More

  ಸಾಯಿಬಾಬಾ ಮಂದಿರ ಶೀಘ್ರ ಲೋಕಾರ್ಪಣೆ

  ರಾಮದುರ್ಗ: ಮುಳ್ಳೂರ ಗುಡ್ಡದಲ್ಲಿರುವ ಶಿವನಮೂರ್ತಿ ಶ್ರೀ ರಾಮೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶ ಪ್ರವಾಸೋದ್ಯಮ ಕ್ಷೇತ್ರವಾಗಿಸಲು
  ಕೆಆರ್‌ಎಸ್ ಮಾದರಿ ಕಾರಂಜಿ ನಿರ್ಮಾಣ ಸೇರಿ ವಿವಿಧ ಯೋಜನೆ ಹಾಕಿಕೊಳ್ಳಲಾಗುವುದು ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.

  ಪಟ್ಟಣದ ಹೊರವಲಯದ ರಾಮೇಶ್ವರ ಕ್ಷೇತ್ರದಲ್ಲಿ 7ನೇ ವರ್ಷದ ಮಹಾಶಿವರಾತ್ರಿ ಆಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಯಿಬಾಬಾ ಮಂದಿರದ ಕಾಮಗಾರಿ ತೀವ್ರಗತಿಯಲ್ಲಿ ನಡೆದಿದ್ದು, ಮುಂದಿನ ವರ್ಷ ಲೋಕಾರ್ಪಣೆಗೊಳಿಸಲಾಗುವುದು. ದೇವಸ್ಥಾನ ಸಂಪೂರ್ಣ ಸಂಗಮರಿ ಕಲ್ಲಿನಿಂದ ನಿರ್ಮಾಣವಾಗುತ್ತಿದ್ದು, ರಾಜ್ಯದಲ್ಲೇ ಮಾದರಿ ಸಾಯಿಬಾಬಾ ಮಂದಿರ ಇದಾಗಲಿದೆ ಎಂದರು.

  ಶಿವ ಪ್ರತಿಷ್ಠಾಪನಾ ಸೇವಾ ಸಮಿತಿ ಉಪಾಧ್ಯಕ್ಷ ಗಿರೀಶ ನೇಮಗೌಡರ, ಸದಸ್ಯರಾದ ಸುರೇಶ ತ್ತೇಪುರ, ರಾಜಶೇಖರ ತೋಳಗಟ್ಟಿ, ಪ್ರದೀಪ ಪಟ್ಟಣ, ಜಮುನಾ ಪಟ್ಟಣ, ಮೋಹನ ಪಟ್ಟಣ, ವಿಜಯ ಶೆಟ್ಟಿ, ಮಹಮ್ಮದ್ ಶೇಫಿ ಬೆಣ್ಣಿ, ಜಿ.ಬಿ. ರಂಗನಗೌಡ್ರ, ಸೋಮಶೇಖರ ಸಿದ್ಲಿಂಗಪ್ಪನವರ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts