More

    ವರ್ಷಾಚರಣೆ ವೇಳೆ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ; ಆಟೋ ಚಾಲಕರಿಗೆ ಖಾಕಿ ತಿಳಿವಳಿಕೆ

    ಬೆಂಗಳೂರು: ವರ್ಷಾಚರಣೆ ಬಳಿಕ ಹೆಚ್ಚಿನ ಜನರು ಆಟೋ ಬಳಸುವ ಹಿನ್ನೆಲೆಯಲ್ಲಿ ರಿಕ್ಷಾ ಚಾಲಕರ ಸಭೆ ನಡೆಸಿ ಸಂಚಾರ ಪೊಲೀಸರು ಮುಂಜಾಗೃತಾ ಕ್ರಮ ವಹಿಸುವಂತೆ ಎಚ್ಚರಿಕೆ ನೀಡಿದ್ದಾರೆ.

    31ರ ಮಧ್ಯರಾತ್ರಿ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಆರ್‌ಎಚ್‌ಪಿ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ರೆಸಿಡೆನ್ಸಿ ರಸ್ತೆ, ಕಸ್ತೂರಬಾ ರಸ್ತೆ ಹಾಗೂ ಹೋಟೆಲ್, ಕ್ಲಬ್, ಮಾಲ್‌ಗಳು, ಮನೋರಂಜನಾ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಲಿದ್ದಾರೆ. ವರ್ಷಾಚರಣೆ ಮುಗಿದಮೇಲೆ ರಾತ್ರಿ ಮನೆಗೆ ಹೋಗಲು ಆಟೋ ಬಳಸುತ್ತಾರೆ.

    ಆದರಿಂದ ಕೇಂದ್ರ ವಿಭಾಗ ವ್ಯಾಪ್ತಿಯಲ್ಲಿ ಇರುವ ಆಟೋ ಚಾಲಕರ ಸಂಘಟನೆ ಕಾರ್ಯಕರ್ತರನ್ನು ಮತ್ತು ಆಟೋ ಚಾಲಕರನ್ನು ಕರೆದು ಪೊಲೀಸರು ಸಭೆ ನಡೆಸಿದ್ದಾರೆ. ಮಹಿಳೆ ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ಒತ್ತು ನೀಡಬೇಕು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಚಾಲಕರಿಗೆ ತಿಳುವಳಿಕೆ ಕೊಟ್ಟು ಕಳುಹಿಸಿದ್ದಾರೆ. ಕಾನೂನು ಉಲ್ಲಂಘನೆಯಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ಕೊಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts