More

    ಪದವೀಧರರಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೇಮಕಾತಿ: 60 ಸಾವಿರ ರೂ.ವರೆಗೆ ಸಂಬಳ

    ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್​ಎಚ್​ಎಂ) ಯೋಜನೆಯಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯಿಂದ ಅರ್ಜಿ ಆಹ್ವಾನಿಸಲಾಗಿದೆ.

    ಆಸಕ್ತ ಅಭ್ಯರ್ಥಿಗಳು –https://karunadu.karnataka.gov.in/hfw ವೆಬ್​ಸೈಟ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಮೆಂಟಲ್ ಹೆಲ್ತ್, ಮೆಟರ್ನಲ್ ಹೆಲ್ತ್, ಡೆಮೋಗ್ರಫಿ, ಎನ್​ಯುಫ್ಎಚ್​ಎಂ, ಸಿಪಿಎಚ್​ಸಿ-ಯುಎಚ್​ಸಿ, ಎನ್​ಟಿಸಿಪಿ, ಎನ್​ವಿಎಚ್​ಸಿಪಿ, ಮಕ್ಕಳ ಆರೋಗ್ಯ ಕಾರ್ಯಕ್ರಮ/ ವಿಭಾಗಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪ್ರತಿ ಹುದ್ದೆಗೂ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಕನ್ನಡ ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು. ಅಭ್ಯರ್ಥಿಗಳು ಗೂಗಲ್ ಫಾರ್ಮ್​ ಲಿಂಕ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು, ಶಾರ್ಟ್​ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

     

    ಹುದ್ದೆ ವಿವರ

    * ಸಲಹೆಗಾರರು ಕನ್ಸಲ್ಟಂಟ್ – ಮೆಟರ್ನಲ್ ಹೆಲ್ತ್ ಆಂಡ್ ಫ್ಯಾಮಿಲಿ ಪ್ಲಾನಿಂಗ್ – 1

    * ಲಕ್ಷ್ಯ ಕಾರ್ಯಕ್ರಮ ಸಮನ್ವಯಕಾರ – 1

    * ಎಚ್​ಎಂಐಎಸ್ ಆಂಡ್ ಎಂಸಿಟಿಎಸ್ ಸಮನ್ವಯಕಾರ – 1

    * ಸಲಹೆಗಾರರು (ಎಚ್ ಆಂಡ್​ಪಿ) – 1

    * ಕಾರ್ಯಕ್ರಮ ಸಹಾಯಕ – 2

    * ಸಿಎಸ್​ಟಿ ಸಮನ್ವಯಕಾರರು – 1

    * ಸಲಹೆಗಾರರು – ಚೈಲ್ಡ್ – 1

    ಶೈಕ್ಷಣಿಕ ಅರ್ಹತೆ: ಬಿಬಿಎ/ ಬಿಬಿಎಂ, ಕಂಪ್ಯೂಟರ್ ಸೈನ್ಸ್/ ಇನ್​ಫಮೇಷನ್ ಸೈನ್ಸ್​ನಲ್ಲಿ ಬಿಇ, ಸ್ಟಾ್ಯಟಿಸ್ಟಿಕ್ಸ್, ಗಣಿತದಲ್ಲಿ ಎಂಎಸ್ಸಿ/ ಅರ್ಥಶಾಸ್ತ್ರದಲ್ಲಿ ಎಂಎ, ಎಂಬಿಬಿಎಸ್, ಎಂಡಿ, ಬಿಡಿಎಸ್, ಮಾಸ್ಟರ್ ಇನ್ ಪಬ್ಲಿಕ್ ಹೆಲ್ತ್, ಮಾಸ್ಟರ್ ಇನ್ ಅಪ್ಲೈಡ್ ಎಪಿಡೆಮಿಯೋಲಜಿ (ಎಂಇಎ), ಎಂಎಸ್​ಡಬ್ಲ್ಯು ಮಾಡಿದ್ದು, ಕನಿಷ್ಠ 1-3 ವರ್ಷದ ವೃತ್ತಿ ಅನುಭವ ಕೇಳಲಾಗಿದೆ. ಕಂಪ್ಯೂಟರ್ ಜ್ಞಾನ ಅವಶ್ಯ.

     

    ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 40 ರಿಂದ 65 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

    ವೇತನ: ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 25,000 ರೂ.ನಿಂದ 60,000 ರೂ. ವರೆಗೆ ವೇತನ ನಿಗದಿಪಡಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 5.8.2021

    ಅಧಿಸೂಚನೆಗೆ:https://bit.ly/3yeUu1n

    ಮಾಹಿತಿಗೆ: http://karunadu.karnataka.gov.in

    ವಿಜ್ಞಾನ ಪದವೀಧರರಿಗೆ ಕೇಂದ್ರದ ಜವಳಿ ಸಚಿವಾಲಯದ ಎನ್​ಐಎಫ್​ಟಿಯಲ್ಲಿ ಉದ್ಯೋಗಾವಕಾಶ

    ಕೇಂದ್ರ ಸರ್ಕಾರಿ ಇಲಾಖೆಯಲ್ಲಿ ಬೋಧಕ, ಬೋಧಕೇತರ 20 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts