More

    ವಿಜೃಂಭಣೆಯ ಕಾಳಮ್ಮ ದೇವಿ ಜಾತ್ರಾ ಮಹೋತ್ಸವ


    • ಮೈಸೂರು : ಸರಗೂರು ತಾಲೂಕಿನ ಹೆಗ್ಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗನೂರಿನ ಗ್ರಾಮ ದೇವತೆ ಶ್ರೀ ಕಾಳಿಕಾಂಬ ಮಹೇಶ್ವರಿ ಕಾಳಮ್ಮ ದೇವಿಯ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

    • ಮಂಗಳವಾರ ಮತ್ತು ಬುಧವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದಲ್ಲಿ ವಿಶೇಷ ಹೋಮ, ಹವನಗಳು ಜರುಗಿತು. ಸುಪ್ರಭಾತ ಸೇವೆ, ವಿಶೇಷ ಪಂಚಾಮೃತ ಅಭಿಷೇಕ, ಉರುಳು ಸೇವೆ ಜರುಗಿತು.

    • ಕ್ಷೇತ್ರದ ಈಶಾನ್ಯ ದಿಕ್ಕಿನಲ್ಲಿರುವ ಹೆಬ್ಬಳ್ಳದ ತೊರೆಯಲ್ಲಿ ಗಂಗಾ ಪೂಜೆ ಮಾಡಲಾಯಿತು. ಭಕ್ತರು ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ವೀರಗಾಸೆ, ಗಾರುಡಿಗೊಂಬೆ, ಕೋಲಾಟ, ಚಂಡೆವಾದ್ಯ, ಮಂಗಳವಾದ್ಯ ಸಮೇತ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಹರಕೆ ಹೊತ್ತವರು ಬಾಯಿ ಬೀಗ ಹಾಕಿಕೊಂಡು ಸಾಗಿದರು.

    • ಪುಣ್ಯಾಹ, ಪಂಚಾಮೃತ ಅಭಿಷೇಕ, ನವಗ್ರಹ ಆರಾಧನೆ, ಕುಂಕುಮಾರ್ಚನೆ, ಕಂಕಣಧಾರಣೆ, ಮಧುವಣಗಿತ್ತಿ ಆರತಿಬಾನ, ಗಂಗಾಸ್ನಾನ ಮಹೋತ್ಸವ, ಕಳಸ ಮಹೋತ್ಸವ ಮತ್ತಿತರ ಧಾರ್ಮಿಕ ಚಟುವಟಿಕೆ ನೆರವೇರಿಸಲಾಯಿತು. ದೇವಸ್ಥಾನ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಝಗಮಗಿಸುತ್ತಿತ್ತು. ಭಕ್ತರು ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಭಕ್ತರಿಗೆ ಪ್ರಸಾದ, ಮಜ್ಜಿಗೆ ವಿತರಿಸಲಾಯಿತು. ಸರಗೂರು ಪಟ್ಟಣದಿಂದ ಹೆಗ್ಗನೂರು ಗ್ರಾಮದ ಕಾಳಮ್ಮ ದೇವಸ್ಥಾನಕ್ಕೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಯಿತು.

    • ಗ್ರಾಪಂ ಅಧ್ಯಕ್ಷ ಸುಧೀರ್, ಕಾಳಿಕಾಂಬ ಮಹೇಶ್ವರಿ ಕಾಳಮ್ಮ ಸೇವೆ ಟ್ರಸ್ಟ್ ಅಧ್ಯಕ್ಷ ಶಿವಣ್ಣೇಗೌಡ, ಸಮಿತಿ ಉಪಾಧ್ಯಕ್ಷರಾದ ಚಲುವೇಗೌಡ, ಎಚ್.ಕೆ.ಶಂಭುಲಿಯ್ಯ, ಕಾರ್ಯದರ್ಶಿ ಸತೀಶ್ ಗೌಡ, ಖಜಾಂಚಿ ರವಿಗೌಡ, ಸಹಕಾರ್ಯದರ್ಶಿ ಎಂ.ಸಿ.ಮೋಹನ್ ಕುಮಾರ್, ಸದಸ್ಯರಾದ ಗೋವಿಂದಗೌಡ, ಸೋಮೇಗೌಡ, ಮಾದಯ್ಯ, ಮಹದೇವಗೌಡ, ಎಚ್.ಸಿ.ರವಿಗೌಡ, ಜಯರಾಮೇಗೌಡ, ಸಣ್ಣಕೂಸೇಗೌಡ, ಎಚ್.ಸಿ.ವೆಂಕಟಶೆಟ್ಟಿ, ಮಹದೇವೇಗೌಡ, ಮಾದೇಗೌಡ, ಶಿವಲಿಂಗೇಗೌಡ, ಸಣ್ಣಸ್ವಾಮಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts