More

    ನಾರಿನ ಅಂಶ ಒದಗಿಸುವ ಸಿರಿಧಾನ್ಯ ಬೆಳೆಯಿರಿ

    ಅಳವಂಡಿ: ಸಿರಿಧಾನ್ಯ ರೋಗ ನಿರೋಧಕ ಶಕ್ತಿ ವೃದ್ಧಿಸುವ ಪೌಷ್ಟಿಕ ಆಹಾರವಾಗಿದ್ದು, ಪ್ರತಿದಿನ ಎಲ್ಲರೂ ಬಳಸಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಯೋಜನಾಧಿಕಾರಿ ಜಯಾನಂದ ತಿಳಿಸಿದರು.

    ಇದನ್ನೂ ಓದಿ: ಸಂವಿಧಾನ ಜಾಗೃತಿ: ಸಿರಿಧಾನ್ಯದಲ್ಲಿ ಅರಳಿದ ಸಂವಿಧಾನ ಶಿಲ್ಪಿ

    ಸಮೀಪದ ಹಟ್ಟಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಪ್ಪಳ ಹಾಗೂ ರೈತ ಉತ್ಪಾದನೆ ಕಂಪನಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಿರಿ ಧಾನ್ಯಗಳ ಮಾಹಿತಿ ಸಭೆಯಲ್ಲಿ ಶುಕ್ರವಾರ ಮಾತನಾಡಿದರು.

    ಸಿರಿಧಾನ್ಯಗಳು ಅಪೌಷ್ಟಿಕತೆ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ದೇಹಕ್ಕೆ ಬೇಕಾದ ಅತ್ಯಗತ್ಯ ನಾರಿನ ಅಂಶವನ್ನು ಒದಗಿಸುತ್ತವೆ ಹಾಗೂ ಪಚನ ಕ್ರಿಯೆ ಸರಳಗೊಳಿಸುತ್ತವೆ. ಕಾರಣ ಸಿರಿಧಾನ್ಯ ಬೆಳೆಯಿರಿ ಹಾಗೂ ಬಳಸಿರಿ ಎಂದರು.

    ರೈತರಿಗೆ ಸಿರಿ ಧಾನ್ಯ ಬೆಳೆಯುವುದರ ಬಗ್ಗೆ, ಮಾರುಕಟ್ಟೆ , ಬೀಜ ವ್ಯವಸ್ಥೆ ಪ್ರೋತ್ಸಾಹಧನದ ಬಗ್ಗೆ ಮಾಹಿತಿ ನೀಡಿದರು.
    ರೈತ ಉತ್ಪಾದನೆ ಕಂಪನಿಯ ಸಂಚಾಲಕ ಮಂಜುನಾಥ, ಕೃಷಿ ಮೇಲ್ವಿಚಾರಕ ಅಶೋಕ, ರೈತರಾದ ಕೋಟೇಶ, ಅಂದಪ್ಪ. ಮುರ್ತುಜ ಸಾಬ್, ಗುಲಾಬ್‌ಸಾಬ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts