More

    ಸಾಯಿ ಸೇವಾ ಪರಿವಾರದ ಕಾರ್ಯ ಶ್ಲಾಘನೀಯ

    ಚಿಕ್ಕೋಡಿ: ಕರೊನಾ ವೈರಸ್ ತಡೆಗೆ ಸರ್ಕಾರ ಹೊರಡಿಸಿರುವ ಲಾಕ್‌ಡೌನ್ ಅವಧಿ ಮುಗಿಯುವವರೆಗೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿರುವ ಬಡವರು, ಕಾರ್ಮಿಕರಿಗೆ ನಿತ್ಯ ಅನ್ನಸಂತರ್ಪಣೆ ಮಾಡುತ್ತಿರುವ ಸಾಯಿ ಸೇವಾ ಪರಿವಾರದ ಕಾರ್ಯ ಶ್ಲಾಘನೀಯ ಎಂದು ನ್ಯಾಯವಾದಿ ಧನ್ಯಕುಮಾರ ಗುಂಡೆ ಹೇಳಿದ್ದಾರೆ.

    ಪಟ್ಟಣದ ಚಿಕ್ಕೋಡಿ ಮಹಿಳಾ ಸೊಸೈಟಿ ಪದಾಧಿಕಾರಿಗಳು ಸಂಪಾದನಾ ಚರಮೂರ್ತಿ ಮಠ ಹಾಗೂ ಶ್ರೀ ಸಾಯಿ ಸೇವಾ ಪರಿವಾರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಒಂದು ದಿನದ ಅನ್ನ ಸಂತರ್ಪಣೆಗೆ ಶುಕ್ರವಾರ ಧನಸಹಾಯದ ಚೆಕ್‌ಅನ್ನು ಸಂಪಾದನಾ ಸ್ವಾಮೀಜಿಗೆ ವಿತರಿಸಿ ಮಾತನಾಡಿದರು. ಅನ್ನದಾನ ಮಾಡುವ ಭಾಗ್ಯ ಕರೊನಾ ವೇಳೆ ಶ್ರೀಮಠದ ಮುಖೇನ ನಮಗೆಲ್ಲ ದೊರೆತಿರುವುದು ಹೆಮ್ಮೆ ತಂದಿದೆ ಎಂದರು. ಸಾಯಿ ಸೇವಾ ಪರಿವಾರದ ಅಧ್ಯಕ್ಷ ಜಗದೀಶ ಕವಟಗಿಮಠ ಮಾತನಾಡಿ, ವಿವಿಧ ಬಡಾವಣೆಗಳಲ್ಲಿನ ಬಡವರು, ಕೂಲಿ ಕಾರ್ಮಿಕರಿಗೆ 12 ದಿನಗಳಿಂದ ನಿತ್ಯ ಅನ್ನ ಸಂತರ್ಪಣೆ ಜರುಗುತ್ತಿದೆ. ಲಾಕ್‌ಡೌನ್ ಮುಗಿಯುವವರೆಗೂ ಅನ್ನ ಸಂತರ್ಪಣೆ ಸೇವೆ ಇರಲಿದೆ ಎಂದರು. ಪ್ರತಿ ದಿನ ಕನಿಷ್ಠ 6000ಕ್ಕೂ ಹೆಚ್ಚಿನ ಕುಟುಂಬಕ್ಕೆ ಊಟದ ಪ್ಯಾಕೆಟ್‌ಗಳನ್ನು ವಿತರಿಸಲಾಗುತ್ತಿದ್ದು, ಶ್ರೀಮಠ ಹಾಗೂ ಸಾಯಿ ಸೇವಾ ಪರಿವಾರದ ಜತೆಗೆ ದಾನಿಗಳು ಸಹ ಕೈಜೋಡಿಸಿದ್ದಾರೆ ಎಂದು ತಿಳಿಸಿದರು. ಸಂಪಾದನಾ ಸ್ವಾಮೀಜಿ, ಚಿಕ್ಕೋಡಿ ಮಹಿಳಾ ಸೊಸೈಟಿಯ ಪದಾಧಿಕಾರಿಗಳಾದ ನಿರ್ಮಲಾ ಗುಂಡೆ, ಶ್ರೀದೇವಿ ಮಗದುಮ್ಮ, ಯೋಗಾ ಸದಲಗೆ, ರಜನಿ ರೋಖಡೆ, ಕಾಜಲ ಗುಂಡೆ, ಕಾರ್ಯದರ್ಶಿ ವಿಜಯೇಂದ್ರ ಕಟ್ಟಿ, ವರ್ಧಮಾನ ಸದಲಗೆ, ರಣಜಿತ ಸಂಗ್ರೊಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts