More

    ಹುತಾತ್ಮ ಪತಿಯ ಮುಂದೆ ಮಾಡಿದ ಪ್ರತಿಜ್ಞೆ ಈಡೇರಿಸಿದ ವೀರನಾರಿ: ಅಮ್ಮನ ಮುಂದೆ 11 ವರ್ಷದ ಪುತ್ರಿ ಮಾಡಿದಳೊಂದು ಶಪಥ…

    ಮುಂಬೈ: ಅದು 2018. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಭಯಾನಕ ದಾಳಿ ನಡೆಯುತ್ತಿತ್ತು. ಉಗ್ರರು ಅಡಗಿರುವ ಮಾಹಿತಿ ಪಡೆದಿದ್ದ ಭಾರತೀಯ ಸೇನೆ, ಮೇಜರ್ ದೀಪಕ್ ನೈನ್ವಾಲ್ ನೇತೃತ್ವದಲ್ಲಿ ಬೆಟಾಲಿಯನ್ ಮೂಲಕ ಕಾರ್ಯಾಚರಣೆಗೆ ಇಳಿದಿತ್ತು. ಆ ಸಮಯದಲ್ಲಿ ದಾಳಿ-ಪ್ರತಿದಾಳಿಗಳು ನಡೆದಿದ್ದವು. ಪ್ರಾಣದ ಹಂಗು ತೊರೆದು ದೀಪಕ್‌ ಮುನ್ನುಗ್ಗಿದ್ದರು. ಈ ಗುಂಡಿನ ಚಕಮಕಿಯಲ್ಲಿ ಅವರು ತೀವ್ರವಾಗಿ ಗಾಯಗೊಂಡಿದ್ದರು. ಒಂದು ತಿಂಗಳು ಆಸ್ಪತ್ರೆಯಲ್ಲಿ ಇದ್ದರೂ ಚಿಕಿತ್ಸೆ ಫಲಿಸದೇ ಅದೇ ಸಾಲಿನ ಮೇ 20ರಂದು ಹುತಾತ್ಮರಾದರು.

    ಪತಿಯ ಪಾರ್ಥಿವ ಶರೀರ ಮನೆಗೆ ಬಂದಾಗ ಪತ್ನಿ ಜ್ಯೋತಿ ನೈನ್ವಾಲ್​, ಎಂಟು ವರ್ಷದ ಪುತ್ರಿ ಲಾವಣ್ಯ, 4 ವರ್ಷದ ಮಗ ರೆತಾಂಶ್‌ ಹಾಗೂ ಕುಟುಂಬಸ್ಥರು ಅಕ್ಷರಶಃ ನಲುಗಿಹೋಗಿದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಈ ಸಂದರ್ಭದಲ್ಲಿ ಸ್ಥಳದಲ್ಲಿಯೇ ದೇಶಭಕ್ತೆ ಜ್ಯೋತಿ ಗಂಡನ ಪಾರ್ಥವ ಶರೀರದ ಮುಂದೆಯೇ ಪ್ರತಿಜ್ಞೆಯೊಂದನ್ನು ಮಾಡಿದ್ದರು. ‘ ಭಾರತೀಯ ಸೇನೆ ಸೇರುತ್ತೇನೆ. ಶತ್ರುಗಳ ಹಾಗೂ ಭಯತ್ಪಾದಕರ ವಿರುದ್ದ ಹೋರಾಡುತ್ತಿರುವ ಭಾರತೀಯ ಸೇನೆ ಸೇರಬೇಕು. ಒಂದು ದಿನ ಭಾರತೀಯ ಸೇನೆಯ ಅಧಿಕಾರಿಯಾಗುತ್ತೇನೆ’ ಎಂದು.

    ಇದೀಗ ಮೂರು ವರ್ಷ ಕಳೆದಿದೆ. ಜ್ಯೋತಿ ಆ ಪ್ರತಿಜ್ಞೆ ಈಡೇರಿಸಿದ್ದಾರೆ. ಜ್ಯೂತಿ ನೈನ್ವಾಲ್ ಭಾರತೀಯ ಸೇನೆಯ ಲೆಫ್ಟಿನೆಂಟ್ ಶ್ರೇಣಿ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ತಮ್ಮ ಪ್ರತಿಜ್ಞೆ ಈಡೇರಿಸಿರುವ ಬಗ್ಗೆ ಅವರು ಅತೀವ ಸಂತೋಷಗೊಂಡು ಮಾತನಾಡಿದರು. ಈ ಸಂದರ್ಭದಲ್ಲಿ ಈಗ 11 ವರ್ಷವಾಗಿರುವ ಪುತ್ರಿ ಲಾವಣ್ಯ ಹಾಗೂ ಏಳು ವರ್ಷದ ರಿತಾಂಶ್‌ ಕೂಡ ಸೇನಾ ಸಮವಸ್ತ್ರ ಧರಿಸಿ ಬಂದಿದ್ದರು.

    ಈ ಸಂದರ್ಭದಲ್ಲಿ, ಮಗಳು ಲಾವಣ್ಯ ಕೂಡ ಮಾತನಾಡಿ, ಅಮ್ಮನ ಆಸೆ ಈಡೇರಿದುದ್ದಕ್ಕೆ ತೀವ್ರ ಸಂತೋಷ ವ್ಯಕ್ತಪಡಿಸಿದ್ದಾಳೆ. ಅ‌ಮ್ಮನನ್ನು ಎಲ್ಲರೂ ವೀರನಾರಿ ಎನ್ನುವಾಗ ಹೆಮ್ಮೆಯಾಗುತ್ತದೆ. ಮಾತ್ರವಲ್ಲದೇ ತಾನೂ ಒಂದು ಪ್ರತಿಜ್ಞೆ ಮಾಡಿದ್ದು, ನನ್ನ ತಂದೆ ಹುತಾತ್ಮರಾದ ಬಳಿಕ ನಾನೂ ಕೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಎನ್ನಿಸಿದೆ. ಅಮ್ಮ ಸೇನೆಯಲ್ಲಿ ಅಧಿಕಾರಿಯಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ನಾನೂ ಅಪ್ಪ-ಅಮ್ಮನಂತೆ ಸೇನೆ ಸೇರುವೆ. ಅಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಹುತಾತ್ಮರಾದರು. ದೇಶಕ್ಕಾಗಿ ತಮ್ಮ ಪ್ರಾಣ ಲೆಕ್ಕಿಸದೇ ಹೋರಾಡುವ ಸೈನಿಕರಿಗೆ ಚಿಕಿತ್ಸೆ ನೀಡುವುದು ನನ್ನ ಆಸೆ. ಅದಕ್ಕಾಗಿಯೇ ಸೇನೆಯ ವೈದ್ಯಳಾಗಲು ನಾನು ಇಚ್ಚೆಪಡುತ್ತೇನೆ. ನನ್ನ ಅಮ್ಮ ವಿಶ್ವದ ಅತ್ಯಂತ ಶ್ರೇಷ್ಠ ಅಮ್ಮ ಎಂದಿದ್ದಾಳೆ. ಈ ಬಾಲಕಿಯ ಮಾತಿಗೆ ಬಹಳ ಪ್ರಶಂಸೆ ವ್ಯಕ್ತವಾಗಿದೆ.

    ನಿನ್ನಿಂದಲೇ ನಾನು ಹುಷಾರಾಗಿದ್ದು… ‘ಕರ್ನಾಟಕದ ಅಳಿಯ’ನಿಗೂ ನೀನೇ ಕಾರಣ… ರಾಘವೇಂದ್ರ ರಾಜ್‌ಕುಮಾರ್‌ ಭಾವನಾತ್ಮ ಟ್ವೀಟ್‌

    ಗಡಿ ಭದ್ರತಾ ಪಡೆಯಲ್ಲಿವೆ 72 ಹುದ್ದೆಗಳು- 81 ಸಾವಿರ ರೂ.ವರೆಗೆ ಸಂಬಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts