More

    ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಯಾವಾಗ? ವಿವರ ಇಲ್ಲಿದೆ.. 

    ಶಬರಿಮಲೆ: ಹಿಂದುಗಳ ಪವಿತ್ರ ಶ್ರದ್ಧಾಕೇಂದ್ರ ಅಯ್ಯಪ್ಪ ಸ್ವಾಮಿಯ ಲಕ್ಷಾಂತರ ಭಕ್ತರು ಕಾತರದಿಂದ ನಿರೀಕ್ಷಿಸುತ್ತಿರುವ ಮಕರ ಜ್ಯೋತಿ ದರ್ಶನದ ದಿನಾಂಕ ಮತ್ತು ಸಮಯವನ್ನು ಅಯ್ಯಪ್ಪ ಸ್ವಾಮಿ ದೇವಾಲಯ ಪ್ರಕಟಿಸಿದೆ.

    ಇದನ್ನೂ ಓದಿ: ಅಶ್ವಿನ್ ಏಕದಿನ, ಟಿ20 ತಂಡದಲ್ಲಿ ಸ್ಥಾನ ಪಡೆಯಲು ಅರ್ಹರಲ್ಲ: ಯುವರಾಜ್ ಸಿಂಗ್ ಅಚ್ಚರಿ ಹೇಳಿಕೆ!

    ಈ ಬಾರಿ ಜ. 15ರ ಮಕರ ಸಂಕ್ರಮಣವಾಗಿದ್ದು, ಈದಿನ ರಾತ್ರಿ ಮಕರ ಜ್ಯೋತಿಯ ದರ್ಶನ ಆಗಲಿದೆ. ಸಂಜೆ 6.30 ರಿಂದ 7ಗಂಟೆ ಒಳಗೆ ಮೂರು ಬಾರಿ ಮಕರ ದರ್ಶನವಾಗಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

    ಕೇರಳದ ಶಬರಿಮಲೆಯಲ್ಲಿ ಮಕರ ಸಂಕ್ರಾಂತಿಗೆ ಮೂರು ತಿಂಗಳ ಮುಂಚೆಯೇ ಶಬರಿ ಮಲೆಯಾತ್ರೆ ಆರಂಭವಾಗುತ್ತದೆ. ಕರ್ನಾಟಕ, ತೆಲಂಗಾಣ, ಆಂಧ್ರ, ತಮಿಳುನಾಡು ಸೇರಿ ದೇಶದ ನಾನಾ ಭಾಗಗಳಿಂದ ಅಯ್ಯಪ್ಪ ಮಾಲೆ ಧರಿಸಿದ ಭಕ್ತರು ಆಗಮಿಸುತ್ತಾರೆ. ಭಕ್ತರು 18 ಮೆಟ್ಟಿಲು ಏರಿ ಅಯ್ಯಪ್ಪ ಸ್ವಾಮಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಇದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.ಇದರ ಜತೆಗೆ ಶಬರಿ ಮಲೆಯಲ್ಲಿ ಸಂಕ್ರಾಂತಿಗೆ ಪ್ರತಿ ವರ್ಷ ನಡೆಯುವ ವಿಶೇಷ ಪೂಜೆ ಮಕರವಿಳಕ್ಕು ಅಥವಾ ಮಕರ ಜ್ಯೋತಿ ಪ್ರಾಧಾನ್ಯತೆ ಪಡೆದುಕೊಂಡಿದೆ. ಮಕರ ಜ್ಯೋತಿಯ ದಿನ ಲಕ್ಷಾಂತರ ಭಕ್ತರು ಶಬರಿ ಮಲೆಯಲ್ಲಿ ಕಾದು ಕುಳಿತಿರುತ್ತಾರೆ. ಜ್ಯೋತಿ ದರ್ಶನ ಅಮೃತ ಕ್ಷಣ ಎಂದೇ ಭಕ್ತರು ಭಾವಿಸುತ್ತಾರೆ.

    ‘ರಾಕ್ಷಸ’ ನಾದ ಪ್ರಜ್ವಲ್ ದೇವರಾಜ್​: ಸಿನಿಮಾದ ಫಸ್ಟ್ ಲುಕ್ ರಿಲೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts