More

    ಲಾಂಗು, ಮಚ್ಚು ಪೋಸ್‌ ಸಿನಿಮಾದಲ್ಲಿ ಇರಲಿ… ಹುಡುಗಿಯರನ್ನು ಇಂಪ್ರೆಸ್‌ ಮಾಡಲು ಹೋದ್ರೆ ಕಂಬಿ ಎಣಿಸಬೇಕಾದೀತು!

    ಬೆಂಗಳೂರು: ಇದೀಗ ಷಾರ್ಟ್‌ ವಿಡಿಯೋ ‘ರೀಲ್ಸ್‌’ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕೆಲವರು ಹೆಚ್ಚೆಚ್ಚು ಲೈಕ್‌, ಕಮೆಂಟ್‌ ಪಡೆಯಲು ಸಾಹಸದ ಕೆಲಸ ಮಾಡಿ ರೀಲ್ಸ್‌ ಮಾಡುತ್ತಿದ್ದರೆ, ಯುವಕರು ಯುವತಿಯರನ್ನು ಇಂಪ್ರೆಸ್‌ ಮಾಡುವ ಸಲುವಾಗಿ ಇಂಥ ಸಾಹಸಕ್ಕೆ ಕೈಹಾಕುವುದಿದೆ. ಸಿನಿಮಾ, ಅದರಲ್ಲಿರುವ ಹೀರೋಗಳೇ ಸರ್ವಸ್ವ ಆಗಿರುವ ಕೆಲ ಯುವಕರು ಅವರಂತೆ ತಾವೂ ಅನುಸರಿಸುವ ಹುಚ್ಚು.

    ಅದಕ್ಕಾಗಿಯೇ ಇದೀಗ ಕೈಯಲ್ಲಿ ಲಾಂಗು, ಮಚ್ಚು ಹಿಡಿದು ಪೋಸ್‌ ಕೊಟ್ಟು ವಿಡಿಯೋ ಮಾಡುವುದು ಕೆಲವು ಯುವಕರಿಗೆ ಕ್ರೇಜ್‌ ಎನಿಸಿದೆ. ಬೈಕ್‌ಗಳಲ್ಲಿ ಸ್ಟಂಟ್‌ ಮಾಡುವ ಯುವಜನತೆ ಒಂದೆಡೆಯಾದರೆ, ಅಷ್ಟು ರಿಸ್ಕ್‌ ತೆಗೆದುಕೊಳ್ಳಲು ಕಷ್ಟವಾಗುವ ಯುವಕರು ಲಾಂಗು, ಮಚ್ಚು ಝಳಪಿಸುತ್ತಾ ಬೈಕ್‌ನಿಂದ ಸಿನಿಮಾ ಸ್ಟೈಲ್‌ನಲ್ಲಿ ಬಂದು ವಿಡಿಯೋ ಮಾಡಿಸಿಕೊಳ್ಳುತ್ತಿದ್ದಾರೆ.

    ಇಂಥ ಸಾಹಸಕ್ಕೆ ಕೈಹಾಕುವ ಮುನ್ನ ಇರಲಿ ಎಚ್ಚರ. ಈ ರೀತಿ ಲಾಂಗು, ಮಚ್ಚು, ಚೂರಿಯಂಥ ಮಾರಕಾಸ್ತ್ರಗಳನ್ನು ಹಿಡಿದು ಪೋಸ್‌ ಕೊಟ್ಟು ವಿಡಿಯೋ ಮಾಡಿ ಅದನ್ನು ಶೇರ್‌ ಮಾಡಿ ಸಿಕ್ಕಿಬಿದ್ದರೆ ಜೈಲಿನಲ್ಲಿ ನೀವು ಲಾಕ್‌ ಆಗೋದು ಖಂಡಿತ.

    ಬೈಕ್ ವ್ಹೀಲಿಂಗ್‌ ಮಾಡುವುದು ಅಪರಾಧ ಆಗಿದ್ದು, ಅದರ ಜತೆ ಈ ರೀತಿ ಪೋಸ್‌ ಕೊಡುವುದು ಕೂಡ ಅಪರಾಧವಾಗಿದೆ. ಇಂಥ ಸಾಹಸಕ್ಕೆ ಕೈ ಹಾಕಿದ ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿ ಯುವಕರನ್ನು ಪೊಲೀಸರು ತಲಾಶ್‌ ಮಾಡುತ್ತಿದ್ದಾರೆ.

    ಕೆಂಪೆಗೌಡ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೈಯಲ್ಲಿ ಲಾಂಗ್ ಹಿಡಿದು ಬೈಕ್ ವ್ಹೀಲಿಂಗ್ ಮಾಡಿ ಈ ಯುವಕ ಇನ್‌ಸ್ಟಾಗ್ರಾಂನಲ್ಲಿ ಅದನ್ನು ಶೇರ್‌ ಮಾಡಿಕೊಂಡಿದ್ದಾನೆ. ಇವನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದೇ ವೇಳೆ ಎಚ್ಚರಿಕೆ ನೀಡಿರುವ ಪೊಲೀಸರು ಪಿಸಿ 25(B) ARMS ACT ಅಡಿ ಅಕ್ಷಮ್ಯ ಅಪರಾಧವಾಗಿದ್ದು, ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದಿದ್ದಾರೆ.

    ‘ಮೇಡಂ ಬ್ಲೌಸ್‌ ಧರಿಸಿ ವಿಮಾನ ಹತ್ತಿ, ಇಲ್ಲದಿದ್ರೆ ಹೊರ ಹೋಗಿ’ ಎಂದ ಏರ್‌ಲೈನ್ಸ್‌: ಶಾಕ್‌ನಲ್ಲಿ ಮಾಜಿ ಭುವನ ಸುಂದರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts