More

    ಚಿಂಚಲಿ ಮಹಿಳಾ, ಪುರುಷರ ತಂಡಕ್ಕೆ ಪ್ರಶಸ್ತಿ ಗರಿ

    ಚಿಕ್ಕೋಡಿ: ಪಟ್ಟಣದ ಕಿವಡ ಮೈದಾನದಲ್ಲಿ ಶುಕ್ರವಾರ ಜರುಗಿದ ಸಂಸದ ಅಣ್ಣಾಸಾಹೇಬ ಜೊಲ್ಲೆ ಎಂಪಿ ಟ್ರೋಫಿ ಪುರುಷ ಹಾಗೂ ಮಹಿಳೆಯರ ಕಬ್ಬಡಿ ಪಂದ್ಯಾವಳಿಯ ಗ್ರಾೃಂಡ್ ಫಿನಾಲೆಯಲ್ಲಿ ಚಿಂಚಲಿಯ ಪುರುಷ ಹಾಗೂ ಮಹಿಳಾ ತಂಡಗಳು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ.

    ಮಹಿಳಾ ವಿಭಾಗದಲ್ಲಿ ನಡೆದ ೈನಲ್ ಪಂದ್ಯಾವಳಿಯಲ್ಲಿ ಜೈ ಮಹಾಕಾಳಿ ಚಿಂಚಲಿ ತಂಡವು, ಅಭಾಜಿ ೌಂಡೇಷನ್ ಭಿರಡಿ ತಂಡವನ್ನು 14 ಅಂಕಗಳ ಅಂತರದಿಂದ ಮಣಿಸಿ ಪ್ರಥಮ ಸ್ಥಾನದೊಂದಿಗೆ 51 ಸಾವಿರ ರೂ. ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು. ಅಭಾಜಿ ೌಂಡೇಷನ್ ತಂಡ ಎರಡನೇ ಸ್ಥಾನದೊಂದಿಗೆ 31 ಸಾವಿರ ರೂ. ನಗದು ಹಾಗೂ ಟ್ರೋಫಿ ಪಡೆಯಿತು. ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ ಮುಗಳಖೋಡದ ಸಿದ್ದರಾಮೇಶ್ವರ ತಂಡಕ್ಕೆ 15 ಸಾವಿರ ರೂ. ನಗದು ಹಾಗೂ ಟ್ರೋಫಿ ನೀಡಿ ಗೌರವಿಸಲಾಯಿತು.

    ಪುರುಷರ ವಿಭಾಗದ ೈನಲ್ ಪಂದ್ಯದಲ್ಲಿ ಅಕಾಡೆಮಿ ಚಿಂಚಲಿ ತಂಡವು ಮೇಖಳಿಯ ನ್ಯೂ ಸ್ಪೋರ್ಟ್ಸ್ ತಂಡವನ್ನು 10 ಅಂಕಗಳ ಅಂತರದಿಂದ ಮಣಿಸಿ ಪ್ರಥಮ ಸ್ಥಾನದೊಂದಿಗೆ 51 ಸಾವಿರ ರೂ. ನಗದು ಹಾಗೂ ಟ್ರೋಫಿ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿತು. ಎರಡನೇ ಸ್ಥಾನ ಪಡೆದ ನ್ಯೂ ಸ್ಪೋಟ್ಸ್ ಮೇಖಳಿ ತಂಡ 31 ಸಾವಿರ ರೂ. ನಗದು ಹಾಗೂ ಟ್ರೋಫಿ ಪಡೆದರೆ, ಮೂರನೆಯ ಸ್ಥಾನ ಪಡೆದ ಜೈ ಹನುಮಾನ ಶಿಂಧಿಹಟ್ಟಿ ತಂಡ 15 ಸಾವಿರ ರೂ. ನಗದು ಹಾಗೂ ನಾಲ್ಕನೇ ಸ್ಥಾನ ಪಡೆದ ಓಂ ಬಸವ ಸ್ಪೋರ್ಟ್ಸ್ ಕ್ಲಬ್ ಯರಗಟ್ಟಿ ತಂಡಕ್ಕೆ 15 ಸಾವಿರ ರೂ. ನಗದು ಹಾಗೂ ಟ್ರೋಫಿ ನೀಡಿ ಗೌರವಿಸಲಾಯಿತು.

    ೈನಲ್ ಪಂದ್ಯಾವಳಿಗೆ ಶಾಸಕಿ ಶಶಿಕಲಾ ಜೊಲ್ಲೆ ಅವರು ಚಾಲನೆ ನೀಡಿ ಮಾತನಾಡಿ, ಅಣ್ಣಾಸಾಹೇಬ ಜೊಲ್ಲೆ ಅವರ ನೇತತ್ವದ ಭಾರತೀಯ ಸಂಸ್ಕೃತಿಯ ಅಪ್ಪಟ ಗ್ರಾಮೀಣ ಕ್ರೀಡೆ ಆಯೋಜಿಸಿರುವುದು ಶ್ಲಾಘನೀಯ ಎಂದರು.

    ಬಹುಮಾನ ವಿತರಿಸಿ ಮಾತನಾಡಿದ ಸಂಸದ ಅಣ್ಣಾಸಾಹೇಬ ಜೊಲ್ಲೆ, ಪ್ರತಿವರ್ಷ ಎಂಪಿ ಟ್ರೋಫಿ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸುವುದರ ಜತೆಗೆ ಗಾಳಿಪಟ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜೊಲ್ಲೆ ಗ್ರುಪ್‌ನಿಂದ ಆಯೋಜಿಸಲಾಗುವುದು ಎಂದರು.

    ಖಡಕಲಾಟದ ಶಿವಬಸವ ಸ್ವಾಮೀಜಿ, ಆಶಾಜ್ಯೋತಿ ಬುದ್ಧಿಮಾಂಧ್ಯ ಮಕ್ಕಳ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಬೀರೇಶ್ವರ ಸಂಸ್ಥೆಯ ಅಧ್ಯಕ್ಷ ಜಯಾನಂದ ಜಾಧವ, ಸಂಚಾಲಕ ಅಪ್ಪಾಸಾಹೇಬ ಜೊಲ್ಲೆ, ಹಾಲಸಿದ್ಧನಾಥ ಶುಗರ್ಸ್‌ ಅಧ್ಯಕ್ಷ ಎಂ.ಪಿ.ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ವಿಶ್ವನಾಥ ಕಮತೆ, ದುಂಡಪ್ಪ ಭೆಂಡವಾಡೆ, ಸಿದ್ರಾಮ ಗಡದೆ, ರವಿ ಹಂಜಿ, ಪ್ರವೀಣ ಕಾಂಬಳೆ, ಸಂಜಯ ಪಾಟೀಲ, ಸಂತೋಷ ಜೋಗಳೆ, ರಾಜ್ಯ ಕಬ್ಬಡಿ ಅಸೋಸಿಯೇಷನ್ ರೇರಿ ಬೋರ್ಡ್‌ನ ಎಂ.ಕೆ.ಶಿರಗುಪ್ಪೆ, ವಿಜಯ ರಾವುತ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts