More

    ವಿಶ್ವದ ಅಚ್ಚರಿಯ ಗಗನಚುಂಬಿ ಈಜುಕೊಳ ಉದ್ಘಾಟನೆ: ಇದು ತೇಲಾಡುತ್ತೆ, ಪಾರದರ್ಶಕವೂ ಆಗಿದೆ!

    ಲಂಡನ್‌: ತೇಲುವ ಹಾಗೂ ಒಳಗಡೆಯ ದೃಶ್ಯಗಳನ್ನು ಸುಲಭದಲ್ಲಿ ಕಾಣಬಹುದಾದ ಪಾರದರ್ಶಕ ಈಜುಕೊಳವೊಂದು ಈಗ ಉದ್ಘಾಟನೆಗೊಂಡಿದೆ. ನೈಋತ್ಯ ಲಂಡನ್​ನ ರಾಯಭಾರ ಕಚೇರಿಯಲ್ಲಿ ನಿರ್ಮಿಸಲಾಗಿರುವ ಈ ಈಜುಕೊಳ ವಿಶ್ವದಲ್ಲಿಯೇ ಪ್ರಥಮ ಎನ್ನಲಾಗಿದೆ.

    ‘ಸ್ಕೈ ಪೂಲಿಸ್’​ ಎಂಬ ಹೆಸರಿನ ಈ ಈಜುಕೋಳ 82 ಅಡಿ ಉದ್ದವಿದೆ. ರಾಯಭಾರ ಕಚೇರಿಯಲ್ಲಿ ಎರಡು ಅಪಾರ್ಟ್​ಮೆಂಟ್​ಗಳ 10ನೆ ಮಹಡಿಯ ಮಧ್ಯದಲ್ಲಿ ಇದನ್ನು ನಿರ್ಮಿಸಲಾಗಿದೆ. ಡಬಲ್‌ ಬೆಡ್​ ರೂಮ್​ ಮನೆಗಳನ್ನು ಹೊಂದಿರುವ ಎರಡು ಗಗನಚುಂಬಿ ಕಟ್ಟಡ ಇದಾಗಿದೆ. ಈಜುಕೊಳವು ಭೂಮಿಯಿಂದ 115 ಅಡಿ ಎತ್ತರದಲ್ಲಿದೆ. ಈ ಈಜುಕೊಳದಲ್ಲಿ 50 ಟನ್​ ನೀರನ್ನು ಭರ್ತಿ ಮಾಡಲಾಗಿದೆ. ಅಲ್ಲದೇ ಮೇಲ್ಚಾವಣಿಯಲ್ಲಿ ಬಾರ್​ ಹಾಗೂ ಸ್ಪಾ ವ್ಯವಸ್ಥೆ ಕೂಡ ಮಾಡಲಾಗಿದೆ.

     

    View this post on Instagram

     

    A post shared by Embassy Gardens (@embassygardens)

    ಈ ಅದ್ಭುತ ಈಜುಕೊಳ ನಿರ್ಮಿಸಿರುವವರು ಎಂಬ ಇಂಜಿನಿಯರ್‌ ಎಕರ್‌ಸ್ಲೇ ಎಂಬುವವರು. ಆದರೆ ಈ ಈಜುಕೊಳವನ್ನು ಸದ್ಯ ಕಟ್ಟಡದ ನಿವಾಸಿಗಳಿಗೆ ಮಾತ್ರ ಬಳಕೆ ಮಾಡಲು ಅನುಮತಿ ನೀಡಲಾಗಿದೆ.
    ಈಜುಕೊಳದ ವಿಡಿಯೋವನ್ನ ರಾಯಭಾರ ಕಚೇರಿ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದು ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ.

    ಸಹಸ್ರಕೋಟಿ ವಂಚಕ ಚೋಕ್ಸಿ ಸಿಗದೇ ಬರಿಗೈಯಲ್ಲಿ ವಾಪಸ್‌- ಆಕೆ ಗರ್ಲ್‌ಫ್ರೆಂಡ್‌ ಅಲ್ಲ, ಪತಿ ಅಂಥವರಲ್ಲ ಎಂದ ಪತ್ನಿ

    ದ್ವಿತೀಯ ಪಿಯುಸಿ ಪರೀಕ್ಷೆ ರದ್ದು- ಹಾಗಿದ್ದರೆ ಅಂಕ ಹೇಗೆ? ಇಲ್ಲಿದೆ ನೋಡಿ ಮಾಹಿತಿ…

    ಜುಲೈ 3ನೇ ವಾರ ಎಸ್‌ಎಸ್ಎಲ್‌ಸಿ ಪರೀಕ್ಷೆ: ಆದರೆ ಮುಂಚಿನಂತೆ ಅಲ್ಲ- ಏನೇನು ವಿಶೇಷತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts