More

    ನಾನೂ “ಲವ್”​ ಮಾಡಿದ್ದೆ ಎಂದ ನಟಿ ಸಾಯಿ ಪಲ್ಲವಿ: ಇದೇ ಮೊದಲ ಬಾರಿಗೆ ತನ್ನ ಪ್ರೀತಿ ಬಗ್ಗೆ ಹೇಳಿಕೊಂಡಿದ್ದು ಹೀಗೆ!

    ಚೆನ್ನೈ: ಇದೇ ಮೊದಲ ಬಾರಿಗೆ ತನ್ನ ಪ್ರೀತಿಯ ಬಗ್ಗೆ ನಟಿ ಸಾಯಿ ಪಲ್ಲವಿ ಬಹಿರಂಗವಾಗಿ ಮಾತನಾಡಿದ್ದು, ತಾನೂ ಒಬ್ಬನನ್ನು ಪ್ರೀತಿಸಿ ಲವ್​ ಲೆಟರ್​ ಕೂಡ ಬರೆದಿದ್ದೆ ಎಂದು ಹೇಳಿಕೊಂಡಿದ್ದಾರೆ.

    ಸದ್ಯ ಸಾಯಿ ಪಲ್ಲವಿ ವಿರಾಟ ಪರ್ವಂ ಚಿತ್ರದ ಕುರಿತು ಮಾತನಾಡುತ್ತಿದ್ದ ವೇಳೆ ತಮ್ಮ ಪ್ರೀತಿ ಕುರಿತು ವಿಷಯವೊಂದನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ.ಸದ್ಯ ಯಾವುದೇ ವ್ಯಕ್ತಿಯ ಜತೆ ಸಾಯಿ ಪಲ್ಲವಿ ಹೆಸರು ಥಳಕು ಹಾಕಿಕೊಂಡಿಲ್ಲ. ಎಲ್ಲರಿಂದಲೂ ಸದಾ ಅಂತರ ಕಾಯ್ದುಕೊಳ್ಳುವ ಈ ನಟಿ ಯಾರೊಂದಿಗೂ ತಮ್ಮ ಹೆಸರು ಕೇಳಿಬರುವುದು ತಮಗೆ ಇಷ್ಟವಿಲ್ಲ ಎಂದು ಈ ಹಿಂದೆ ಹಲವು ಬಾರಿ ಹೇಳಿಕೊಂಡಿದ್ದಾರೆ.

    ಆದರೆ ತಾನೂ ಕೂಡ ಒಬ್ಬರನ್ನು ಪ್ರೀತಿಸಿದ್ದೆ, ಅದಾದ ಬಳಿಕ ಮತ್ತೊಮ್ಮೆ ಚಿಂತಿಸಲು ಕೂಡ ಹೋಗಲಿಲ್ಲ ಎಂದಿದ್ದಾರೆ. ಹಾಗಾದರೆ ಸಾಯಿ ಯಾರನ್ನು ಪ್ರೀತಿಸುತ್ತಿದ್ದರು, ಈಗಲೂ ಲವ್​ನಲ್ಲಿದ್ದಾರೆ ಎಂಬ ಬಗ್ಗೆಯೂ ಹೇಳಿದ್ದಾರೆ.

    ಅಂದಹಾಗೆ ತನ್ನ ಶಾಲಾ ದಿನಗಳಲ್ಲಿ ಒಬ್ಬ ಹುಡುಗನಿಗೆ ಲವ್​ ಲೆಟರ್ ಬರೆದಿದ್ದೆ, ಇನ್ನೇನು ಕೊಡಬೇಕು ಎನ್ನುವಷ್ಟರಲ್ಲಿ ನಮ್ಮ ತಂದೆ-ತಾಯಿ ಕೈಗೆ ಸಿಕ್ಕಿಬಿಟ್ಟಿತ್ತು. ಆಗ ನನ್ನ ತಾಯಿ ನನಗೆ ಹೊಡೆದಿದ್ದರು. ಅಂದೇ ಕೊನೇ ಲವ್​ ಕಡೆ ತಿರುಗಿಯೂ ನೋಡಲಿಲ್ಲ ಎಂದು ಹೇಳಿಕೊಂಡಿದ್ದಾರೆ. ರಾಣಾ ದಗ್ಗುಬಾಟಿ ಜತೆ ನಟಿಸಿದ್ದ ವಿರಾಟ ಪರ್ವಂ ಚಿತ್ರ ಜೂನ್​ 17 ರಂದು ಬಿಡುಗಡೆಯಾಗಿತ್ತು. ಈ ಚಿತ್ರ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. (ಏಜೆನ್ಸೀಸ್)

    ಉತ್ತರ ಒಳನಾಡಿನಲ್ಲೂ ಚುರುಕು ಪಡೆದ ಮುಂಗಾರು: ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

    ಭಾರೀ ಮಳೆ, ಹಲವು ಪ್ರದೇಶಗಳು ಜಲಾವೃತ: ಈ ರಾಜ್ಯದಲ್ಲಿ 3 ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts