More

    VIDEO: ಲೋ ಮಂಟಪದಲ್ಲೇ ಗುಟ್ಕಾ ತಿಂತ್ಯಾ? ಮದುಮಗನಿಗೆ ಟಪಾರ್‌ ಬಾರಿಸಿದ ವಧು; ವರ ಎಸ್ಕೇಪ್‌!

    ನವದೆಹಲಿ: ಗುಟ್ಕಾಪ್ರಿಯ ಗಂಡ ತನ್ನ ಮದುವೆಯ ದಿನವೂ ಗುಟ್ಕಾ ತಿಂದು ಮದುವೆ ಮನೆಯಲ್ಲಿಯೇ ಮದುಮಗಳ ಕೈಯಿಂದ ಕೆನ್ನೆಗೆ ಬಾರಿಸಿಕೊಂಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

    ಕೆಲ ತಿಂಗಳ ಹಿಂದೆ ನಡೆದಿರುವ ಈ ಮದುವೆ ವಿಡಿಯೋ ಈಗ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಹಲವರು ಇದನ್ನು ನಗೆಗಡಲಿನಲ್ಲಿ ತೇಲಿಸಿದೆ. ಆದರೆ ಕೆಲವರು ಮಾತ್ರ ಮದುಮಗಳ ಈ ವರ್ತನೆಗೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ವಿಡಿಯೋದಲ್ಲಿ ವಧು-ವರರಿಬ್ಬರು ಮದುವೆ ಮಂಟಪದಲ್ಲಿ ಕುಳಿತಿರುವುದನ್ನು ನೋಡಬಹುದು. ಆಗ ಗುಟ್ಕಾಪ್ರಿಯ ವರ ಗುಟ್ಕಾ ಅಗಿಯಲು ಶುರುಮಾಡುತ್ತಾನೆ. ಇದು ಗೊತ್ತಾಗುತ್ತಲೇ ವಧು ಸಿಕ್ಕಾಪಟ್ಟೆ ಸಿಟ್ಟಿಗೇಳುತ್ತಾಳೆ. ಮದುಮಗನಿಗೆ ಬೈಯಲು ಶುರು ಮಾಡುತ್ತಾಳೆ. ಇದನ್ನು ನೋಡಿದ ವರನ ಸ್ನೇಹಿತ ಮಧ್ಯೆ ಪ್ರವೇಶಿಸಿದಾಗ ಆತನ ಮೇಲೆ ವಧು ಹರಿಹಾಯ್ದು ಆತನಿಗೆ ಹೊಡೆಯುತ್ತಾಳೆ. ಬಳಿಕ ಮದುವೆಯಲ್ಲಿಯೂ ಗುಟ್ಕಾ ಸೇವಿಸುತ್ತಿಯಾ ಎಂದು ಸಿಟ್ಟಿನಲ್ಲಿ ವರನನ್ನು ತಳ್ಳಿ ನಂತರ ಕಪಾಳಕ್ಕೆ ಹೊಡೆಯುತ್ತಾಳೆ.

    ಕೂಡಲೇ ಗುಟ್ಕಾ ಉಗಿಯುವಂತೆ ಹೇಳುತ್ತಾಳೆ. ನಂತರ ವಧುವಿನ ಕೋಪಕ್ಕೆ ಹೆದರಿ ವರ ಗುಟ್ಕಾ ಉಗುಳುತ್ತಾನೆ. ಇವಿಷ್ಟು ವಿಡಿಯೋದಲ್ಲಿ ನೋಡಬಹುದಾಗಿದೆ.

    ಈ ವಿಡಿಯೋ ನೋಡಿ:

    VIDEO: ಸೀರೆ ಉಟ್ಟಿದ್ದೀರಿ, ನಿಮ್ಮಂಥವರಿಗೆ ಪ್ರವೇಶವಿಲ್ಲ- ದೆಹಲಿ ಹೋಟೆಲ್‌ ಸಿಬ್ಬಂದಿ ಧಮ್ಕಿ!

    ಮಗಳ ಸಾವಿಗೆ ಅಳಿಯನ ಖಾಸಗಿ ಅಂಗ ಕಾರಣ ಎಂದು ತಂದೆಯ ದೂರು: ಗಾತ್ರ ಪರೀಕ್ಷಿಸಿದ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts