More

    ಸಿರಿಧಾನ್ಯ ಸಂಶೋಧನಾ ಸಂಸ್ಥೆಗೆ ಬೇಕಾಗಿದ್ದಾರೆ ಟೆಕ್ನಿಕಲ್ ಅಸಿಸ್ಟೆಂಟ್ಸ್- ಕರ್ನಾಟಕದಲ್ಲಿಯೂ ಅವಕಾಶ

    ಇಂಡಿಯನ್ ಕೌನ್ಸಿಲ್ ಆಫ್​ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) ಅಧೀನದಲ್ಲಿ ಕಾರ್ಯನಿರ್ವಹಿಸುವ ಇಂಡಿಯನ್ ಇನ್‍ಸ್ಟಿಟ್ಯೂಟ್ ಆï ಮಿಲ್ಲೆಟ್ಸ್ ರಿಸರ್ಚ್‍ನಲ್ಲಿ (ಐಐಎಂಆರ್) ಆರಂಭಿಸುತ್ತಿರುವ ವಿವಿಧ ಹೊಸ ಯೋಜನೆಗಳಿಗೆ ಟೆಕ್ನಿಕಲ್ ಅಸಿಸ್ಟೆಂಟ್ಸ್‍ಗಳ ನೇಮಕ ಮಾಡಿಕೊಳ್ಳಲಾಗುತ್ತಿದೆ.
    ಒಟ್ಟು ಹುದ್ದೆಗಳು: 11

    ಐಐಎಂಆರ್​ನ ಕರ್ನಾಟಕ ಮತ್ತು ಹೈದರಾಬಾದ್ ಶಾಖೆಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು. ಇತರ ಮಾರ್ಗಗಳಿಂದ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಝೂಮ್ ಪ್ಲಾಟ್​ಫಾರ್ಮ್ ಮೂಲಕ ಏ.15ರಂದು ಆನ್‍ಲೈನ್ ಸಂದರ್ಶನ ನಡೆಸಲಾಗುವುದು.

    ಹುದ್ದೆ ವಿವರ:
    Formation and Promotion of Farmer Producer Organizations (FPOs) under Central Sector Scheme for formation and promotion of 10,000 FPOs ಯೋಜನೆಯಲ್ಲಿ 4 ಟೆಕ್ನಿಕಲ್ ಅಸಿಸ್ಟೆಂಟ್ ಹಾಗೂ Formation and Promotion of Farmer Producer Organizations (FPOs) for Oilseed Crop and Oil palm under Central Sector Scheme for formation and promotion of 10,000 FPOs ಯೋಜನೆಯಲ್ಲಿ 5 ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿವೆ.

    ಈ ಹುದ್ದೆಗಳಿಗೆ ಕರ್ನಾಟಕದ ವಿಜಯಪುರ ಕಾರ್ಯಕ್ಷೇತ್ರವಾಗಿರಲಿದೆ. ರೂರಲ್ ಡೆವಲಪ್‍ಮೆಂಟ್/ ಸೋಷಿಯಲ್ ವರ್ಕ್‍ನಲ್ಲಿ ಪದವಿ ಪಡೆದಿದ್ದು, ಎïಪಿಒಸ್/ ಲಾರ್ಜ್ ಫಾರ್ಮರ್ಸ್ ಗ್ರೂಪ್ಸ್/ ಫೀಲ್ಡ್ ಡೊಮೆಸ್ಟ್ರೇಷನ್/ ಗ್ರಾಮೀಣ ಮಟ್ಟದ ಸಭೆಗಳನ್ನು ಆಯೋಜಿಸಿರುವ ಅನುಭವ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಮೇಲಿನ ಎರಡು ಯೋಜನೆಗಳಲ್ಲಿ 1 ಪ್ರಾಜೆಕ್ಟ್ ಕೋ-ಆರ್ಡಿನೇಟರ್ ಹುದ್ದೆ, 1 ಇನ್ಫಾರ್ಮೇಷನ್ ಟೆಕ್ನಾಲಜಿಸ್ಟ್/ಎಂಐಎಸ್‍ನಲ್ಲಿ 1 ಹುದ್ದೆ ಇದೆ. ಅಗ್ರಿಬುಸಿನೆಸ್ ಮ್ಯಾನೇಜ್‍ಮೆಂಟ್‍ನಲ್ಲಿ ಎಂಬಿಎ, ಕಂಪ್ಯೂಟರ್ ಸೈನ್ಸ್/ ಇನ್ಫಾರ್ಮೇಷನ್ ಟೆಕ್ನಾಲಜಿಯಲ್ಲಿ ಎಂಟೆಕ್/ ಎಂಸಿಎ ಓದಿರಬೇಕು. ಈ ಹುದ್ದೆಗಳಿಗೆ ಐಸಿಎಆರ್-ಐಐಎಂಆರ್ ಹೈದರಾಬಾದ್ ಕಾರ್ಯಕ್ಷೇತ್ರ ವಾಗಿರಲಿದೆ.

    ವಯೋಮಿತಿ: ಗರಿಷ್ಠ 35 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

    ವೇತನ: ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ ಮಾಸಿಕ 15,000 ರೂ. ವೇತನ ಇದೆ. ಪ್ರಾಜೆಕ್ಟ್ ಕೋ-ಆರ್ಡಿನೇಟರ್‍ಗೆ ಮಾಸಿಕ 30,000 ರೂ., ಇನ್ಫಾರ್ಮೇಷನ್ ಟೆಕ್ನಾಲಜಿಸ್ಟ್‍ಗೆ ಮಾಸಿಕ 20,000 ರೂ. ವೇತನ ಇದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 10.4.2021
    ಅಧಿಸೂಚನೆಗೆ: https://bit.ly/3frGg6S
    ಮಾಹಿತಿಗೆ: http://www.millets.res.in

    ವಿಶೇಷ ವ್ಯಕ್ತಿಯನ್ನು ಭೇಟಿಯಾಗಲು ಬಂದು ದೇವರ ಮುಂದೆ ಕಣ್ಣೀರು ಸುರಿಸಿದ ನಟಿ ಕಂಗನಾ ರಣಾವತ್​

    ಕರೊನಾ ಮಾರ್ಗಸೂಚಿ ಎರ್ರಾಬಿರ್ರಿ ಮಾಡಿದ್ರೆ ಹುಷಾರ್​, ಸರ್ಕಾರಕ್ಕೇ ಎಚ್ಚರಿಕೆ ನೀಡಿದ ಡಿಕೆಶಿ!

    ಮಗು ಗರ್ಭದಲ್ಲಿದ್ದಾಗಲೇ ಮತ್ತೊಮ್ಮೆ ಗರ್ಭ ಧರಿಸಿದ ಮಹಿಳೆ- ನಂಬಲು ಆಗ್ತಿಲ್ವಾ? ಈ ಘಟನೆ ಓದಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts