More

    ಸಾಯಿ ಪರಿವಾರ ಕಾರ್ಯ ಶ್ಲಾಘನೀಯ

    ಚಿಕ್ಕೋಡಿ: ಸಾಯಿ ಸೇವಾ ಪರಿವಾರ 17 ವರ್ಷಗಳಿಂದ ವಾರ್ಷಿಕೋತ್ಸವ ನಿಮಿತ್ತ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಹಮ್ಮಿಕೊಳ್ಳುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ವಿಧಾನ ಪರಿಷತ್ ಸರ್ಕಾರದ ಮಾಜಿ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.

    ಪಟ್ಟಣದ ಶಿರಡಿ ಸಾಯಿಬಾಬಾ ಮಂದಿರದ 17ನೇ ವಾರ್ಷಿಕೋತ್ಸವ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
    16 ವರ್ಷಗಳಲ್ಲಿ ಸಾಯಿ ಸೇವಾ ಪರಿವಾರ 450 ಸಾಮೂಹಿಕ ಉಚಿತ ಮದುವೆ, ಉದ್ಯೋಗ ಮೇಳ ಆಯೋಜಿಸಿ, 1,600 ಯುವಕರಿಗೆ ಉದ್ಯೋಗ, ಆರೋಗ್ಯ ತಪಾಸಣೆ ಶಿಬಿರ ಮೂಲಕ 3,700 ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿ, ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂದರು.

    ಸಾನ್ನಿಧ್ಯ ವಹಿಸಿದ್ದ ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಸಾಯಿ ಪರಿವಾರ ಭಾರತೀಯ ಸಂಸ್ಕೃತಿ ಉಳಿಸುವ ಕಾರ್ಯ ಮಾಡುತ್ತಿದೆ ಎಂದರು. ಚಿಕ್ಕೋಡಿ ಸಂಪಾದನ ಚರಮೂರ್ತಿ ಮಠದ ಸಂಪಾದನ ಸ್ವಾಮೀಜಿ ವಧು-ವರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

    ಶೇಗುಣಸಿ ವಿರಕ್ತಮಠದ ಡಾ.ಮಹಾಂತ ಪ್ರಭು ಸ್ವಾಮೀಜಿ, ಬೆಳಗಾವಿ ಕಾರಂಜಿಮಠದ ಡಾ.ಶಿವಯೋಗಿ ದೇವರು ಇದ್ದರು.
    31 ಜೋಡಿ ನವ ದಂಪತಿ ಭಾಗಿಯಾಗಿದ್ದರು. ಬೆಳಗ್ಗೆ ಸಾಯಿ ಮಂದಿರದಲ್ಲಿ ಸತ್ಯಸಾಯಿ ಪೂಜೆ ಹಾಗೂ ರುದ್ರಾಭಿಷೇಕ ನೆರವೇರಿಸಲಾಯಿತು. ಸಹಕಾರಿ ಧುರೀಣ ಡಿ.ಟಿ.ಪಾಟೀಲ, ವೈದ್ಯ ಚಂದ್ರಕಾಂತ ಕುರಬೆಟ್ಟಿ, ಆರ್.ಎಂ.ಹಿರೇಮಠ, ಬಾಳಪ್ಪ ವಟಗುಡೆ ಅವರನ್ನು ಸತ್ಕರಿಸಲಾಯಿತು.

    ಜಗದೀಶ ಕವಟಗಿಮಠ, ಆದಿನಾಥ ಶೆಟ್ಟಿ, ರಮೇಶ ಕುಡತರಕರ, ಸುಭಾಸ ಕವಲಾಪುರೆ, ಎಸ್.ಬಿ.ಪಡಲಾಳೆ, ಮಹೇಶ ಭಾತೆ, ಶರಥಚಂದ್ರ ಕವಟಗಿಮಠ, ಅಜಯ ಕವಟಗಿಮಠ, ಸತೀಶ ಅಪ್ಪಾಜಿಗೋಳ, ಪುರಸಭೆ ಸದಸ್ಯ ಪ್ರವೀಣ ಕಾಂಬಳೆ, ಸಂಜಯ ಕವಟಗಿಮಠ ಅಶೋಕ ಪಾಠಕ, ಕಿರಣ ಗುಂಡೆ, ಭಾಸ್ಕರ ಶೆಟ್ಟಿ, ಮಡಿವಾಳಪ್ಪ ಬಸ್ಸರಗಿ, ಷಡಕ್ಷರಿ ಮೂಗೇರಿ, ಸಂಜಯ ಗಿಡವೀರ, ಲೋಕಪ್ಪ ದುಂಬಾಳಿ, ಶ್ರೀಧರ ದೀಕ್ಷಿತ, ರಾಘವೇಂದ್ರ ಡಂಬಳ, ಶಿವಜಾತ ಮಿರ್ಜೆ, ಶೇಖರ ಚಿತ್ತವಾಡಗಿ, ವೀಣಾ ಕವಟಗಿಮಠ, ಕದಳಿ ಮಹಿಳಾ ಸದಸ್ಯೆಯರು ಇತರರಿದ್ದರು. ಡಾ.ಸುರೇಶ ಉಕ್ಕಳಿ ನಿರೂಪಿಸಿದರು. ಸಿಎಲ್‌ಇ ಸಂಸ್ಥೆಯ ಆಡಳಿತಾಧಿಕಾರಿ ಸಾಗರ ಬಿಸ್ಕೋಪ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts