More

    ಬೀದಿ ನಾಯಿಗಳ ಹಾವಳಿಗೆ ರೋಸಿದ ಜನ

    ಸಾಸ್ವೆಹಳ್ಳಿ: ಹೋಬಳಿ ಕೇಂದ್ರ ಸೇರಿ ಲಿಂಗಾಪುರ, ಹೊಸಹಳ್ಳಿ, ಹುಣಸಘಟ್ಟ, ಕ್ಯಾಸಿನಕೆರೆ, ಕುಳಗಟ್ಟೆ, ರಾಂಪುರ, ಬೀರಗೊಂಡನಹಳ್ಳಿ, ಬೆನಕನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಗೆ ಜನ ರೋಸಿ ಹೋಗಿದ್ದಾರೆ.

    ಬೀದಿ ನಾಯಿಗಳ ಸಂತತಿ ಹೆಚ್ಚಿದೆ. ಜನ, ಜಾನುವಾರುಗಳಿಗೆ ನಾಯಿಗಳು ಕಚ್ಚುತ್ತವೆ ಎಂಬ ಭಯ ಶುರುವಾಗಿದೆ. ಸಾಕಿದ ಕೋಳಿಗಳನ್ನು ಹಿಡಿದು ತಿನ್ನುತ್ತಿವೆ.

    ಬಿಸಿಲಿಗೆ ಒಣಗಲು ಹಾಕಿದ ಹಪ್ಪಳ, ಸಂಡಿಗೆ, ಧಾನ್ಯಗಳನ್ನು ತಿನ್ನುತ್ತವೆ ಅಥವಾ ನೆಲಪಾಲು ಮಾಡುತ್ತವೆ. ಗ್ರಾಮಾಡಳಿತ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

    ಚುಚ್ಚುಮದ್ದಿನ ಕೊರತೆ: ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಒಂದೇ ಪರಿಹಾರವಾಗಿದೆ. ಸ್ಥಳೀಯ ಆಡಳಿತ, ಪಶು ಇಲಾಖೆ ಜಂಟಿಯಾಗಿ ಈ ಕಾರ್ಯ ಮಾಡಬೇಕಿದೆ. ಗ್ರಾಮಾಡಳಿತ ನಾಯಿಗಳನ್ನು ಹಿಡಿದು ಅವುಗಳ ಚಿಕಿತ್ಸೆಗೆ ತಗುಲುವ ವೆಚ್ಚ ಭರಿಸಿದರೆ, ಪಶು ಇಲಾಖೆ ಚಿಕಿತ್ಸಾ ಕ್ರಮ ಕೈಗೊಳ್ಳಲಿದೆ. ನಾಯಿಗಳು ಕಚ್ಚಿದರೆ ತಕ್ಷಣಕ್ಕೆ ಚಿಕಿತ್ಸೆ ನೀಡಲು ಚುಚ್ಚುಮದ್ದಿನ ಕೊರತೆ ಇದೆ ಎನ್ನುತ್ತಾರೆ ಸಾಸ್ವೆಹಳ್ಳಿ ಪಶು ಆಸ್ಪತ್ರೆ ಮುಖ್ಯ ಪಶು ವೈದ್ಯಾಧಿಕಾರಿ ಡಾ.ವಿಶ್ವ ನಟೇಶ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts