More

    ನಿದ್ರಾವಧಿ ಕಡಿಮೆಗೊಳಿಸುವ ಐದು ಮಾರ್ಗಗಳು

    ಎದೆಯುರಿ ಎಂದರೆ ಸಂಪೂರ್ಣ ಅನ್ನನಾಳವು ಆಮ್ಲದಿಂದ ಅಥವಾ ಮತ್ತಾ್ಯವ ಕಾರಣಗಳಿಂದಲೋ ಸುಡುತ್ತಿದೆ ಎಂದರ್ಥ. ಶೇಕಡ ಒಂದಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಯಾವುದೇ ಕೃತಕವಾಗಿ ಸಂಶ್ಲೇಷಿಸಿದ ಅಂಶವು ನೀವು ಸೇವಿಸುವ ಆಹಾರದಲ್ಲಿ ಇದ್ದದ್ದೇ ಆದರೂ ದೇಹಕ್ಕೆ ಅದನ್ನು ಅಳವಡಿಸಿಕೊಳ್ಳುವ ಸಾಮರ್ಥ್ಯವು ತ್ವರಿತವಾಗಿ ಇಳಿಮುಖವಾಗುತ್ತದೆ.

    ನಿದ್ರಾವಧಿ ಕಡಿಮೆಗೊಳಿಸುವ ಐದು ಮಾರ್ಗಗಳುನಿಮಗೆ ಎಷ್ಟು ಗಂಟೆಗಳ ಕಾಲ ನಿದ್ರೆಯ ಅವಶ್ಯಕತೆ ಇದೆ? ನಿದ್ರೆ ಎಂದರೆ ಶರೀರವನ್ನು ಸುಸ್ಥಿತಿಗೊಳಿಸಿಕೊಳ್ಳುವ ಸಮಯ. ಅಂದರೆ ದೇಹವು ತನ್ನ ಕಲ್ಮಶಗಳನ್ನು ತೊಡೆದುಹಾಕಿಕೊಳ್ಳುವ ಸಮಯ. ನಿತ್ಯ ಬದುಕಿನ ಜಂಜಾಟದ ಕಾರಣದಿಂದ ಉಂಟಾಗುವ ಹಾನಿಗಳನ್ನು ದೇಹವು ರಿಪೇರಿ ಮಾಡಿಕೊಂಡು ಸರಿಪಡಿಸಿಕೊಳ್ಳುವ ಸಮಯವಾಗಿದೆ. ಜೀವಕೋಶ ಸ್ತರದಿಂದ ಹಿಡಿದು, ಶಕ್ತಿಯ ಮಟ್ಟ ಹಾಗೂ ಇನ್ನೂ ಇತರ ಅನೇಕ ರೀತಿಗಳಲ್ಲಿ ಸುವ್ಯವಸ್ಥಿತಗೊಳಿಸುವುದಾಗಿದೆ. ರಿಪೇರಿಯ ಪ್ರಮಾಣವು ಎಷ್ಟಿರುವುದೋ ಅದಕ್ಕೆ ತಕ್ಕಂತೆ ರಿಪೇರಿಯ ಅವಧಿಯು ಅಗತ್ಯವಾಗಿ ಇರುತ್ತದೆ. ಬದುಕನ್ನು ಸಾಗಿಸುವಾಗ ನಿಮಗೆ ನೀವು ಉಂಟುಮಾಡಿಕೊಳ್ಳುವ ಹಾನಿಯ ಪ್ರಮಾಣ ಎಷ್ಟು ಎಂಬುದೇ ಪ್ರಶ್ನೆ. ನಿಮ್ಮೊಳಗೆ ತುಂಬ ಘರ್ಷಣೆ ಇದ್ದರೆ ಹಾನಿಯು ಅತಿ ಹೆಚ್ಚು ಪ್ರಮಾಣದಲ್ಲಿ ಇರುತ್ತದೆ. ಶರೀರವ್ಯವಸ್ಥೆಯು ಚೆನ್ನಾಗಿ ಸರಿಹೊಂದಿಕೆಯಾಗಿದ್ದು ಸುವ್ಯವಸ್ಥಿತವಾಗಿದ್ದರೆ, ಆಗ ಘರ್ಷಣೆ ಪ್ರಮಾಣ ಕಡಿಮೆ ಆಗಿರುತ್ತದೆ. ಸಹಜವಾಗಿಯೇ, ರಿಪೇರಿ ಅವಧಿಯೂ ಕಡಿತಗೊಳ್ಳುವುದು.

    ನಿದ್ರಾವಧಿಯನ್ನು ಕಡಿಮೆ ಮಾಡಲು ಏನೆಲ್ಲ ಮಾಡಬೇಕು?

    1) ತಾಜಾ ಆಹಾರದ ಸೇವನೆ: ಮೊದಲನೆಯದಾಗಿ ತಾಜಾ ಆಹಾರವನ್ನು ಸೇವಿಸಬೇಕು. ಯೋಗ ಸಂಪ್ರದಾಯದಲ್ಲಿ ಸರಳವಾದ ತಿಳಿವಳಿಕೆಯೆಂದರೆ ಆಹಾರವನ್ನು ಬೇಯಿಸಿದ ಗರಿಷ್ಠ 90 ನಿಮಿಷಗಳೊಳಗೆ ಅದನ್ನು ಸೇವಿಸಬೇಕು. ಅದರ ನಂತರ ಜಡತ್ವವು ಪ್ರಾರಂಭವಾಗುತ್ತದೆ. ಹೆಚ್ಚಿನಂಶ ಜಡತ್ವ ಇರುವ ಆಹಾರವನ್ನು ಸೇವಿಸಿದರೆ, ಶರೀರವು ಆಲಸ್ಯವನ್ನು ಹೊಂದುವುದು. ಈ ಜಡತ್ವವನ್ನು ಹೋಗಲಾಡಿಸಿಕೊಳ್ಳಲು ಹೆಚ್ಚಿನ ಶಕ್ತಿಯ ವ್ಯಯದ ಅಗತ್ಯ ಇರುವುದರಿಂದ ದೀರ್ಘ ಅವಧಿಯ ನಿದ್ದೆ ಬೇಕಾಗುತ್ತದೆ. ಇದರಿಂದ ಜಡರಾಗುವಿರಿ. ಶರೀರಕ್ಕೆ ನೀಡುತ್ತಿರುವ ಆಹಾರದ ಗುಣಮಟ್ಟ ಉತ್ತಮವಾಗಿಲ್ಲದ ಕಾರಣ, ದೇಹದ ಪುನರ್ ವ್ಯವಸ್ಥೆಯ ಸಮಯವು ಅಧಿಕವಾಗುವುದು, ಅಂದರೆ ಕೀಳುಮಟ್ಟದ ಇಂಧನವನ್ನು ಹಾಕುತ್ತಿರುವಿರಿ.

    ಆಹಾರವನ್ನು ಬೇಯಿಸಿದಾಗ, ಒಂದು ರೀತಿಯಲ್ಲಿ ಅದರ ಜೀವವನ್ನು ತೆಗೆದಿರಿ. ಅದು ಜೀವಂತವಾಗಿಲ್ಲ. ಈಗ ನೀವು ಮುಂದಿನ ಮೂರು ದಿನಗಳು ಜೀವಂತವಾಗಿ ಇದ್ದರೆ, ನೀವು ಕೊಳೆಯುವುದಿಲ್ಲ ಅಲ್ಲವೇ? ಆದರೆ ಮೃತ್ಯುವಶ ಆದಿರಿ ಎಂದುಕೊಳ್ಳೋಣ. ಆಗ ದೇಹವನ್ನು ಮೂರು ದಿವಸಗಳ ಕಾಲ ಇಟ್ಟರೆ ಅದೂ ಕೊಳೆಯುತ್ತದೆ. ಪ್ರತಿಯೊಂದು ಜೀವಿಗಳಿಗೂ ಇದೇ ಅನ್ವಯ ಆಗುತ್ತದೆ. ಅದು ತರಕಾರಿಯೇ ಆಗಿರಲಿ, ಪ್ರಾಣಿಯ ಮಾಂಸವೇ ಆಗಿರಲಿ ಅಥವಾ ಮತ್ತೇನಾದರೂ ಆಗಿರಲಿ, ಬೇಯಿಸುವ ಮೂಲಕ ಅದರ ಜೀವ ತೆಗೆದರೆ ಆ ಕ್ಷಣದಿಂದ, ಅದು ಕೊಳೆಯಲು ಪ್ರಾರಂಭಿಸುತ್ತದೆ.

    ಇದನ್ನೂ ಓದಿ  ಸರ್ಕಾರಕ್ಕೆ ಹತ್ತೇ ದಿನಗಳಲ್ಲಿ 1200 ಕೋಟಿ ರೂ. ‘ಕೊಡುಗೆ’ ಕೊಟ್ಟ ಕುಡುಕರು!

    ಕೊಳೆಯುವುದೆಂದರೆ ತಪ್ಪೇನೂ ಇಲ್ಲ, ಆದರೆ ಅದು ಮತ್ತೊಂದು ರೂಪದ ಜೀವವಾಗಿದೆ. ಕೊಳೆಯುವುದು ಎಂದರೆ ಮತ್ಯಾವುದೋ ಜೀವವು ಅದನ್ನು ತನ್ನ ಆಹಾರವಾಗಿ ಸಿದ್ಧಪಡಿಸಿಕೊಳ್ಳುತ್ತಿದೆ ಎಂದರ್ಥ. ಕಣ್ಣಿಂದ ನೋಡಲಾಗದಂಥ ಸೂಕ್ಷ್ಮ ಜೀವಿಗಳ ದೊಡ್ಡ ಗುಂಪೇ ಇದೆ. ಬ್ಯಾಕ್ಟೀರಿಯಾಗಳು ನಡೆಸುತ್ತಿರುವ ಅಂತಹ ಪಾರ್ಟಿಯಲ್ಲಿ ನೀವೂ ಸೇರಿಕೊಂಡು ಅದನ್ನು ತಿಂದರೆ ತೊಂದರೆಗೆ ಒಳಗಾಗುವಿರಿ. ತೊಂದರೆ ಎಂದರೆ ತಕ್ಷಣವೇ ಯಾವುದೋ ಕಾಯಿಲೆಗೆ ಈಡಾಗುವಿರಿ ಎಂದೇನೂ ಅಲ್ಲ, ಏಕೆಂದರೆ ಅವುಗಳಲ್ಲಿ ಎಲ್ಲವೂ ನಿಮಗೆ ಯಾವುದಾದರೂ ಸೋಂಕು ಬರಿಸುವಂಥ ಸಾಮರ್ಥ್ಯವನ್ನು ಪಡೆದಿರುವುದಿಲ್ಲ. ಅದರಿಂದ ನಿಮ್ಮ ಶಕ್ತಿಯ ಮಟ್ಟವು ಕ್ಷೀಣಿಸುವುದು ಹಾಗೂ ಅದರಿಂದಾಗಿ ದೇಹದಲ್ಲಿ ಜಡತ್ವವು ಉಂಟಾಗುತ್ತದೆ.

    ಒಂದು ಸೂಪರ್​ವಾರ್ಕೆಟ್​ಗೆ ಹೋಗಿ ಬೇಕಾದ್ದನ್ನು ಖರೀದಿಸುವಿರಿ, ಅಲ್ಲಿರುವ ಅನೇಕ ವಸ್ತುಗಳು ಒಂದು ತಿಂಗಳಿನಿಂದಲೂ ಅಲ್ಲಿಯೇ ಇರುತ್ತವೆ. ನಂತರ, ನೀವು ಅವುಗಳನ್ನು ಖರೀದಿಸಿ ತಂದು ಮತ್ತೊಂದು ತಿಂಗಳವರೆಗೆ ಫ್ರಿಜ್ನಲ್ಲಿ ಶೇಖರಿಸಿಕೊಳ್ಳುವಿರಿ ಹಾಗೂ ನಿಮಗಿಷ್ಟ ಬಂದಾಗ ಅದರ ಒಂದು ತುಣುಕನ್ನು ಸೇವಿಸುವಿರಿ. ಮಾನಸಿಕವಾಗಿ, ಶಾರೀರಕವಾಗಿ ಆರೋಗ್ಯವಂತರಾಗಬೇಕಾದರೆ 8 ಗಂಟೆಗಳ ಕಾಲ ನಿದ್ರೆ ಮಾಡಬೇಕೆಂದು ವೈದ್ಯರು ಹೇಳುವರು. ಏಕೆಂದರೆ ಅವರೂ ಅದೇ ರೀತಿಯ ಆಹಾರವನ್ನು ಸೇವಿಸುತ್ತಾರೆ.

    2) ಆಹಾರದ ಗುಣಮಟ್ಟ: ಶರೀರದ ಒಳಸೇರುವ ಆಹಾರದ ಗುಣಮಟ್ಟ ತುಂಬ ಮುಖ್ಯವಾದದ್ದು. ಈ ಭೂಮಿಯ ಮೇಲೆ ದಿನ ಕಳೆದಂತೆ ಗುಣಮಟ್ಟದ ಆಹಾರ ಸೇವನೆ ಕಷ್ಟವಾಗುತ್ತಿದೆ, ಏಕೆಂದರೆ ನಿಮಗೆ ದೊರಕುತ್ತಿರುವುದು ಕೇವಲ ವಾಣಿಜ್ಯ ವ್ಯವಹಾರದ ಕಿಲೋಗ್ರಾಂಗಳು. ಶರೀರಕ್ಕಾಗಿ ನಿಜವಾಗಲೂ ಬೇಕಾದ ಇಂಧನವಲ್ಲ. ಯಾರೋ ಕೆಲವರು ಇಂತಿಷ್ಟು ಆಹಾರವನ್ನು ತಯಾರಿಸುತ್ತಾರೆ, ಏಕೆಂದರೆ ಅವರು ಅಷ್ಟನ್ನು ಮಾರಾಟ ಮಾಡಿದರೆ ಹಣವನ್ನು ಗಳಿಸುತ್ತಾರೆ. ವ್ಯವಹಾರವು ಹೀಗೆ ಸಾಗುತ್ತಿದೆ, ಪೋಷಕಾಂಶ ಎಂದರೆ ಅವರು ಅದಕ್ಕೆ ಯಾವ್ಯಾವುದನ್ನೋ ಸೇರಿಸುತ್ತಾರೆ. ಇದು ಹಾಗಲ್ಲ, ಮಾನವ ಶರೀರವು ಆ ರೀತಿ ಕಾರ್ಯನಿರ್ವಹಿಸುವುದಿಲ್ಲ. ಈ ಅಂಗವ್ಯವಸ್ಥೆಯು ಪ್ರಕೃತಿಯಲ್ಲಿನ ಕೆಲವು ನಿರ್ದಿಷ್ಟ ಅಂಶಗಳನ್ನು ಸುಲಭವಾಗಿ ಅಂತರ್ಗತ ಮಾಡಿಕೊಂಡರೆ ಮತ್ತೆ ಕೆಲವು ನಿರ್ದಿಷ್ಟ ಅಂಶಗಳನ್ನು ಅಂತರ್ಗತ ಮಾಡಿಕೊಳ್ಳುವುದಿಲ್ಲ.

    ಇದನ್ನೂ ಓದಿ   ನಾಳೆ ಡಿಕೆಶಿ ಜನ್ಮದಿನ: ಕರೊನಾ ನಿಯಂತ್ರಣಕ್ಕಾಗಿ ಕಿಗ್ಗಾದಲ್ಲಿ ಪೂಜೆ!

    3) ಸರಳವಾಗಿ ತಿನ್ನುವುದು: ಕಡಿಮೆ ಜಟಿಲತೆಯಿಂದ ಕೂಡಿದ ಆಹಾರವನ್ನು ಸೇವಿಸುವುದು ಇನ್ನೊಂದು ಅಂಶವಾಗಿದೆ. ಕಡಿಮೆ ಪ್ರಮಾಣದ ಜಟಿಲವಾದ ನೆನಪುಗಳನ್ನು ತನ್ನಲ್ಲಿ ಇಟ್ಟುಕೊಳ್ಳುವಂಥ ಆಹಾರವನ್ನು ಸೇವಿಸಿದಾಗ, ಅದರ ಸೇವನೆಯ ನಂತರ ಎರಡು ಅಥವಾ ನಾಲ್ಕು ಗಂಟೆಗಳಲ್ಲಿ ಶೀಘ್ರವಾಗಿ ಅದು ದೇಹದ ಒಂದು ಭಾಗವಾಗುತ್ತದೆ. ಇಂಥ ಆಹಾರವು ನಿದ್ರಾವಧಿಯನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿತಗೊಳಿಸುತ್ತದೆ. ವಾಣಿಜ್ಯ ವ್ಯವಹಾರದ ಕಿಲೋಗಳನ್ನು ಸೇವಿಸುತ್ತಿರುವ ಅಮೆರಿಕ ಅಥವಾ ಪಾಶ್ಚಾತ್ಯದೇಶಗಳ ಅನೇಕ ಜನರು ನಮ್ಮ ಆಶ್ರಮಕ್ಕೆ ಬಂದು ಎರಡು, ಮೂರು ತಿಂಗಳುಗಳಾದ ಬಳಿಕ ‘ನಾವು ಏಕೆ ಸಾಕಷ್ಟು ನಿದ್ರೆ ಮಾಡುತ್ತಿಲ್ಲ ಎಂಬುದು ಅಶ್ಚರ್ಯವಾಗುತ್ತಿದೆ’ ಎನ್ನುತ್ತಾರೆ. ಏಕೆಂದರೆ ಅವರು 8 ಗಂಟೆಗಳ ಕಾಲ ಮಲಗಲೇಬೇಕು ಎಂಬುದನ್ನು ನಂಬುತ್ತಾರೆ. ಆದರೆ ಇಲ್ಲಿ ನಮ್ಮ ಮಾನದಂಡ 4 ಗಂಟೆಗಳು. ನಾವು 4 ಗಂಟೆಗಳಲ್ಲಿ ಎಲ್ಲವನ್ನೂ ನಿರ್ವಹಿಸುತ್ತಿದ್ದೇವೆ.

    ಅತ್ಯಂತ ಹೆಚ್ಚಿನ ಪ್ರಮಾಣದ ರಾಸಾಯನಿಕ ಹಾಗೂ ಸಂಶ್ಲೇಷಿಸಿದ ಆಹಾರವನ್ನು ಜೀರ್ಣಿಸಿಕೊಳ್ಳುವ ರೀತಿಯಲ್ಲಿ ದೇಹ ರೂಪಿತವಾಗಿಲ್ಲ. ರಾಸಾಯನಿಕಗಳು ಅಥವಾ ಆಹಾರ ಸಂರಕ್ಷಣಾ ಅಂಶಗಳು (ಪ್ರಿಸರ್​ವೇಟಿವ್ಸ್) ಶೇಕಡ ಒಂದು ಭಾಗ ಇಂತಹ ಕೃತಕವಾಗಿ ಸಂಶ್ಲೇಷಿಸಿದ ಆಹಾರವನ್ನು ಸೇವಿಸಿದಾಗ, ದೇಹದ ಜೀರ್ಣಾಂಗ ವ್ಯವಸ್ಥೆ ಹೋರಾಡಬೇಕಾಗುತ್ತದೆ.

    ಅಮೆರಿಕದಲ್ಲಿ ದೊಡ್ಡ ಪ್ರಮಾಣದ ಆಮ್ಲಾಪಕರ್ಷಕಗಳನ್ನು (ಆಂಟಾಸಿಡ್ಲ್) ಸೇವಿಸುತ್ತಾರೆ, ಇದರರ್ಥ ಏನೆಂದರೆ ಯಾವುದನ್ನು ಹೊಟ್ಟೆಯೊಳಗೆ ಹಾಕುತ್ತಿರುವಿರೋ ಅದು ಹೊಟ್ಟೆಗೆ ಸರಿಹೊಂದುತ್ತಿಲ್ಲ, ಎದೆಯುರಿ ಎಂದರೆ ನೀವು ಪ್ರೀತಿಯಲ್ಲಿ ಅಥವಾ ಇನ್ಯಾವುದರಲ್ಲೋ ಇರುವಿರಿ ಎಂದಲ್ಲ. ಎದೆಯುರಿ ಎಂದರೆ ಸಂಪೂರ್ಣ ಅನ್ನನಾಳವು ಆಮ್ಲದಿಂದ ಅಥವಾ ಮತ್ತಾ್ಯವ ಕಾರಣಗಳಿಂದಲೋ ಸುಡುತ್ತಿದೆ ಎಂದರ್ಥ. ಶೇಕಡ ಒಂದಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಯಾವುದೇ ಕೃತಕವಾಗಿ ಸಂಶ್ಲೇಷಿಸಿದ ಅಂಶವು ನೀವು ಸೇವಿಸುವ ಆಹಾರದಲ್ಲಿ ಇದ್ದದ್ದೇ ಆದರೂ ದೇಹಕ್ಕೆ ಅದನ್ನು ಅಳವಡಿಸಿಕೊಳ್ಳುವ ಸಾಮರ್ಥ್ಯವು ತ್ವರಿತವಾಗಿ ಇಳಿಮುಖವಾಗುತ್ತದೆ. ಇದರಿಂದ ನಿದ್ರಾವಧಿಯು ಅಧಿಕ ಪ್ರಮಾಣದಲ್ಲಿ ಹೆಚ್ಚಾಗುವುದು. ಏಕೆಂದರೆ ಶರೀರವು ತೊಳಲಾಟಕ್ಕೆ ಸಿಕ್ಕಿಹಾಕಿಕೊಂಡು, ಸಹಜವಾಗಿಯೇ ದೀರ್ಘವಾದ ನಿದ್ರೆಗೆ ಎಳೆಯುವುದು.

    4) ಆನಂದ ಸ್ಥಿತಿಯಲ್ಲಿಯೇ ಇರುವುದು: ನಿದ್ರೆ ಎಂದರೆ ನಿಷ್ಕ್ರಿಯವಾಗಿ ಇರುವುದು, ತಾತ್ಕಾಲಿಕ ಮರಣ, ರಿಪೇರಿ ಹಾಗೂ ಸಂರಕ್ಷಣಾ ವ್ಯವಸ್ಥೆಯ ಸಮಯ. ಹಗಲಿನ ವೇಳೆಯಲ್ಲಿ ಕಡಿಮೆ ಹಾನಿಯುಂಟಾಗುವ ಹಾಗೆ ಶರೀರವನ್ನು ಇಟ್ಟುಕೊಂಡರೆ, ಸಹಜವಾಗಿಯೇ ರಿಪೇರಿಯ ಸಮಯವೂ ಕಡಿಮೆ ಆಗುವುದು. ಇದನ್ನು ಸೂಕ್ತವಾದ ಆಹಾರವನ್ನು ಸೇವಿಸುವುದರಿಂದ ಹಾಗೂ ಮನಸ್ಸನ್ನು ಆನಂದದ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದರಿಂದ ಮಾಡಬಹುದು. ನಿಮ್ಮನ್ನು ನೀವು ಆನಂದದ ಸ್ಥಿತಿಯಲ್ಲಿ ಇಟ್ಟುಕೊಂಡರೆ, ಶರೀರದಲ್ಲಿ ಯಾವುದೇ ಘರ್ಷಣೆಗಳು ಇಲ್ಲದಿದ್ದರೆ, ನಿಮ್ಮ ಚೈತನ್ಯದಲ್ಲೂ ಯಾವುದೇ ಘರ್ಷಣೆ ಇರುವುದಿಲ್ಲ. ಏಕೆಂದರೆ ನೀವು ಹೊಂದಿರುವ ಸಮಸ್ಥಿತಿಯಿಂದ, ಮನಸ್ಸು ಹಾಗೂ ಭಾವನೆಗಳಲ್ಲಿ ಯಾವುದೇ ಘರ್ಷಣೆಯಿಲ್ಲದೆ ಇರುವುದರಿಂದ ನಿದ್ರಾವಧಿಯು ಇಳಿಮುಖವಾಗುವುದು.

    5) ಕಡ್ಡಾಯದ ಅಗತ್ಯಗಳಿಲ್ಲದೆ ಇರುವುದು: ದೇಹದಲ್ಲಿ ಪ್ರೀತಿ, ಆನಂದ, ಭಕ್ತಿ ಇವುಗಳ ಮೃದುಲೇಪನ ಹಾಗೂ ಸಮತ್ವ- ನೀವು ಏನು ಬೇಕಾದರೂ ಹೆಸರಿಸಿರಿ- ಹೀಗೆ ಆಂತರ್ಯದಲ್ಲಿ ಪ್ರತಿಕ್ಷಣವೂ ಯಾವುದಾದರೂ ಹರುಷವಾದದ್ದು ಘಟಿಸುತ್ತಿದ್ದರೆ, ನಿದ್ರೆಯು ಬಹಳ ಕಡಿಮೆ ಆಗುವುದು. ಇಲ್ಲಿ ಯಾವುದೇ ಕಡ್ಡಾಯದ ಅಗತ್ಯಗಳು ಇಲ್ಲದ ರೀತಿಯಲ್ಲಿ ಸುಮ್ಮನೆ ಕುಳಿತರೆ, ಏನನ್ನೂ ಮಾಡುವ ಅಗತ್ಯ ಇಲ್ಲದೆ, ಏನನ್ನೂ ಹೇಳುವ ಅಗತ್ಯ ಇಲ್ಲದೆ, ಯಾವುದನ್ನೂ ಹೊಂದುವ ಅಗತ್ಯವೂ ಇಲ್ಲದೆ, ಇಲ್ಲಿ ಸುಮ್ಮನೆ ಕುಳಿತುಕೊಂಡರೆ ಅಗತ್ಯರಹಿತ ಆಗುವಿರಿ.

    (ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ.

    ಶಾಪಿಂಗ್​ನಿಂದ ಪತ್ನಿ ತಂದ ವಸ್ತುವನ್ನು ನೋಡಿ ತಬ್ಬಿಬ್ಬಾದ ಪತಿ…ಆತನೀಗ ಅಸಂತೃಪ್ತ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts