ಕನ್ನಾಳ, ಮಂಜುಳಾ ಗುರಪ್ಪಗೋಳ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts