More

    ರಾಜಕೀಯ ಸುಳಿಗೆ ಸಿಲುಕಿ ನೊಂದಿರುವೆ

    ಕೋಲಾರ: ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪದಿಂದ ಮತ್ತು ವೇದಿಕೆಗಳಲ್ಲಿ ಭಾಷಣ ವಾಡುವ ವ್ಯಕ್ತಿಗಳಿಂದಲೇ ನಾನು ನಜ್ಜುಗುಜ್ಜಾಗಿದ್ದೇನೆ ಎಂದು ಡಿಸಿಸಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಬೇಸರ ವ್ಯಕ್ತಪಡಿಸಿದರು.

    ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಸಹಕಾರ ಒಕ್ಕೂಟ, ಡಿಸಿಸಿ ಬ್ಯಾಂಕ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂ ಹಾಗೂ ನಗರದ ಕಾರಂಜಿಕಟ್ಟೆಯ ನರ್ಮದಾ ಮಹಿಳಾ ಪತ್ತಿನ ಸಹಕಾರ ಸಂದ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ 67ನೇ ಸಹಕಾರ ಸಪ್ತಾಹದಲ್ಲಿ ವಾತನಾಡಿದರು.

    ಸಹಕಾರ ಕ್ಷೇತ್ರದಲ್ಲಿ ರಾಜಕೀಯ ನುಸುಳಬಾರದೆಂಬುದು ನನ್ನ ಅಭಿಪ್ರಾಯವೂ ಹೌದು, ಆದರೆ ಕಳೆದ 7 ವರ್ಷಗಳಿಂದ ರಾಜಕೀಯ ಸುಳಿಯಲ್ಲಿ ಸಿಕ್ಕಿ ನೊಂದಿರುವೆ, ನನ್ನ ಕಷ್ಟ ದೇವರಿಗೆ ವಾತ್ರ ಗೊತ್ತು. ರಾಜಕೀಯ ಹಸ್ತಕ್ಷೇಪ ನಿಲ್ಲಿಸುವುದು ಸುಲಭವಲ್ಲ, ಒಂದು ವೇಳೆ ಬದಲಾವಣೆ ತರಬೇಕಾದರೆ ಮಹಿಳೆಯರು ದಂಗೆ ಎದ್ದಾಗ ವಾತ್ರ ಸಾಧ್ಯವಾಗಬಹುದು ಎಂದು ತಿಳಿಸಿದರು.

    ಡಿಸಿಸಿ ಬ್ಯಾಂಕ್ ಇಂದು ಉಳಿದಿದ್ದರೆ ಅದಕ್ಕೆ ಮಹಿಳೆಯರು ನೀಡುತ್ತಿರುವ ಸಹಕಾರವೇ ಕಾರಣವಾಗಿದೆ. ತಾಯಂದಿರ ಆಶೀರ್ವಾದ ಇರುವವರೆಗೆ ಬ್ಯಾಂಕಿಗೆ ಯಾವುದೇ ಅಪಾಯವಿಲ್ಲ ಎಂದು ಭಾವುಕರಾದರು.

    ಸಹಕಾರ ರಂಗದಲ್ಲಿ ಎಲ್ಲ ವರ್ಗಕ್ಕೆ ಪ್ರಾತಿನಿಧ್ಯತೆ ಸಿಗಬೇಕೆಂಬುದು ನನ್ನ ಆಶಯವಾಗಿದೆ, ಈಗಾಗಲೇ ಬದಲಾವಣೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರು, ದಲಿತರಿಗೆ ಸೂಕ್ತ ಅವಕಾಶ ಸಿಗಲಿದೆ ಎಂದರು.

    ಸಾಲ ಮನ್ನಾ ಮನಸ್ಥಿತಿ ಹೋಗಲಿ: ಸಹಕಾರ ಕ್ಷೇತ್ರ ಇರೋದು ಕೇವಲ ಸಾಲ ನೀಡಲು ಇಲ್ಲವೇ ಸಾಲ ಮನ್ನಾಕ್ಕೆ ಆಗ್ರಹಿಸುವುದಕ್ಕಲ್ಲ. ರಾಜಕಾರಣಿಗಳಲ್ಲಿ ಸಾಲ ಮನ್ನಾ ಎಂಬ ಮನಸ್ಥಿತಿ ಹೋಗಬೇಕೆಂದು ಕಾರ್ಯನಿರತ ಪತ್ರಕರ್ತರ ಸಂದ ರಾಜ್ಯ ಸಮಿತಿ ನಿರ್ದೇಶಕ ಬಿ.ಪಿ.ಗೋಪಿನಾಥ್ ಸೂಚ್ಯವಾಗಿ ನುಡಿದರು.

    ಜಿಲ್ಲೆಯಲ್ಲಿ ರೈತರು, ಮಹಿಳೆಯರು ಸ್ವಾವಲಂಬನೆಯಿಂದ ಬದುಕಲು ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್ ಸಹಕಾರ ನೀಡುತ್ತಿವೆ, ಈ ಎರಡೂ ಸಹಕಾರ ಸಂಸ್ಥೆಗಳು ಬಲವರ್ಧನೆಗೊಳ್ಳದಿದ್ದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದವು ಎಂದರು.

    ಟಿಎಪಿಸಿಎಂಎಸ್‌ಗಳು ನಿರೀಕ್ಷೆಯಂತೆ ಕಾರ್ಯ ನಿರ್ವಹಿಸುತ್ತಿಲ್ಲ, ಜನತಾ ಬಜಾರ್‌ಗಳನ್ನು ಜಿಲ್ಲೆಯಾದ್ಯಂತ ತೆರೆದಿದ್ದರೆ ಅನೇಕರ ಬದುಕಿಗೆ ಆಸರೆಯಾಗುತ್ತಿತ್ತು, ಕರೊನಾ ಹಿನ್ನೆಲೆಯಲ್ಲಿ ಅನೇಕ ಯುವಕರು ನಗರ ತೊರೆದು ಸ್ವಗ್ರಾಮದಲ್ಲಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದು, ಈ ಯುವಕರನ್ನು ಸೆಳೆಯಲು ಸಹಕಾರಿಗಳು ಬದ್ಧತೆ ತೋರಬೇಕೆಂದರು.

     

    ಸಹಕಾರ ತತ್ವ ಪಾಲನೆಯಾಗಿಲ್ಲ:
    ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಬಲಿಷ್ಠವಾಗಿದೆ ಎಂಬುದು ಭಾಷಣಕ್ಕೆ ಸೀಮಿತವಾಗದಿರಲಿ. ಅಲ್ಪಸಂಖ್ಯಾತರು ಮತ್ತು ಎಲ್ಲ ವರ್ಗದ ಅಬಲರಿಗೆ ಪ್ರಾತಿನಿಧ್ಯ ಸಿಕ್ಕಾಗ ವಾತ್ರ ಸಹಕಾರ ತತ್ವಕ್ಕೆ ಮಹತ್ವ ಹೆಚ್ಚುತ್ತದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂದ ಅಧ್ಯಕ್ಷ ಕೆ.ಎಸ್.ಗಣೇಶ್ ಪ್ರತಿಪಾದಿಸಿದರು.

    ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಲ್.ಅನಿಲ್‌ಕುವಾರ್, ಯಲವಾರ ಸೊಣ್ಣೆಗೌಡ, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ಉರಿಗಿಲಿ ರುದ್ರಸ್ವಾಮಿ, ಎಸ್.ಸುರೇಶ್, ಬಿ.ರಮೇಶ್, ಟಿ.ಕೆ.ಬೈರೇಗೌಡ, ಕೋಲಾರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿ.ಆರ್.ಶಶಿಧರ್, ನರ್ಮದಾ ಮಹಿಳಾ ಪತ್ತಿನ ಸಹಕಾರ ಸಂದ ಉಪಾಧ್ಯಕ್ಷೆ ಅಂಬಿಕಾ, ಸಹಕಾರ ಸಂಗಳ ಉಪ ನಿಬಂಧಕ ಸಿದ್ಧನಗೌಡ ಎನ್.ನೀಲಪ್ಪನವರ್, ಲೆಕ್ಕಪರಿಶೋಧನಾ ಇಲಾಖೆ ಉಪನಿರ್ದೇಶಕಿ ಜಿ.ವಿ.ಶಾಂತಕುವಾರಿ, ಜಿಲ್ಲಾ ಸಹಕಾರ ಒಕ್ಕೂಟದ ಸಿಇಒ ಕೆ.ಎಂ.ಭಾರತಿ, ಪರ್ತಕರ್ತರ ಸಹಕಾರ ಸಂದ ಸಿಇಒ ಜಿ.ಗಂಗಾಧರ್ ಇನ್ನಿತರರು ಉಪಸ್ಥಿತರಿದ್ದರು.

     

    ಯುವಕರು, ಮಹಿಳೆಯರು ಹೆಚ್ಚಾಗಿ ಸಹಕಾರ ಕ್ಷೇತ್ರ ಪ್ರವೇಶಿಸಬೇಕು. ಬಡವರ ಪರವಾಗಿ ಕೆಲಸ ವಾಡುವ ಮೂಲಕ ನಾಯಕತ್ವದ ಗುಣ ಬೆಳೆಸಿಕೊಳ್ಳಬಹುದು.
    ಆರ್.ಅರುಣಾ, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕಿ

    ಗೋವಿಂದಗೌಡ ಅವರ ಸಾರಥ್ಯದಲ್ಲಿ ಡಿಸಿಸಿ ಬ್ಯಾಂಕ್ ಸದೃಢವಾಗಿ ಬೆಳೆದಿದೆ. ವಾಣಿಜ್ಯ ಬ್ಯಾಂಕ್‌ಗಳಿಗಿಂತ ಡಿಸಿಸಿ ಬ್ಯಾಂಕ್ ರೈತರು ಮತ್ತು ಮಹಿಳೆಯರನ್ನು ಆರ್ಥಿಕವಾಗಿ ಗಟ್ಟಿಗೊಳಿಸುತ್ತಿದೆ.
    ವಿ.ಮುನಿರಾಜು, ಅಧ್ಯಕ್ಷರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts