More

    ಸಾಹಿತ್ಯ ಸಮ್ಮೇಳನಕ್ಕೆ ಕರೊನಾ ಛಾಯೆ

    ಬೆಂಗಳೂರು: ಹಾವೇರಿಯಲ್ಲಿ ನಡೆಯಬೇಕಿರುವ ಎಂಭತ್ತಾರನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೇಲೆ ಕರೊನಾ ಛಾಯೆ ಆವರಿಸಿದೆ.
    ಸೋಂಕು ನಿಯಂತ್ರಣದಲ್ಲಿದ್ದು, ಸರ್ಕಾರದ ಮಾರ್ಗಸೂಚಿಗಳನ್ವಯ ಅವಕಾಶವಾದರೆ ಮಾತ್ರ 2021ರ ಫೆಬ್ರವರಿ 26,27 ಹಾಗೂ 28ರಂದು ಸಮ್ಮೇಳನ ನಡೆಯಲಿದ್ದು, ತಪ್ಪಿದಲ್ಲಿ ಮುಂದಿನ ಕಸಾಪ ಅಧ್ಯಕ್ಷರ ಹೆಗಲಿಗೆ ಹೊಣೆ ಬೀಳಲಿದೆ.

    ಸಾಹಿತ್ಯ ಸಮ್ಮೇಳನಕ್ಕೆ ಕರೊನಾ ಛಾಯೆ
    ಕೃಷ್ಣರಾಜ ಪರಿಷನ್ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕು ಎಂಬುದು ಕಸಾಪದ ಆದ್ಯ ಕರ್ತವ್ಯ. ಈ ಕಾರಣಕ್ಕಾಗಿಯೇ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ವಿಷಯ ಚರ್ಚಿಸಿ ಈಗಾಗಲೆ ದಿನಾಂಕವನ್ನೂ ಅಂತಿಮಗೊಳಿಸಲಾಗಿದೆ. ಈ ಹಿಂದೆ ಒಮ್ಮೆ ಸಮ್ಮೇಳನ ಆಯೋಜಿಸುವುದನ್ನು ತಪ್ಪಿಸಿಕೊಂಡಿದ್ದ ಹಾವೇರಿ ನಾಗರಿಕರೂ ಸಮ್ಮೇಳನ ಆಯೋಜಿಸಲು ಉತ್ಸುಕರಾಗಿದ್ದಾರೆ. ಆದರೆ ಉತ್ಸಾಹವೊಂದರಿಂದಲೇ ಇಷ್ಟು ದೊಡ್ಡ ಸಮ್ಮೇಳನ ನಡೆಸಲು ಸಾಧ್ಯವಿಲ್ಲ.
    ಕರೊನಾ ಸೋಂಕು ನಿಯಂತ್ರಣದಲ್ಲಿರಬೇಕಾದ್ದು ಮೊದಲ ಅಂಶ. ಸೋಂಕು ಹೆಚ್ಚಳವಾದರೆ ಸಮ್ಮೇಳನ ಆಯೋಜಿಸುವ ಮಾತೇ ಇಲ್ಲ. ಇನ್ನು, ಸೋಂಕನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ಸಡಿಲಿಕೆ ಅತ್ಯಾವಶ್ಯಕ. ನಾಗರಿಕರ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಆರೋಗ್ಯ ಇಲಾಖೆ, ಸರ್ಕಾರ ಕೈಗೊಳ್ಳುವ ನಿರ್ಧಾರದ ಮೇಲೆ ಸಮ್ಮೇಳನ ನಡೆಯುವುದು ಖಚಿತವಾಗುತ್ತದೆ ಎಂದರು.

    ವೆಚ್ಚವಿಲ್ಲದ ನಿರ್ಧಾರಗಳು
    ಸಮ್ಮೇಳನ ನಡೆಯುವುದು ಸಂಪೂರ್ಣ ಖಚಿತವಿಲ್ಲವಾದರೂ, ಈ ಕುರಿತ ಸಿದ್ಧತೆಗಳನ್ನು ನಡೆಸಲಾಗುತ್ತದೆ ಎಂದು ಬಳಿಗಾರ್ ಹೇಳಿದರು. ಹಣದ ಖರ್ಚಿಲ್ಲದೆ ಕೈಗೊಳ್ಳುವ ಅನೇಕ ನಿರ್ಧಾರಗಳಿರುತ್ತವೆ. ಉದಾಹರಣೆಗೆ, ಸಮ್ಮೇಳನಕ್ಕೆ ಸ್ಥಳ ಗುರುತಿಸುವಿಕೆ, ಸಮ್ಮೇಳನಾಧ್ಯಕ್ಷರ ಆಯ್ಕೆ ಮುಂತಾದವು. ಕರೊನಾ ಸೋಂಕು ಹೆಚ್ಚಳವಾಗಿ, ಸಮ್ಮೇಳನ ಆಯೋಜಿಸಲು ಸಾರ್ಧಯವಿಲ್ಲವಾದರೆ ಏನೂ ಆತಂಕವಿಲ್ಲ. ಕಸಾಪ ಚುನಾವಣೆ ನಂತರ ಆಯ್ಕೆಯಾಗಿಬರುವ ಹೊಸ ಅಧ್ಯಕ್ಷರು ನಡೆಸುತ್ತಾರೆ. ಸಮ್ಮೇಳನ ಆಯೋಜಿಸಬೇಕು ಎಂಬುದರಲ್ಲಿ ವೈಯಕ್ತಿಕ ನಿರ್ಧಾರ ಏನೂ ಇಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts