More

    ನೈಋತ್ಯ ರೈಲ್ವೆಯಿಂದ ಮಹಿಳಾ ಪ್ರಯಾಣಿಕರ ಸುರಕ್ಷತೆ

    ಹುಬ್ಬಳ್ಳಿ : ರೈಲುಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಗಾಗಿ ನೈಋತ್ಯ ರೈಲ್ವೆ ವಲಯವು ಹಲವಾರು ಕ್ರಮಗಳನ್ನು ಕೈಗೊಂಡಿದೆ.

    ಈ ಕುರಿತು ಪ್ರಕಟಣೆ ನೀಡಿರುವ ನೈಋತ್ಯ ರೈಲ್ವೆ ವಲಯ, ಆರ್​ಪಿಎಫ್ ಮತ್ತು ಸರ್ಕಾರಿ ರೈಲ್ವೆ ಪೊಲೀಸರನ್ನು ಒಳಗೊಂಡ ರೈಲು ಬೆಂಗಾವಲುಗಳ ತಂಡಗಳು ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸುತ್ತವೆ.

    ನೈಋತ್ಯ ರೈಲ್ವೆಯಿಂದ ನಿತ್ಯ 202 ಎಕ್ಸ್​ಪ್ರೆಸ್ ರೈಲುಗಳು ಸಂಚರಿಸುತ್ತವೆ. ಇದರಲ್ಲಿ 35-40 ರೈಲುಗಳನ್ನು ಆರ್​ಪಿಎಫ್ ಪಡೆಯು ಬೆಂಗಾವಲು ಮಾಡುತ್ತದೆ ಮತ್ತು 69-70 ರೈಲುಗಳನ್ನು ಜಿಆರ್​ಪಿ ಪಡೆಯು ಬೆಂಗಾವಲು ಮಾಡುತ್ತದೆ. ನಿತ್ಯ ಶೇ. 50ಕ್ಕೂ ಹೆಚ್ಚು ಎಕ್ಸ್​ಪ್ರೆಸ್ ರೈಲುಗಳಲ್ಲಿ ಬೆಂಗಾವಲು ಪಡೆ ಕಾರ್ಯನಿರ್ವಹಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

    ಭದ್ರತೆಯನ್ನು ಹೆಚ್ಚಿಸಲು ನೈಋತ್ಯ ರೈಲ್ವೆಯ ನಿಲ್ದಾಣಗಳಲ್ಲಿ 835 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿಯಾಗಿ 228 ನಿಲ್ದಾಣಗಳಲ್ಲಿ ಅಂದಾಜು 2,700 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಯೋಜನೆ ಇದೆ.

    ಮಹಿಳೆಯರಿಗೆ ಕಾಯ್ದಿರಿಸಿದ ಬೋಗಿಗಳಲ್ಲಿ ಪ್ರಯಾಣಿಸುವ ಯಾವುದೇ ಅನಧಿಕೃತ ಪುರುಷರನ್ನು ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಲಾಗುತ್ತದೆ. 2022ರಲ್ಲಿಈ ರೀತಿಯ 88 ಪ್ರಕರಣಗಳು ದಾಖಲಾಗಿ, 18,450 ರೂ.ಗಳ ದಂಡ ಸಂಗ್ರಹಿಸಲಾಗಿದೆ ಹಾಗೂ 2023ರಲ್ಲಿ 145 ಪ್ರಕರಣಗಳು ದಾಖಲಾಗಿ, 25,500 ರೂ.ಗಳ ದಂಡ ಸಂಗ್ರಹಿಸಲಾಗಿದೆ.

    ಏಕಾಂಗಿ ಮಹಿಳಾ ಪ್ರಯಾಣಿಕರನ್ನು ರಕ್ಷಿಸುವುದರ ಜತೆಗೆ, ಆಪರೇಷನ್ ನನ್ಹೆ ಫರಿಶ್ತೆ ಅಡಿ ರೈಲಿನಲ್ಲಿ ಪ್ರಯಾಣಿಸುವ ಅಪ್ರಾಪ್ತ ಮಕ್ಕಳ ಸುರಕ್ಷತೆಗೂ ಆದ್ಯತೆ ನೀಡುತ್ತದೆ. 2022 ರಲ್ಲಿ ಒಟ್ಟು 169 ಬಾಲಕಿಯರು ಮತ್ತು 709 ಬಾಲಕರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. 2023 ರಲ್ಲಿ 81 ಬಾಲಕಿಯರು ಮತ್ತು 325 ಬಾಲಕರನ್ನು ರಕ್ಷಿಸಿ, ಮಕ್ಕಳ ಕಲ್ಯಾಣ ಕೇಂದ್ರಗಳಿಗೆ ಹಸ್ತಾಂತರಿಸಲಾಗಿದೆ.

    ಆರ್​ಪಿಎಫ್ ತಂಡವು 2022ರಲ್ಲಿ 113 ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿದೆ ಮತ್ತು 74,797 ರೂ.ಗಳ ಮೌಲ್ಯದ ಕದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2023 ರಲ್ಲಿ 33 ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿದೆ ಮತ್ತು 2,81,599 ರೂ.ಗಳ ಮೌಲ್ಯದ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದೆ.

    ಹಾಲುಣಿಸುವ ತಾಯಂದಿರಿಗೆ ಸುರಕ್ಷಿತ ಮತ್ತು ಖಾಸಗಿ ಸ್ಥಳವನ್ನು ಒದಗಿಸಲು ಪ್ರಮುಖ ರೈಲು ನಿಲ್ದಾಣಗಳಲ್ಲಿ ನರ್ಸಿಂಗ್ ಪಾಡ್​ಗಳನ್ನು ಸ್ಥಾಪಿಸಲಾಗಿದೆ. ನೈರ್ಮಲ್ಯದ ಮಹತ್ವ ತಿಳಿಸಲು ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಷಿನ್​ಗಳನ್ನು ಮಹಿಳೆಯರ ಶೌಚಾಲಯಗಳು ಮತ್ತು ರೈಲು ನಿಲ್ದಾಣಗಳಲ್ಲಿ ಕಾಯುವ ಕೊಠಡಿಗಳ ಬಳಿ ಸ್ಥಾಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts