More

    ಮಹಿಳೆಯರಿಗಾಗಿ ಸಖಿ ಮತಗಟ್ಟೆ ಸ್ಥಾಪನೆ

    ಯಲಬುರ್ಗಾ: ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮಹಿಳೆಯರಿಗಾಗಿ ಸ್ಥಾಪಿಸಲಾದ ಸಖಿ ಮತಗಟ್ಟೆಗೆ ಚುನಾವಣಾಧಿಕಾರಿ ಕೆ.ವಿ.ಕಾವ್ಯಾರಾಣಿ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಈ ಮತಗಟ್ಟೆ (ಪಿಂಕ್) ಪ್ರತ್ಯೇಕವಾಗಿ ಮಹಿಳೆಯರಿಗಾಗಿ ಸಿದ್ಧಪಡಿಸಲಾಗುತ್ತಿದೆ. ಮಹಿಳಾ ಮತದಾರರ ಗಮನ ಸೆಳೆಯುವ ಸಲುವಾಗಿ ಪೇಂಟಿಂಗ್ ಮಾಡಿಸಲಾಗುತ್ತಿದೆ. ಮತದಾನ ಪ್ರತಿಯೊಬ್ಬರ ಹಕ್ಕಾಗಿದ್ದು, ಪ್ರಜಾಪ್ರಭುತ್ವದ ಯಶಸ್ವಿಗೆ ತಪ್ಪದೆ ಚಲಾಯಿಸಬೇಕು.ನನ್ನ ಮತ-ನನ್ನ ಹಕ್ಕು.. ಹೀಗೆ ಹಲವಾರು ರೀತಿಯ ಗಮನ ಸೆಳೆಯುವಂಥ ಗೋಡೆ ಬರಹಗಳು, ಚಿತ್ರಗಳನ್ನು ಬಿಡಿಸಲಾಗುತ್ತಿದೆ. ಇದು ಆಕರ್ಷಣಿಯ ಕೇಂದ್ರವಾಗಲಿದೆ ಎಂದರು. ಪಪಂ ಮುಖ್ಯಾಧಿಕಾರಿ ಪ್ರಕಾಶ ಮಠದ, ಸಿಬ್ಬಂದಿ ರಾಮಣ್ಣ, ಸುಭಾಷ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts