More

    ಒವೈಸಿ ಎಂಟ್ರಿ: ಮುಸ್ಲಿಂ ಮತದಾರರನ್ನು ಕಳೆದುಕೊಳ್ಳೋ ಟೆನ್ಷನ್​ನಲ್ಲಿ ದೀದಿ!

    ಕೋಲ್ಕತಾ: ಒಂದೆಡೆ ಪಶ್ಚಿಮ ಬಂಗಾಳದತ್ತ ಬಿಜೆಪಿ ದೃಷ್ಟಿ ಹಾಯಿಸಿದ್ದರೆ, ಇನ್ನೊಂದೆಡೆ ಅಸಾದುದ್ದೀನ್ ಒವೈಸಿಯವರ ಎಐಎಂಐಎಂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಚಿಂತೆಗೀಡು ಮಾಡಿದೆ.

    ಇದಾಗಲೇ ಉಪಚುನಾವಣೆಯಲ್ಲಿಯೂ ಭರ್ಜರಿ ಜಯಭೇರಿ ಗಳಿಸಿರುವ ಬಿಜೆಪಿ, ಪಶ್ಚಿಮ ಬಂಗಾಳವನ್ನೂ ಕೇಸರಿಮಯವಾಗಿಸುವ ಪಣ ತೊಟ್ಟಿದ್ದರೆ, ಬಿಹಾರ ವಿಧಾನಸಭೆ ಚುನಾವಣೆಯಲ್ಲಿ 5 ಸ್ಥಾನಗಳನ್ನು ಗೆದ್ದ ನಂತರ, ಇದೀಗ ಎಐಎಂಐಎಂ ಕಣ್ಣು ಕೂಡ ಈ ರಾಜ್ಯದ ಮೇಲೆ ಬಿದ್ದಿದೆ.

    ಈಗಾಗಲೇ 23 ಜಿಲ್ಲೆಗಳಲ್ಲಿ ಎಐಎಂಐಎಂ ತನ್ನ ಘಟಕ ಹೊಂದಿದೆ. ಅತ್ಯಂತ ಪ್ರಬಲವಾದ ಚುನಾವಣಾ ರಾಜನೀತಿಯೊಂದಿಗೆ ಬಂಗಾಳದಲ್ಲಿ ಸ್ಪರ್ಧಿಸಲಿದ್ದೇವೆ ಎಂದು ಎಐಎಂಐಎಂ ರಾಷ್ಟ್ರೀಯ ವಕ್ತಾರ ಅಸೀಮ್ ವಖಾರ್ ತಿಳಿಸಿದ್ದಾರೆ.

    ಇನ್ನು ಕೆಲವೇ ತಿಂಗಳುಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ. ಈ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಒವೈಸಿ ಈಗಾಗಲೇ ಘೋಷಿಸಿಯಾಗಿದೆ. ಇದು ಮಮತಾ ಅವರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.

    ಇದನ್ನೂ ಓದಿ: ಚುನಾವಣೆ ಬೆನ್ನಲ್ಲೇ ದೀದಿಗೆ ಬಿಗ್​ ಶಾಕ್​… ಐವರು ಸಚಿವರು ದಿಢೀರ್​ ನಾಪತ್ತೆ!

    ಕಾರಣ ಇಷ್ಟೆ. ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮುಸ್ಲಿಂ ಮತದಾರರ ಮಟ್ಟಿಗೆ ಹೇಳುವುದಾದರೆ ಕಾಶ್ಮೀರದ ನಂತರ ಅತಿ ಹೆಚ್ಚು ಮಂದಿ ಇರುವುದು ಪಶ್ಚಿಮ ಬಂಗಾಳದಲ್ಲಿ. ಇಲ್ಲಿ ಶೇಕಡಾ 30ರಷ್ಟು ಮುಸ್ಲಿಂ ಮತದಾರರಿದ್ದಾರೆ. ಇವರ ಮತಗಳು 2011ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಗೆ ನೆರವಾಗಿದ್ದವು. ಎಡರಂಗ ಸೋತ ನಂತರ ರಾಜ್ಯದ ಅಲ್ಪಸಂಖ್ಯಾತ ಮತಗಳು ಮಮತಾ ಬ್ಯಾನರ್ಜಿಯವರ ಟಿಎಂಸಿ ಪಾಲಾಗಿದ್ದವು.

    ಆದರೆ ಇದೀಗ ಮುಸ್ಲಿಂ ಪಕ್ಷವೇ ಚುನಾವಣಾ ಕಣಕ್ಕೆ ಇಳಿದರೆ ತಮ್ಮ ಕಥೆ ಏನು ಎಂಬ ಚಿಂತೆ ದೀದಿಗೆ ಶುರುವಾಗಿದೆ. ದೇಶದ ಮುಸ್ಲಿಂ ಮತಗಳನ್ನು ಧ್ರುವೀಕರಿಸುತ್ತಿರುವ ಓವೈಸಿಯಿಂದ ಈ ಮತಗಳಲ್ಲಿ ಒಡಕು ಹುಟ್ಟಲಿದೆ. ಇದು ಟಿಎಂಸಿ ಸೋಲಿಗೆ ಕಾರಣವಾಗಬಹುದು ಎನ್ನುವ ಚರ್ಚೆ ಶುರುವಾಗಿದೆ. ಆದ್ದರಿಂದ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಮತಗಳಿಕೆಗೆ ಸವಾಲಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

    ಪಶ್ಚಿಮಬಂಗಾಳದ ವಿಧಾನಸಭೆಯಲ್ಲಿ 294 ಸದಸ್ಯರ ಬಲವಿದೆ. ಸುಮಾರು 100-110 ಸ್ಥಾನಗಳಲ್ಲಿ ನಿರ್ಣಾಯಕ ಅಂಶವೆಂದರೆ, ಅಲ್ಪಸಂಖ್ಯಾತರು ವಿಶೇಷವಾಗಿ ಮುಸ್ಲಿಮರು. ಓವೈಸಿಯ ಪ್ರಬಲ ಟಾರ್ಗೆಟ್ ದಲಿತ ಮತ್ತು ಮುಸ್ಲಿಂ ಮತಗಳು. 2019 ರವರೆಗೆ, ಟಿಎಂಸಿಯ ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಭದ್ರಕೋಟೆಯಾಗಿ ಕಾರ್ಯನಿರ್ವಹಿಸಿದ್ದಾರೆ, ಅವರಲ್ಲಿ ಹೆಚ್ಚಿನವರು ಪಕ್ಷದ ಪರವಾಗಿ ಮತ ಚಲಾಯಿಸಿದ್ದಾರೆ. ಬಿಜೆಪಿಯನ್ನು ಮಣಿಸಲು ಇದೇ ಟಿಎಂಸಿಗೆ ನೆರವಾಗಿತ್ತು.

    ಆತ್ಮನಿರ್ಭರ್​ ಭಾರತ್​ 3.0 ಘೋಷಣೆ- ಕಡಿಮೆ ವೇತನದಾರರಿಗೆ ಸಿಗಲಿದೆ ಇಪಿಎಫ್​

    ಗೂಗಲ್​ ಬಳಕೆದಾರರಿಗೆ ಬಿಗ್​ ಶಾಕ್​- ಇನ್ಮುಂದೆ ಫೋಟೋ, ವಿಡಿಯೋಗಳಿಗೆ ಶುಲ್ಕ!

    ಡ್ರೈವಿಂಗ್​ ಕಲಿಯುವವರೇ ಎಚ್ಚರ… ಟೆಕ್ಕಿಯಿಂದ ಎರಡೂವರೆ ಲಕ್ಷ ದೋಚಿದ ತರಬೇತುದಾರ​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts