More

    ಅಪ್ಪ ಮಗನ ಕೃಷಿ ಪ್ರೀತಿ; ಸೈಫ್​ ಜತೆ ಜಮೀನಿನಲ್ಲಿ ನೀರು ಹಾಯಿಸ್ತಿದ್ದಾನೆ ತೈಮೂರ್​

    ಮುಂಬೈ: ಬಾಲಿವುಡ್​ ನಟ ಸೈಫ್​ ಅಲಿಖಾನ್ ಸಿನಿಮಾದ ಜತೆಗೆ ಹಲವು ಉದ್ಯಮದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಸೈಫ್​ಗೆ ಕೃಷಿ ಮೇಲೆ ಅಷ್ಟೇ ಪ್ರಮಾಣದ ಒಲವೂ ಇದೆ. ಅದಕ್ಕೆ ಸಾಕ್ಷ್ಯ ಎಂಬಂತೆ ಇದೀಗ ಒಂದಷ್ಟು ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಜಮೀನಿನಲ್ಲಿ ನಿಂತು ನೀರು ಹಾಯಿಸುವ ಕಾಯಕಕ್ಕೆ ಮುಂದಾಗಿದ್ದಾರೆ.

    ಇದನ್ನೂ ಓದಿ: PHOTOS| ಪತಿ ಜತೆಗಿನ ಚುಂಬನದ ಫೋಟೋ ಶೇರ್ ಮಾಡಿಕೊಂಡ ಕಾಜಲ್​

    ಲಾಕ್​ಡೌನ್​ ಬಳಿಕ ಮನೆಯಲ್ಲಿ ಕಾಲಕಳೆಯುವುದರ ಜತೆಗೆ ಜಮೀನಿನಲ್ಲಿಯೂ ಸೈಫ್​ ಅಲಿಖಾನ್​ ಮತ್ತು ಕುಟುಂಬ ಕಾಲಕಳೆದಿದೆ. ಈಗಲೂ ಬಿಡುವಿನ ಸಮಯದಲ್ಲಿ ಹೆಚ್ಚು ಹೊತ್ತು ತೋಟದಲ್ಲಿಯೇ ಇರುತ್ತಾರೆ. ಹಾಗೆ ತೋಟದಲ್ಲಿ ಕೆಲಸ ಮಾಡುತ್ತಿರುವ ಒಂದಷ್ಟು ಫೋಟೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ.

    ಇದನ್ನೂ ಓದಿ: ರಾಜಕೀಯದಿಂದ ದೂರಾದರೆ ಅಪ್ಪ-ಮಗ? ವಿಜಯ್​ ಕುಟುಂಬದಲ್ಲಿ ಬಿರುಕು!

    ಪುತ್ರ ತೈಮೂರ್​ ಅಲಿಖಾನ್​ ತಂದೆಯ ಜತೆಗೆ ನೀರು ಹಾಯಿಸುತ್ತಿದ್ದಾನೆ. ನೀರಾಟವಾಡುತ್ತ ಸಮಯ ಕಳೆದಿದ್ದಾನೆ. ತಂದೆ ಮಗನ ಈ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿವೆ. ಸದ್ಯ ಧರ್ಮಶಾಲಾದಲ್ಲಿ ಬೀಡುಬಿಟ್ಟಿರುವ ಸೈಫ್​, ಭೂತ್​ ಪೊಲೀಸ್​ ಸಿನಿಮಾದ ಶೂಟಿಂಗ್​ ಮುಗಿಸಿಕೊಂಡೇ ಮುಂಬೈನತ್ತ ಆಗಮಿಸಲಿದ್ದಾರೆ. ಬಂಟಿ ಔರ್ ಬಬ್ಲಿ 2 ಚಿತ್ರದ ಕೆಲಸ ಮುಗಿದಿದ್ದು, ಪ್ರಭಾಸ್​ ಜತೆಗೆ ಆದಿಪುರುಷ್ ಚಿತ್ರದಲ್ಲಿಯೂ ನಟಿಸಲಿದ್ದಾರೆ. (ಏಜೆನ್ಸೀಸ್​)

    ಮತ್ತೆ ಜತೆಯಾಗ್ತಿದ್ದಾರೆ ಬಿಗ್​ ಬಿ, ಅಜಯ್​ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts