More

    ಜನಮನ ಸೆಳೆದ ಪರಮೇಶ್ವರ

    ಕೊರಟಗೆರೆ: ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಕೊರಟಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ.ಪರಮೇಶ್ವರ ಪ್ರಚಾರ ಬಿರುಸುಗೊಳಿಸಿದ್ದಾರೆ. ಸಾರ್ವಜನಿಕ ಸಭೆ, ರೋಡ್‌ಶೋ ಮೂಲಕ ಜನರನ್ನು ಸೆಳೆಯುತ್ತಿದ್ದಾರೆ.

    ಅಕ್ಕಿರಾಂಪುರ, ಬಿ.ಡಿ.ಪುರ, ದೊಡ್ಡಸಾಗ್ಗರೆ, ಹೊಳವನಹಳ್ಳಿ ಮತ್ತು ಹೂಲೀಕುಂಟೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಶನಿವಾರ ಅಬ್ಬರದ ಪ್ರಚಾರ ನಡೆಸಿದರು. ಎಲ್ಲೆಡೆಯೂ ಮುಂದಿನ ಸಿಎಂ ಪರಮೇಶ್ವರ ಎಂಬ ಘೋಷಣೆ ಮೊಳಗಿದವು.

    ಅಕ್ಕಿರಾಂಪುರ ಗ್ರಾಪಂ ವ್ಯಾಪ್ತಿಯ ಗೌರಗಾನಹಳ್ಳಿಯಲ್ಲಿ ಗ್ರಾಮಸ್ಥರು ಡಾ.ಜಿ.ಪರಮೇಶ್ವರ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು, ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರೆ ಜನರು ಜೈಕಾರ ಕೂಗಿದರು.

    ಡಾ.ಜಿ.ಪರಮೇಶ್ವರ ಮಾತನಾಡಿ, 2008ರಲ್ಲಿ ನಾನು ಮೊದಲು ಕೊರಟಗೆರೆಯಿಂದ ಸ್ಪರ್ಧೆ ಮಾಡಿದಾಗ ಇಲ್ಲಿನ ಜನರು ಆಶೀರ್ವಸಿದರು, ನಂತರ ಸತತ 8 ವರ್ಷಗಳ ಕಾಲ ಸುಧೀರ್ಘ ಅವಧಿಗೆ ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದು, ನನ್ನ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೇರಿದ್ದು ಸ್ಮರಣೀಯ ಎಂದರು.

    2013ರಲ್ಲಿ ನನ್ನ ನೇತೃತ್ವದಲ್ಲಿಯೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು 2018ರಲ್ಲಿ ನಾನು ಗೆದ್ದು ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದು ನನ್ನೆಲ್ಲಾ ರಾಜಕೀಯ ಭವಿಷ್ಯಕ್ಕೆ ನಾಂದಿ ಹಾಡಿದ್ದು ಕೊರಟಗೆರೆ ಮತದಾರರು. ಆದ್ದರಿಂದಲೇ ಇದು ನನ್ನ ಅದೃಷ್ಟದ ಕ್ಷೇತ್ರ ಎಂದು ಹೇಳಿದರು.

    ಅಕ್ಕಿರಾಂಪುರ ಗ್ರಾಪಂ ವ್ಯಾಪ್ತಿಯ ಚಿಕ್ಕನಹಳ್ಳಿ ಗೊಲ್ಲರಹಟ್ಟಿಗೆ ಪರಮೇಶ್ವರ ಭೇಟಿ ನೀಡುತ್ತಿದ್ದಂತೆಯೇ ಗೊಲ್ಲ ಸಮುದಾಯದ ಸಂಪ್ರದಾಯದಂತೆ ನೆಚ್ಚಿನ ನಾಯಕನಿಗೆ ಕಂಬಳಿ ಹೊದಿಸಿ ಸ್ವಾಗತ ಕೋರಿದ್ದು ವಿಶೇಷವಾಗಿತ್ತು.
    ಪರಮೇಶ್ವರ್ ತಲೆಗೆ ಪೆಟ್ಟು ಬಿದ್ದಿದ್ದ ವಿಷಯ ತಿಳಿದಿದ್ದ ವೃದ್ಧೆಯೋರ್ವರು ಪರಮೇಶ್ವರ ಅವರನ್ನು ನೋಡಲೇಬೇಕೆಂಬ ಹಂಬಲದಿಂದ ಸೋಂಪುರ ಗ್ರಾಮದಲ್ಲಿ ನೆಚ್ಚಿನ ನಾಯಕನಿಗೆ ಅಪ್ಪುಗೆ ನೀಡಿ ಆರೋಗ್ಯ ವಿಚಾರಿಸಿದರು.

    ಜನರ ಪ್ರೀತಿಕಂಡು ಭಾವುಕರಾದ ಡಾ.ಜಿ.ಪರಮೇಶ್ವರ ನಿಮ್ಮ ಪ್ರೀತಿಗೆ ನಾನು ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
    ಕೋಳಾಲ ಹೋಬಳಿಯ ನೀಲಗೊಂಡನಹಳ್ಳಿ ಮತ್ತು ಎಲೆರಾಂಪುರ ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯಕರ್ತರು ಶನಿವಾರ ಪರಮೇಶ್ವರ್ ಪರ ಬೈಕ್ ರ‌್ಯಾಲಿ ನಡೆಸಿದರು.

    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಮಾತನಾಡಿ, ಕರೊನಾ ಸಂಕಷ್ಟದಲ್ಲಿ ಕ್ಷೇತ್ರದ ಶಾಸಕರಾಗಿ ಇಡೀ ರಾಜ್ಯದಲ್ಲಿ ಯಾರೂ ಮಾಡದಷ್ಟು ಆರೋಗ್ಯ ಮತ್ತು ಆಹಾರ ಕಿಟ್ ಗಳನ್ನು ಪರಮೇಶ್ವರ್ ನೀಡಿದ್ದಾರೆ ಎಂದರು.
    ರಾಜ್ಯ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಪುಟ್ಟಸ್ವಾಮೀಗೌಡ, ನೀಲಗೊಂಡನಹಳ್ಳಿ ತಾಪಂ ಮಾಜಿಅಧ್ಯಕ್ಷ ವೀರಣ್ಣ, ಗ್ರಾಪಂ ಸದಸ್ಯರಾದ ರಂಗಯ್ಯ, ಚಂದ್ರಶೇಖರಯ್ಯ, ಸಂಕೇತ್, ಕೃಷ್ಣಪ್ಪ, ಗೌರಮ್ಮ, ಹನುಮಂತರಾಯಪ್ಪ, ಮುಖಂಡರುಗಳಾದ ವೇದಾಂಬ ನಟರಾಜು, ಸುಮಂತ್, ವೀರಣ್ಣ, ಮಂಜಣ್ಣ, ಅನಂತಕುಮಾರ್, ಪವನಕುಮಾರ್, ರಾಜಣ್ಣ, ಸೇರಿದಂತೆ ಇತರರು ಬೈಕ್ ರ‌್ಯಾಲಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts