More

    ಬಾಲಿವುಡ್​ಗೂ ಸಾಯಿ ಪಲ್ಲವಿ ಎಂಟ್ರಿ; ಡಿ-ಗ್ಲಾಮರಸ್ ನಟಿಯ ಷರತ್ತುಗಳು ಏನು?

    ಸಾಯಿ ಪಲ್ಲವಿಈ ಹೆಸರು ಸರಳವಾಗಿರುವ ಹೆಣ್ಣು ಮಕ್ಕಳನ್ನು ಇಷ್ಟಪಡುವ ಹುಡುಗರ ಎದೆಬಡಿದ ಹೆಚ್ಚಿಸುತ್ತದೆ. ಇತ್ತೀಚೆಗೆ, ನ್ಯಾಚುರಲ್ ಸ್ಟಾರ್ ನಟ ನಾನಿ ಜೊತೆಗೆ ತೆಲುಗಿನ ಶ್ಯಾಮ್ ಸಿಂಘ ರಾಯ್ಚಿತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಸಾಯಿ ಪಲ್ಲವಿ ಅವರು ತಮಿಳು, ತೆಲುಗು ಮತ್ತು ಮಲಯಾಳಂ ಇಂಡಸ್ಟ್ರಿಯಲ್ಲಿ ಚಿರಪರಿಚಿತರು. ಪಲ್ಲವಿ ಅನೇಕ ಸ್ಟಾರ್ ನಾಯಕ ನಟರೊಂದಿಗೆ ನಟಿಸಿದ್ದು, ತಮ್ಮ ಸರಳ ವ್ಯಕ್ತಿತ್ವ ಮತ್ತು ಡಿಗ್ಲಾಮರಸ್ ರೋಲ್​​ಗಳಿಂದ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ ಎನ್ನಬಹುದು. ಅಂತಹ ನಟಿ, ಇತ್ತೀಚಿನ ಸಂದರ್ಶನವೊಂದರಲ್ಲಿ, ಗ್ಲಾಮರಸ್ ಪ್ರಪಂಚ ಎಂದೇ ಕರೆಸಿಕೊಳ್ಳುವ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವ ತಮ್ಮ ಬಯಕೆಯ ಬಗ್ಗೆ ಮಾತನಾಡಿದ್ದಾರೆ. ಇದರಿಂದ ಸದ್ಯದಲ್ಲೇ, ನಟಿ ಹಿಂದಿಗೆ ಪಾದಾರ್ಪಣೆ ಮಾಡುವ ಎಲ್ಲಾ ಸಾಧ್ಯತೆಗಳು ಇವೆ ಎಂಬಂತೆ ಕಾಣುತ್ತಿದೆ. 

    ಬಾಲಿವುಡ್​ಗೂ ಸಾಯಿ ಪಲ್ಲವಿ ಎಂಟ್ರಿ; ಡಿ-ಗ್ಲಾಮರಸ್ ನಟಿಯ ಷರತ್ತುಗಳು ಏನು?

    ಹೌದು, ನಟಿ ಸಾಯಿ ಪಲ್ಲವಿ ಸೌತ್​ನಲ್ಲಿ ಸಿನಿಮಾ ಮಾಡಲು ತಾವು ಹಾಕುವ ಷರತ್ತುಗಳಿಂದಲೇ ಸಿಕ್ಕಾಪಟ್ಟೆ ಫೇಮಸ್ ಆದ್ರು. ಹೀಗಿರುವಾಗ, ಬಾಲಿವುಡ್​ನಲ್ಲಿ ನಟಿಸಲು ಯಾವುದೇ ಷರತ್ತು ಹಾಕಿಲ್ವಾ ಎಂಬ ಪ್ರಶ್ನೆ ಸಹಜವಾಗಿಯೇ ಅವರ ಕಟ್ಟಾಭಿಮಾನಿಗಳನ್ನು ಕಾಡುತ್ತೆ. ಅಂದಹಾಗೆ, ತಾವು ಹಿಂದಿ ಚಿತ್ರದಲ್ಲಿ ನಟಿಸಲು ಇಷ್ಟಪಡುತ್ತೇನೆ, ಆದರೆ ಅದಕ್ಕೆ ಚಿತ್ರದ ಸ್ಕ್ರಿಪ್ಟ್ ತುಂಬಾನೆ ಮುಖ್ಯ ಎಂಬ ಷರತ್ತು ಈಗಲೂ ನಟಿ ವಿಧಿಸಿದ್ದಾರೆ. ಜೊತೆಗೆ, ಆ ಚಿತ್ರ ಸ್ತ್ರೀ ಆಧಾರಿತ ಸಿನಿಮಾ ಆದರೂ ಯಾವ ತೊಂದರೆಯಿಲ್ಲ ಎಂದು ಸಹ ಹೇಳಿಕೊಂಡಿದ್ದಾರೆ.
    ಒಂದೊಳ್ಳೆ ಸ್ಕ್ರಿಪ್ಟ್ ಸಿಕ್ಕರೆ, ದು ಬಾಲಿವುಡ್ ಅಥವಾ ಇನ್ನಾವುದೇ ಇಂಡಸ್ಟ್ರಿ ಎಂಬುದು ಮುಖ್ಯವಲ್ಲ, ಯಾವುದೇ ಸ್ಕ್ರಿಪ್ಟ್ ಅನ್ನು ಆಯ್ಕೆ ಮಾಡುವ ಯಾವುದೇ ನಟರು ಸಾರ್ವಕಾಲಿಕವಾಗಿ ವಿಭಿನ್ನವಾದ ಚಿತ್ರದಲ್ಲಿ ನಟಿಸಲು ಬಯಸುತ್ತಾರೆ. ನಾನು ಹಾಗೆಯೇ ಎಂದು ತಿಳಿಸಿದ್ದಾರೆ ಪಲ್ಲವಿ. ಸಾಯಿ ಪಲ್ಲವಿ ಸದ್ಯ ಬಾಹುಬಲಿಯ ಖ್ಯಾತ ನಟ ರಾಣಾ ದಗ್ಗುಬಾಟಿ ಜತೆ ಮುಂಬರುವ ತೆಲುಗು ಚಿತ್ರ ವಿರಾಟ ಪರ್ವಂನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿ ಪ್ರಿಯಾಮಣಿ, ನಂದಿತಾ ದಾಸ್, ಜರೀನಾ ವಹಾಬ್ ಮತ್ತು ನವೀನ್ ಚಂದ್ರ ಸಹ ಪ್ರಮುಖ ಪಾತ್ರಗಳಲ್ಲಿ ಮಿಂಚಲಿದ್ದಾರೆ.

    ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಜೀವನ ಹೇಗಿತ್ತು ಗೊತ್ತಾ? ವಿಡಿಯೋ ವೈರಲ್!

    ವಿಚ್ಛೇದನದ ಬಳಿಕ ಸಮಂತಾ ದಿಲ್ ಖುಷ್? ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಹಾಟ್ ನಟಿ!

    ವೈನ್ ಗೋಸ್ಕರ ಸಾಮಾನ್ಯನಂತೆ ಅಲೆದಾಡಿದ ಅಲ್ಲು ಅರ್ಜುನ್; ಇಂದಿಗೂ ವಿಡಿಯೋ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts