More

    ಇಂಜಿನಿಯರ್ ಕರ್ತವ್ಯ ಲೋಪದಿಂದ ಅಭಿವೃದ್ಧಿ ಕುಂಠಿತ ; ಕೊರಟಗೆರೆ ಪಪಂ ಸದಸ್ಯರ ಆಕ್ರೋಶ

    ಕೊರಟಗೆರೆ : ಇಂಜಿನಿಯರ್ ಕರ್ತವ್ಯಲೋಪದಿಂದ ವಾರ್ಡ್‌ಗಳ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿವೆ ಎಂದು ಪಟ್ಟಣ ಪಂಚಾಯಿತಿ ಸದಸ್ಯರು ಸಾಮಾನ್ಯ ಸಭೆಯಲ್ಲಿ ಶನಿವಾರ ಆಕ್ರೋಶ ವ್ಯಕ್ತಪಡಿಸಿದರು.

    ಪಪಂ ಅಧ್ಯಕ್ಷೆ ಮಂಜುಳಾಸತ್ಯನಾರಾಯಣ್ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಎಸ್‌ಟಿಪಿ, ಟಿಎಸ್‌ಪಿ ಅಡಿಯಲ್ಲಿ ಲಕ್ಷಾಂತರ ರೂಪಾಯಿ ಉಳಿದಿದ್ದು, ಇಂಜಿನಿಯರ್ ರಘು ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದೆ ಅಂದಾಜು ಪಟ್ಟಿ ಮತ್ತು ಟೆಂಡರ್ ಮಾಡಿಲ್ಲ. ಇದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲನಿಗಳ ಅಭಿವೃದ್ಧಿ ಸಮರ್ಪಕವಾಗಿ ಆಗದೆ ಹಣ ಕೂಡ ವಾಪಸ್ ಹೋಗುವ ಹಂತಕ್ಕೆ ತಲುಪಿದೆ ಎಂದು ಸದಸ್ಯರು ಅಸಮಾಧಾನ ಹೊರಹಾಕಿದರು.

    ಕಣ್ಣಪ್ಪ ಸಮುದಾಯ ಭವನ ಮುಂದುವರಿದ ಕಾಮಗಾರಿಗೆ ಹಲವು ಬಾರಿ ಅಂದಾಜು ಪಟ್ಟಿ ಮಾಡಿಸಿ ಟೆಂಡರ್ ಪ್ರಕ್ರಿಯೆ ಸರಿಯಾಗಿ ನಿರ್ವಹಿಸದೆ ಅದೂ ಹಾಗೆಯೇ ಉಳಿದಿದೆ ಎಂದು ಸದಸ್ಯರಾದ ಲಕ್ಷ್ಮೀನಾರಾಯಣ್ ಮತ್ತು ಪುಟ್ಟನರಸಯ್ಯ ಅಸಮಾಧಾನ ವ್ಯಕ್ತಪಡಿಸಿದರು.
    4ನೇ ವಾರ್ಡ್‌ನಲ್ಲಿನ ಸರ್ಕಾರಿ ಭೂಮಿ ಭೂಗಳ್ಳರ ವಾರಾಟಕ್ಕೆ ಕೇಂದ್ರ ಬಿಂದುವಾಗಿದೆ. ಹಾಗಾಗಿ ಪಟ್ಟಣ ಪಂಚಾಯಿತಿ ಸರ್ಕಾರಿ ಜಾಗಗಳನ್ನು ಗುರುತಿಸಿ ಸ್ವಾಧೀನ ಮಾಡಿಕೊಂಡು ನಿಜವಾದ ಬಡವರಿಗೆ ಹಂಚಬೇಕು. ಪ್ರಸ್ತುತ ಸ್ಲಂ ಬೋರ್ಡ್‌ನಿಂದ ಸಾವಿರಾರು ಮನೆಗಳು ಬಂದರೂ ಅವರಿಗೆ ಕಟ್ಟಿಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ ಸದಸ್ಯ ನಂದೀಶ್, ಇದಕ್ಕೆಲ್ಲಾ ಇಂಜಿನಿಯರ್ ಮುಖ್ಯ ಕಾರಣ ಎಂದರು.

    ಪಪಂ ಕಚೇರಿಯಲ್ಲಿ ಜನರಿಂದ ಎನ್‌ಒಸಿಗೆ ಎಲ್ಲ ತರಹದ ಶುಲ್ಕಗಳನ್ನು ಪಾವತಿಸಿಕೊಂಡು ಅರ್ಜಿದಾರರನ್ನು ಅನಗತ್ಯವಾಗಿ ತಿಂಗಳುಗಟ್ಟಲೆ ಅಲೆಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಬಗ್ಗೆ ಮೊದಲು ಸಭೆಯು ತೀರ್ವಾನ ತೆಗೆದುಕೊಳ್ಳಬೇಕು ಎಂದು ಸದಸ್ಯ ಕೆ.ಆರ್.ಓಬಳರಾಜು ಒತ್ತಾಯಿಸಿದರು.

    ಹಲವು ತಿಂಗಳಿನಿಂದ ಸಜ್ಜನರ ಬೀದಿಯ ಗುಂಡಿಗಳನ್ನು ಮುಚ್ಚಲು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅನಧಿಕೃತ ವಾಹನ ನಿಲುಗಡೆಯಿಂದ ವಾಹನ ಮತ್ತು ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗಿದೆ. ವಿವಿಧೆಡೆ ಕಸ ವಿಲೇವಾರಿ ಮಾಡದೆ ಸ್ವಚ್ಛತೆ ಮರೀಚಿಕೆಯಾಗಿದೆ. ಹಾಗಾಗಿ ಕಸ ವಿಲೇವಾರಿ ಮಾಡಲು ಕ್ರಮ ವಹಿಸಬೇಕು ಎಂದು 11ನೇ ವಾರ್ಡ್ ಸದಸ್ಯ ಪ್ರದೀಪ್‌ಕುವಾರ್ ಮನವಿ ಮಾಡಿದರು.

    ಉಪಾಧ್ಯಕ್ಷೆ ಭಾರತಿ ಸಿದ್ದಮಲ್ಲಪ್ಪ, ಸದಸ್ಯರಾದ ಎ.ಡಿ.ಬಲರಾಮಯ್ಯ, ನಟರಾಜು, ಕಾವ್ಯರಮೇಶ್, ಹೇವಾಮಂಜುನಾಥ್, ಅನಿತಾ, ಹುಸ್ನಾಪಾರಿಯಾಕಲೀಂ, ನಾಮಿನಿಸದಸ್ಯರಾದ ರಂಗನಾಥ್, ಗೋವಿಂದರಾಜು, ಪ್ರೇಮಕುವಾರ್, ಮುಖ್ಯಾಧಿಕಾರಿ ಲಕ್ಷ್ಮಣ್‌ಕುವಾರ್, ಆರೋಗ್ಯಾಧಿಕಾರಿ ರೈಸ್‌ಅಹಮದ್, ಆರ್.ಐ.ವೀರಭದ್ರಚಾರ್, ಸಿಬ್ಬಂದಿ ಮಹೇಶ್, ನಾಗರತ್ನಮ್ಮ, ಶೈಲೇಂದ್ರ, ಜಗನ್ನಾಥ್ ಇದ್ದರು.

    ವರ್ಗಾವಣೆ ಮಾಡಿ : ಇಂಜಿನಿಯರ್ ರಘು ಪಟ್ಟಣ ಪಂಚಾಯಿತಿ ಕಚೇರಿಗೆ ಟೆಂಡರ್ ಸಮಯದಲ್ಲಿ ವಾತ್ರ ಹಾಜರಾಗಿ ಲಾಭಾಂಶಕ್ಕೆ ಕೆಲಸ ವಾಡುತ್ತಾರೆ. ಇಲ್ಲಿಯವರೆಗೂ ಕುಡಿಯುವ ನೀರು, ಹೇವಾವತಿ ನೀರು ಸರಬರಾಜು ವಾಡುವ ಮುಖ್ಯ ಕೇಂದ್ರಕ್ಕಾಗಲಿ, ಅಗ್ರಹಾರದ ಪವರ್ ಪ್ಲಾಂಟ್‌ಗಾಗಲಿ ಒಂದು ದಿನವೂ ಹೋಗಿಲ್ಲ. ಈತನಿಂದ ಆಶ್ರಯ ಯೋಜನೆಗಳು ಸೇರಿ ಹಲವು ಕೆಲಸಗಳು ನನೆಗುದಿಗೆ ಬಿದ್ದಿವೆ. ಇವರನ್ನು ಜಿಲ್ಲೆಯಿಂದ ಬೇರೆಡೆಗೆ ವರ್ಗಾವಣೆ ಮಾಡಿ ಎಂದು ಸದಸ್ಯರು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts