More

    ಲಾಕ್​ಡೌನ್​ನಲ್ಲೇ ಮುಗೀತು ಸಖತ್ ಸಂಗೀತ

    ಬೆಂಗಳೂರು: ‘ಚಮಕ್’ ಮೂಲಕ ಮೋಡಿ ಮಾಡಿದ್ದ ಸುನಿ- ಗಣೇಶ್ ಜೋಡಿ ‘ಸಖತ್’ ಮೂಲಕ ಮತ್ತೆ ಒಂದಾಗಿರುವುದು ಗೊತ್ತಿರುವ ವಿಚಾರ. ಸರಳ ಮುಹೂರ್ತವನ್ನೂ ಮುಗಿಸಿಕೊಂಡಿದ್ದ ಈ ಸಿನಿಮಾ, ಚಿತ್ರೀಕರಣಕ್ಕೂ ಚಾಲನೆ ನೀಡಿತ್ತು. ಮೊದಲ ಹಂತವಾಗಿ 15 ದಿನಗಳ ಶೂಟಿಂಗ್ ಸಹ ಮಾಡಿಕೊಂಡಿತ್ತು. ಆದರೆ. ಕರೊನಾ ಲಾಕ್​ಡೌನ್ ಘೋಷಣೆ ಆಗಿದ್ದೇ ತಡ, ಚಿತ್ರೀಕರಣವನ್ನೇ ನಿಲ್ಲಿಸಿತು ಚಿತ್ರತಂಡ. ಹಾಗಂತ ಸಿನಿಮಾ ಕೆಲಸಗಳಿಗೆ ಬ್ರೇಕ್ ಹಾಕಲಿಲ್ಲ. ಬದಲಿಗೆ ಆ ಅವಧಿಯಲ್ಲಿಯೇ ಚಿತ್ರದ ಸಂಗೀತಕ್ಕೆ ಸಂಬಂಧಿಸಿದ ಒಂದಷ್ಟು ಕೆಲಸಗಳನ್ನು ಮುಗಿಸಿಕೊಂಡಿದೆ.

    ಇದನ್ನೂ ಓದಿ: ‘ಕರೊನಾ ಹೋರಾಟದ ಮಧ್ಯೆ ಕಂಡುಬಂತು ದೇಶದ ಒಗ್ಗಟ್ಟು…’- ವಿಡಿಯೋ ಶೇರ್​ ಮಾಡಿ, ‘ಪ್ರಣಾಮಗಳು’ ಎಂದ್ರು ಪ್ರಧಾನಿ…

    ಹೌದು, ಈ ಹಿಂದೆ ‘ಚಮಕ್’ ಚಿತ್ರಕ್ಕೆ ಸಂಗೀತ ನೀಡಿದ್ದ ಜೂಡಾ ಸ್ಯಾಂಡಿ ‘ಸಖತ್’ಗೂ ರಾಗ ಸಂಯೋಜಿಸುತ್ತಿದ್ದಾರೆ. ಒಟ್ಟು ನಾಲ್ಕು ಹಾಡುಗಳು ಎರಡು ಬಿಟ್​ಗಳಿರಲಿದ್ದು, ನಾಲ್ಕು ಹಾಡುಗಳ ಕೆಲಸ ಮುಕ್ತಾಯವಾಗಿದೆಯಂತೆ. ‘ಸಹಜವಾಗಿ ಲಾಕ್​ಡೌನ್ ಇಲ್ಲದಿದ್ದರೆ, ನಾಲ್ಕು ಹಾಡುಗಳ ಟ್ಯೂನ್ ಮುಗಿಯಲು ಹೆಚ್ಚು ಸಮಯ ಬೇಕಾಗುತ್ತಿತ್ತು. ಆದರೆ, ಇದೀಗ ಒಂದು ತಿಂಗಳ ಅವಧಿಯಲ್ಲಿ ನಾವು ಟ್ಯೂನ್ ಕೆಲಸವನ್ನು ಅಂತಿಮ ಮಾಡಿದ್ದೇವೆ. ವಿಡಿಯೋ ಕಾಲ್ ಮೂಲಕವೇ ನಾನು ಮತ್ತು ಜೂಡಾ ಸ್ಯಾಂಡಿ ತಿಂಗಳುಗಟ್ಟಲೇ ಚರ್ಚೆ ಮಾಡಿದ್ದೇವೆ. ಫ್ರೆಶ್ ಟ್ಯೂನ್​ಗಾಗಿ ಜೂಡಾಗೆ ಸಖತ್ ಕಾಟ ಕೊಟ್ಟಿದ್ದೀನಿ’ ಎಂದು ಟ್ಯೂನ್ ಹುಟ್ಟಿದ ಬಗೆ ಹೇಳಿಕೊಳ್ಳುತ್ತಾರೆ ಸುನಿ.

    ಸದ್ಯ ಲಾಕ್​ಡೌನ್ ಮುಂದುವರೆದಿರುವುದರಿಂದ ಶೂಟಿಂಗ್ ಸ್ಥಗಿತಗೊಂಡಿದೆ. ಹಾಗಾಗಿ ಚಿತ್ರೀಕರಣ ಹೊರತುಪಡಿಸಿ ಸಣ್ಣಪುಟ್ಟ ಕೆಲಸಗಳನ್ನು ಮುಗಿಸಿಕೊಳ್ಳುವುದು ಸುನಿ ಪ್ಲಾ್ಯನ್. ‘ಭರಾಟೆ’ ಸಿನಿಮಾ ಖ್ಯಾತಿಯ ಸುಪ್ರಿತ್, ‘ಸಖತ್’ಗೆ ಬಂಡವಾಳ ಹೂಡುತ್ತಿದ್ದು, ಬಹುಭಾಷೆಗಳಲ್ಲಿ ನಟಿಸಿದ ಅನುಭವ ಇರುವ ಸುರಭಿ ಮೊದಲ ಬಾರಿ ಸ್ಯಾಂಡಲ್​ವುಡ್​ಗೆ ಆಗಮಿಸಿ ಗಣೇಶ್​ಗೆ ಜೋಡಿಯಾಗಿದ್ದಾರೆ.

    14 ದಿನ ಶೂಟಿಂಗ್ ಮಾಡಿಕೊಂಡಿದ್ದನ್ನು ಬಿಟ್ಟರೆ ಬೇರಾವುದು ಡೆವಲಪ್​ವೆುಂಟ್ ಆಗಿಲ್ಲ. ಆದರೆ, ಲಾಕ್​ಡೌನ್ ಘೋಷಣೆ ಆಗಿದ್ದರಿಂದ ಆ ಅವಧಿಯಲ್ಲಿ ನಾನು ಮತ್ತು ಜೂಡಾ ಸ್ಯಾಂಡಿ ಸೇರಿ ಸಂಗೀತಕ್ಕೆ ಸಂಬಂಧಿಸಿದ ಕೆಲಸಗಳನ್ನು ಮುಗಿಸಿಕೊಂಡೆವು.

    | ಸುನಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts