More

    165 ಎಸೆತಗಳಲ್ಲಿ 407 ರನ್‌, ಯುವ ಆಟಗಾರನ ಸರ್ವಕಾಲಿಕ ದಾಖಲೆ

    ಶಿವಮೊಗ್ಗ: ಸಾಗರದ ಯುವ ಆಟಗಾರನೊಬ್ಬ ಕೇವಲ 165 ಎಸೆತಗಳಲ್ಲಿ ಬರೋಬ್ಬರಿ 407 ರನ್‌ಗಳನ್ನು ಬಾರಿಸುವ ಕ್ರಿಕೆಟ್ ಇತಿಹಾಸದಲ್ಲೇ ಸರ್ವಕಾಲಿಕ ದಾಖಲೆ ಸೃಷ್ಟಿ ಮಾಡಿದ್ದಾರೆ. 16 ವರ್ಷದೊಳಗಿನ ಆಟಗಾರ ಒಂದೇ ಪಂದ್ಯದಲ್ಲಿ 48 ಬೌಂಡರಿ ಮತ್ತು 24 ಸಿಕ್ಸರ್ ಸಿಡಿಸಿ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾನೆ.
    ಸಾಗರ ಕ್ರಿಕೆಟ್ ಕ್ಲಬ್‌ನ ತನ್ಮಯ ಮಂಜುನಾಥ ವಿಶಿಷ್ಟ ದಾಖಲೆ ಮಾಡಿದ ಆಟಗಾರ. ಶಿವಮೊಗ್ಗ ಹೊರವಲಯದ ಪೆಸಿಟ್ ಕಾಲೇಜಿನ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ಶನಿವಾರ ಕೆಎಸ್‌ಸಿಎ(ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ) 16 ವರ್ಷದೊಳಗಿನ ಅಂತರ ವಲಯ ಪಂದ್ಯಾವಳಿ ಆಯೋಜಿಸಿದ್ದು ಸಾಗರ ಕ್ರಿಕೆಟ್ ಕ್ಲಬ್‌ನ ತನ್ಮಯ್ ಭದ್ರಾವತಿಯ ಎನ್‌ಟಿಸಿಸಿ ತಂಡ ವಿರುದ್ಧ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾನೆ.
    ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸಾಗರ ಕ್ರಿಕೆಟ್ ಕ್ಲಬ್ ತಂಡ 50 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 583 ರನ್ ಗಳಿಸಿತ್ತು. ಅದರಲ್ಲಿ ತನ್ಮಯ್‌ನದ್ದೇ ಸಿಂಹಪಾಲು. ಮೊದಲ ವಿಕೆಟ್‌ಗೆ ನಾಯಕ ಎ.ಅಂಶು (127)ಜತೆಗೂಡಿ 350 ರನ್‌ಗಳ ಜತೆಯಾಟ ನಡೆಸಿದರು. ಇದು ಕೂಡ ಮೊದಲ ವಿಕೆಟ್‌ಗೆ ದಾಖಲೆ ಪಟ್ಟಿಗೆ ಸೇರ್ಪಡೆಗೊಂಡಿತು. ತನ್ಮಯ್ ಕೇವಲ ಬೌಂಡರಿ, ಸಿಕ್ಸರ್‌ಗಳ ಮೂಲಕವೇ 336 ರನ್ ಕಲೆಹಾಕಿದರು.
    ಬೃಹತ್ ಮೊತ್ತ ಬೆನ್ನತ್ತಿದ್ದ ಭದ್ರಾವತಿಯ ಎನ್‌ಟಿಸಿಸಿ ತಂಡ ಕೇವಲ 73 ರನ್‌ಗಳಿಗೆ ಆಲೌಟ್ ಆಗಿದ್ದು ಸಾಗರ ಕ್ರಿಕೆಟ್ ಕ್ಲಬ್‌ 510 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಸಾಗರ ಕ್ರಿಕೆಟ್ ಕ್ಲಬ್‌ನ ಎ.ಅಂಶು 5 ವಿಕೆಟ್ ಮತ್ತು ಅಜಿತ್ ನಾಲ್ಕು ವಿಕೆಟ್ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts