More

    ವಿಶ್ವೇಶ್ವರಾಯ ಕಬ್ಬಿಣ್ಣ ಮತ್ತು ಉಕ್ಕು ಕಾರ್ಖಾನೆ ಘಟಕ ಮುಚ್ಚುವುದಿಲ್ಲ- ಸೈಲ್ ಸ್ಪಷ್ಟೀಕರಣ

    ಕೋಲ್ಕತ: ಸರ್ಕಾರಿ ಸ್ವಾಮ್ಯದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL)ನ ಅಧೀನದಲ್ಲಿದ್ದು ನಷ್ಟದಲ್ಲಿ ಕಾರ್ಯಾಚರಿಸುತ್ತಿರುವ ಯಾವುದೇ ಘಟಕಗಳನ್ನು ಮುಚ್ಚುವ ಇರಾದೆ ಇಲ್ಲ.ಈ ಘಟಕಗಳನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ಕಂಪನಿ ಇದ್ದು, ಒಂದೊಮ್ಮೆ ಅದನ್ನು ಖರೀದಿಸಲು ಯಾರೂ ಮುಂದೆ ಬಂದಿಲ್ಲ ಎಂದಾದರೆ, ಮುಚ್ಚುವುದಿಲ್ಲ ಎಂದು ಅದರ ಅಧ್ಯಕ್ಷ ಅನಿಲ್ ಕುಮಾರ್ ಚೌಧರಿ ಸೋಮವಾರ ಸ್ಪಷ್ಟಪಡಿಸಿದ್ದಾರೆ.

    ಇದಕ್ಕೂ ಮೊದಲು, ಪಶ್ಚಿಮ ಬಂಗಾಳದ ಅಲ್ಲೋಯ್​ ಸ್ಟೀಲ್ಸ್ ಪ್ಲಾಂಟ್​(ಎಎಸ್​ಪಿ), ತಮಿಳುನಾಡಿನ ಸೇಲಂ ಸ್ಟೀಲ್ ಪ್ಲಾಂಟ್​ (ಎಸ್​ಎಸ್​ಪಿ), ಕರ್ನಾಟಕದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಘಟಕಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಈ ಮೂರು ಘಟಕಗಳ ಒಟ್ಟು ನಷ್ಟದ ಪ್ರಮಾಣ ಕಳೆದ ಹಣಕಾಸು ವರ್ಷದಲ್ಲಿ 370 ಕೋಟಿ ರೂಪಾಯಿ ಆಗಿತ್ತು.ಈ ಮೂರು ಕಂಪನಿಗಳಲ್ಲಿ ಒಟ್ಟು 1,972 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

    ಕಳೆದ ವರ್ಷ ಜುಲೈನಲ್ಲಿ ಡಿಪಾರ್ಟ್​ಮೆಂಟ್ ಆಫ್ ಇನ್​ವೆಸ್ಟ್​ಮೆಂಟ್ ಆ್ಯಂಡ್ ಪಬ್ಲಿಕ್ ಅಸೆಟ್ ಮ್ಯಾನೇಜ್​ಮೆಂಟ್ ಈ ಮೂರು ಘಟಕಗಳ ಮಾರಾಟಕ್ಕೆ ಬಿಡ್​ ಆಹ್ವಾನಿಸಿತ್ತು. ಮೂರು ಬಾರಿ ಇದರ ಅಂತಿಮ ದಿನಾಂಕವನ್ನು ಮುಂದೂಡಲಾಗಿದೆ. ಹೂಡಿಕೆ ಹಿಂತೆಗೆತದ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದ್ದು, ಈ ವಿಶೇಷಗಳ ಘಟಕಗಳನ್ನು ಮುಚ್ಚುವುದಿಲ್ಲ ಎಂದು ಅನಿಲ್ ಕುಮಾರ್ ಚೌಧರಿ ಹೇಳಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts