More

    ಲತಾ ನಿಧನದ ಹಿನ್ನೆಲೆ: ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮ ರದ್ದು ಮಾಡಿದ ಬಿಜೆಪಿ, ಎರಡು ದಿನ ಶೋಕಾಚರಣೆ

    ಲಖನೌ: ಗಾನಕೋಗಿಲೆ ಲತಾ ಮಂಗೇಶ್ಕರ್‌ ಇಂದು ನಿಧನರಾದ ಬೆನ್ನಲ್ಲೇ ದೇಶ, ವಿದೇಶಗಳ ಗಣ್ಯರಿಂದ ಸಂತಾಪಗಳ ಸುರಿಮಳೆಯಾಗುತ್ತಿದೆ. ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಹಲವು ಗಣ್ಯರು ಲತಾ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ.

    ಈ ನಡುವೆಯೇ, ಉತ್ತರ ಪ್ರದೇಶದಲ್ಲಿ ಇಂದು ನಡೆಯಬೇಕಿದ್ದ ಬಿಜೆಪಿ ಚುನಾವಣಾ ಪ್ರಣಾಳಿಕೆ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಲತಾ ಮಂಗೇಶ್ಕರ್ ಅವರಿಗೆ ಗೌರವ ಸಲ್ಲಿಸಲು ಬಿಜೆಪಿಯು ಉತ್ತರ ಪ್ರದೇಶದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮ ರದ್ದುಗೊಳಿಸಿರುವುದಾಗಿ ಪಕ್ಷ ಹೇಳಿದೆ. ಕೇಂದ್ರ ಸಚಿವ ಅಮಿತ್ ಷಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪಕ್ಷದ ನಾಯಕರಾದ ಸ್ವತಂತ್ರ ದೇವ್ ಮತ್ತು ಕೇಶವ್ ಮೌರ್ಯ ಸೇರಿದಂತೆ ಹಲವಾರು ಗಣ್ಯರು ಲತಾ ಮಂಗೇಶ್ಕರ್‌ ಅವರ ನಿಧನದ ಹಿನ್ನೆಲೆಯಲ್ಲಿ ಎರಡು ನಿಮಿಷ ಮೌನಾಚರಣೆ ಮಾಡಿದರು. ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದಾಗಿ ಹೇಳಿದರು.

    ಅಪ್ರತಿಮ ಗಾಯಕಿಯ ಅಂತ್ಯಕ್ರಿಯೆಗಾಗಿ ಸರ್ಕಾರ ಎರಡು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ನಾನು ಹೇಳಲಾಗದಷ್ಟು ದುಃಖಿತನಾಗಿದ್ದೇನೆ, ದಯೆ ಮತ್ತು ಕಾಳಜಿಯುಳ್ಳ ಲತಾ ದೀದಿ ನಮ್ಮನ್ನು ಅಗಲಿದ್ದಾರೆ. ಮುಂಬರುವ ಪೀಳಿಗೆಗಳು ಅವರನ್ನು ಭಾರತೀಯ ಸಂಸ್ಕೃತಿಯ ಧೀಮಂತಿಕೆ ಎಂದು ನೆನಪಿಸಿಕೊಳ್ಳುತ್ತವೆ, ಅವರ ಮಧುರ ಧ್ವನಿಯು ಜನರನ್ನು ಮಂತ್ರಮುಗ್ಧಗೊಳಿಸುವ ಅಪ್ರತಿಮ ಸಾಮರ್ಥ್ಯವನ್ನು ಹೊಂದಿತ್ತು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

    ನಾನು ಹೇಳಲಾಗದಷ್ಟು ದುಃಖಿತನಾಗಿದ್ದೇನೆ. ದಯೆ ಮತ್ತು ಕಾಳಜಿಯುಳ್ಳ ಲತಾ ದೀದಿ ನಮ್ಮನ್ನು ಅಗಲಿದ್ದಾರೆ. ಅವರು ನಿಧನದಿಂದ ಶೂನ್ಯ ಆವರಿಸಿದೆ. ಮುಂಬರುವ ಪೀಳಿಗೆಗಳು ಲತಾ ಮಂಗೇಶ್ಕರ್ ಅವರನ್ನು ಭಾರತೀಯ ಸಂಸ್ಕೃತಿಯ ನಿಷ್ಠಾವಂತರು ಎಂದೇ ಗುರುತಿಸುತ್ತವೆ. ಅವರ ಧ್ವನಿಯಲ್ಲಿ ಜನರನ್ನು ಮಂತ್ರ ಮುಗ್ದಗೊಳಿಸುವ ಸಾಮರ್ಥ್ಯ ಇತ್ತು ಎಂದು ಪ್ರಧಾನಿ ಮೋದಿ ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

    ಪ್ರೀತಿಸಿದ್ದೇ ತಪ್ಪಾಯ್ತು! ಬಾವಿಯಲ್ಲಿ ಯುವಕನ ಶವ, ಕೊಲೆಯೋ- ಆತ್ಮಹತ್ಯೆಯೋ ಬಗೆಹರಿಯದ ಸಮಸ್ಯೆ

    ಸೊಸೆಗೆ ಬ್ರಿಟನ್‌ ರಾಣಿಪಟ್ಟ ಹಸ್ತಾಂತರಿಸಿದ ಅತ್ತೆ: 70 ವರ್ಷಗಳ ಆಡಳಿತಕ್ಕೆ ಅಂತ್ಯಹಾಡಿದ ಎರಡನೇ ಎಜಿಜಬೆತ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts