More

    ಮಹಿಳೆಯರು ಪದ್ಮಾಸನ, ಸ್ವನಾಸನ ಮಾಡಿದರೆ ಇಸ್ಲಾಂಗೆ ಅಪಾಯ ಎಂದ ಮೌಲ್ವಿಗಳು: ಯೋಗವಿಲ್ಲಿ ಬ್ಯಾನ್

    ಕುವೈತ್: ಭಾರತದಲ್ಲಿ ಪರಂಪರಾಗತವಾಗಿ ಬಂದಿರುವ ಯೋಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹವಾ ಸೃಷ್ಟಿಸಿದೆ. ವಿದೇಶಿಗರು ಯೋಗಾಭ್ಯಾಸವನ್ನು ಮಾಡುವಲ್ಲಿ ನಿರತರಾಗಿದ್ದು, ಹಲವೆಡೆಗಳಲ್ಲಿ ಯೋಗ ತರಬೇತಿ ಕೇಂದ್ರಗಳನ್ನೂ ತೆರೆಯಲಾಗಿದೆ. ಇದಕ್ಕೆ ಕಾರಣ, ಆರೋಗ್ಯದ ದೃಷ್ಟಿಯಿಂದ ಯೋಗದ ಪಾಲು ಬಹುದೊಡ್ಡದು ಎನ್ನುವುದಕ್ಕೆ. ಆದ್ದರಿಂದ ಜಾತಿ,ಧರ್ಮ ಎಲ್ಲವನ್ನೂ ಮೀರಿ ಆರೋಗ್ಯವನ್ನು ಕಾಪಾಡಿಕೊಳ್ಳಬಯಸುವವರು ಯೋಗದ ಮೊರೆ ಹೋಗುತ್ತಿದ್ದಾರೆ. ಅದರಲ್ಲಿಯೂ ಹೆಣ್ಣುಮಕ್ಕಳ ಆರೋಗ್ಯಕ್ಕೆಂದೇ ಹಲವಾರು ಯೋಗಗಳು ಇದ್ದು, ಎಲ್ಲವುಗಳಲ್ಲಿ ಇರುವ ಆರೋಗ್ಯದ ಕುರಿತು ವೈಜ್ಞಾನಿಕವಾಗಿ ಸಾಬೀತು ಕುಡ ಆಗಿದೆ.

    ಆದರೆ ಇದೀಗ ಕುವೈತ್​ ಹೊಸದೊಂದು ಕ್ಯಾತೆ ತೆಗೆದಿದೆ. ಅದೇನೆಂದರೆ ಪದ್ಮಾಸನ ಮತ್ತು ಸ್ವನಾಸನ ಯೋಗಾಸನಗಳು ಇಸ್ಲಾಮ್​ಗೆ ವಿರುದ್ಧವಾಗಿರುವ ಹಿನ್ನೆಲೆಯಲ್ಲಿ ಮಹಿಳೆಯರು ಇದನ್ನು ಮಾಡಬಾರದು ಎಂದು! ಈ ಕುರಿತು ಆದೇಶವೊಂದನ್ನು ಹೊರಡಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಯೋಗ ಮಾಡಬಾರದು. ಪದ್ಮಾಸನ ಮತ್ತು ಸ್ವನಾಸನ ಯೋಗಗಳಿಗೆ ಮಹಿಳೆಯರಿಗೆ ನಿಷಿದ್ಧ ಎಂದು ಹೇಳಿದೆ.

    ಈ ಕುರಿತು ಮೌಲ್ವಿಗಳು ಆದೇಶ ಹೊರಡಿಸಿದ್ದಾರೆ. ಆದರೆ ಇದೀಗ ಇದು ಮಹಿಳೆಯರ ಕಣ್ಣನ್ನು ಕೆಂಪಗೆ ಮಾಡಿದೆ. ಈ ವಿಚಾರಕ್ಕೆ ಮಹಿಳೆಯರು ಪ್ರತಿಭಟನೆ ಮಾಡುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಯೋಗ ಮಾಡಲು ಅನುಮತಿ ನೀಡಬೇಕು ಎಂದು ಪಟ್ಟುಹಿಡಿದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗಕ್ಕೆ ಇಷ್ಟೊಂದು ಪ್ರಾಮುಖ್ಯತೆ ಸಿಗುತ್ತಿರುವಾಗ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಯೋಗಕ್ಕೆ ಹೀಗೆ ನಿರ್ಬಂಧ ವಿಧಿಸುವುದು ಏಕೆ ಎಂಬ ಬಗ್ಗೆ ವಿರೋಧ ವ್ಯಕ್ತವಾಗಿದೆ. ಇಸ್ಲಾಮ್​ಗೆ ವಿರುದ್ಧವೇ ಆಗಿದ್ದರೆ ಅದು ಮಹಿಳೆಯರಿಗೆ ಮಾತ್ರ ಏಕೆ ಅನ್ವಯ ಆಗಬೇಕು ಎಂದು ಹಲವಾರು ಮಹಿಳೆಯರು ಪ್ರತಿಭಟಿಸುತ್ತಿದ್ದಾರೆ.

    ಮಹಿಳೆಯರಿಗೆ ಅತ್ಯಂತ ಕಡಿಮೆ ಹಕ್ಕುಗಳನ್ನು ನೀಡಿರುವ ದೇಶಗಳಲ್ಲಿ ಕುವೈತ್ ಕೂಡ ಒಂದು. ಇಲ್ಲಿ, ಮಹಿಳೆಯರು ಸಾರ್ವಜನಿಕವಾಗಿ ಏನು ಮಾಡಬೇಕು ಎಂಬುದನ್ನು ಪುರುಷರು ನಿರ್ಧರಿಸುತ್ತಾರೆ. ಆದರೆ ಮೂಲಭೂತವಾದಿ ಸಿದ್ಧಾಂತಕ್ಕೆ ಹೆಸರಾದ ಸೌದಿ ಅರೇಬಿಯಾ ಮತ್ತು ಇರಾಕ್‌ನಲ್ಲಿ ಈಗ ಮಹಿಳೆಯರಿಗೆ ಸಾಕಷ್ಟು ಹಕ್ಕುಗಳನ್ನು ನೀಡಲಾಗುತ್ತಿದೆ. ಕಳೆದ ತಿಂಗಳು ಸೌದಿ ಅರೇಬಿಯಾ ಮೊದಲ ಓಪನ್ ಏರ್ ಯೋಗ ಉತ್ಸವವನ್ನು ಆಯೋಜಿಸಿತ್ತು. ಆಗ ಕುವೈತ್‌ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು.

    ಶಾಲೆಗಳಿಗೆ ಬೇಸಿಗೆ ರಜೆ ಕಟ್- ವಾರ್ಷಿಕ ಪರೀಕ್ಷೆ ವೇಳಾಪಟ್ಟಿಯೂ ಬಿಡುಗಡೆ: ಇಲ್ಲಿದೆ ಫುಲ್​ ಡಿಟೇಲ್ಸ್​

    VIDEO: ಸಮಸ್ತ ಕನ್ನಡಿಗರಿಗೆ ನಮಸ್ಕಾರ… ಇವತ್ತಿನಿಂದ ನಾನು ರಾಧಿಕಾ ಕುಮಾರಸ್ವಾಮಿ ಎನ್ನುವ ಹೊಸ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts