More

    ವಿವಿಧ ಕ್ರೀಡಾಪಟುಗಳಿಗೆ ರೈಲ್ವೆಯಲ್ಲಿ ಅವಕಾಶ: 95 ಸಾವಿರ ರೂ.ವರೆಗೆ ಸಂಬಳ

    ಪಶ್ಚಿಮ ರೈಲ್ವೆ ವಲಯದಲ್ಲಿ (ವೆಸ್ಟ್ರನ್ ರೈಲ್ವೆ) ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳಿಗೆ ಕ್ರೀಡಾಪಟುಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. 2020-21ನೇ ಸಾಲಿನ ನೇಮಕಾತಿ ಇದಾಗಿದ್ದು,ಗ್ರೂಪ್ ಸಿ ದರ್ಜೆಯ ಉದ್ಯೋಗ ನೀಡಲಾಗುತ್ತಿದೆ. ಹುದ್ದೆಗಳಲ್ಲಿ ಜಾತಿ ಆಧಾರಿತ ಮೀಸಲಾತಿ ಇರುವುದಿಲ್ಲ ಎಂದು ತಿಳಿಸಲಾಗಿದೆ. ವೇತನ ಶ್ರೇಣಿ 2/3ರ ಹುದ್ದೆಗೆ ಮಾಸಿಕ 19,900-69,100 ರೂ. ಹಾಗೂ ವೇತನ ಶ್ರೇಣಿ4-5ರ ಹುದ್ದೆಗೆ ಮಾಸಿಕ 25,500-92,300 ರೂ. ವೇತನ ನೀಡಲಾಗುವುದು.

    ಒಟ್ಟು ಹುದ್ದೆಗಳು: 21

    ಯಾವ ಕ್ರೀಡಾಪಟುಗಳಿಗೆ ಅವಕಾಶ

    – ವೇತನ ಶ್ರೇಣಿ 4/5 ಅಡಿ ನೇಮಕ ಮಾಡಿಕೊಳ್ಳಲಾಗುವ ಹುದ್ದೆಗಳು – 5

    * ಅಥ್ಲೆಟಿಕ್ಸ್ (800/ 1500 ಮೀ/ 5000/10000 ಮೀ) – 1

    * ಹ್ಯಾಂಡ್ ಬಾಲ್ (ಗೋಲ್ಕೀಪರ್/ ಆಲ್ ರೌಂಡರ್/ ಲೆಫ್ಟ್ ಹ್ಯಾಂಡ್ ಅಟ್ಯಾಕರ್) – 1

    * ಹಾಕಿ (ಗೋಲ್ಕೀಪರ್/ ಅಟ್ಯಾಕರ್/ ಡಿಫೆಂಡರ್) – 2

    * ಬಾಸ್ಕೆಟ್​ಬಾಲ್ (ಆಲ್​ರೌಂಡರ್/ ಅಟ್ಯಾಕರ್/ ಡಿಫೆಂಡರ್) – 1

    – ವೇತನ ಶ್ರೇಣಿ 2/3ರ ಅಡಿಯಲ್ಲಿನ ಹುದ್ದೆಗಳು

    * ಅಥ್ಲೆಟಿಕ್ಸ್ (800/1500/ 5000/10000 ಮೀ/ ಲಾಂಗ್ ಜಂಪ್/ ತ್ರಿಪಲ್ ಜಂಪ್/ ಪೋಲ್ ವಾಲ್ಟ್) – 3

    * ಅಥ್ಲೆಟಿಕ್ಸ್ (100/ 200/ 5000/ 10000 ಮೀ./ ಹ್ಯಾಮರ್ ಥ್ರೋ/ ಶಾರ್ಟ್​ಫುಟ್/ ತ್ರಿಪಲ್ ಜಂಪ್) – 3

    * ಕ್ರಿಕೆಟ್ (ಮೀಡಿಯಂ ಪೇಸ್ ಬೌಲರ್/ ಆರಂಭಿಕ ಬ್ಯಾಟ್ಸ್​ಮನ್/ ವಿಕೆಟ್ಕೀಪರ್) – 1

    * ಹಾಕಿ (ಗೋಲ್ಕೀಪರ್/ ಅಟ್ಯಾಕರ್/ ಡಿಫೆಂಡರ್) – 1

    * ಬಾಸ್ಕೆಟ್​ಬಾಲ್ (ಆಲ್​ರೌಂಡರ್/ ಅಟ್ಯಾಕರ್/ ಡಿಫೆಂಡರ್) – 2

    * ಡೈವಿಂಗ್ (ಹೈ ಬೋರ್ಡ್/ 1 ಮೀ ಸ್ಪ್ರಿಂಗ್ ಬೋರ್ಡ್/ 3ಎಂ ಸ್ಪ್ರಿಂಗ್ ಬೋರ್ಡ್) – 1

    * ಕುಸ್ತಿ (57 ಕೆಜಿ/ 61 ಕೆಜಿ/ 92 ಕೆಜಿ/ 125 ಕೆಜಿ) – 1

    * ಹ್ಯಾಂಡ್ ಬಾಲ್ (ಗೋಲ್ಕೀಪರ್/ ಆಲ್ ರೌಂಡರ್/ ಲೆಫ್ಟ್ ಹ್ಯಾಂಡ್ ಅಟ್ಯಾಕರ್) – 2

    * ವಾಟರ್​ಪೊಲೊ (ಅಟ್ಯಾಕರ್) – 1

    * ಟೇಬಲ್ ಟೆನಿಸ್ (ಸಿಂಗಲ್/ ಡಬಲ್) – 1

    ಶೈಕ್ಷಣಿಕ ಅರ್ಹತೆ: ವೇತನ ಶ್ರೇಣಿ 2-3ರ ಹುದ್ದೆಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಶಿಕ್ಷಣ, ವೇತನ ಶ್ರೇಣಿ 4-5ರ ಹುದ್ದೆಗೆ ಯಾವುದೇ ಪದವಿ ಪಡೆದಿರಬೇಕು. ಜತೆ ಕ್ರೀಡಾ ಸಾಧನೆಗಳು ಅವಶ್ಯ.

    ವಯೋಮಿತಿ: 1.1.2022ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

    ಅರ್ಜಿ ಶುಲ್ಕ: ಎಸ್​ಸಿ, ಎಸ್​ಟಿ, ಮಾಜಿ ಸೈನಿಕ, ಅಂಗವಿಕಲ, ಮಹಿಳಾ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 250 ರೂ. ನಿಗದಿಪಡಿಸಿದ್ದು, ಇತರ ಅಭ್ಯರ್ಥಿಗಳಿಗೆ 500 ರೂ. ಪಾವತಿಸಬೇಕು.

    ಯಾವ ಸಾಧನೆ ಪರಿಗಣನೆ?: * ಒಲಿಂಪಿಕ್ ಗೇಮ್ ವಿಶ್ವ ಕಪ್, ವಿಶ್ವ ಚಾಂಪಿಯನ್​ಷಿಪ್, ಏಷಿಯನ್ ಗೇಮ್ಸ್​, ಕಾಮನ್​ವೆಲ್ತ್ ಗೇಮ್್ಸ, ಯೂಥ್ ಒಲಿಂಪಿಕ್ಸ್, ಡೇವಿಸ್ ಕಪ್, ಚಾಂಪಿಯನ್ಸ್ ಟ್ರೋಫಿ, ಥಾಮಸ್/ಊಬರ್ ಕಪ್, ಕಾಮನ್​ವೆಲ್ತ್ ಚಾಂಪಿಯನ್​ಷಿಪ್, ಏಷಿಯನ್ ಚಾಂಪಿಯನ್​ಷಿಪ್/ ಏಷಿಯಾ ಕಪ್, ಸೌತ್ ಏಷಿಯಾ ಫೆಡರೇಷನ್ ಗೇಮ್್ಸ, ಯುಎಸ್​ಐಸಿ (ವರ್ಲ್ಡ್ ರೈಲ್ವೆ) ಚಾಂಪಿಯನ್​ಷಿಪ್, ವರ್ಲ್ಡ್ ಯನಿವರ್ಸಿಟಿ ಗೇಮ್ಸ್​ಗಳಲ್ಲಿ ದೇಶವನ್ನು ಪ್ರತಿನಿಧಿಸಿರಬೇಕು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಸಾಧನೆ ಮಾಡಿರಬೇಕು.

    ಅರ್ಜಿ ಸಲ್ಲಿಸಲು ಕೊನೇ ದಿನ: 3.9.2021

    ಅಧಿಸೂಚನೆಗೆ: https://bit.ly/37amDuI

    ಮಾಹಿತಿಗೆ: http://www.rrc-wr.com

    ಹತ್ತಿ ಸಂಶೋಧನಾ ಸಂಸ್ಥೆಯಲ್ಲಿ ಯಂಗ್ ಪ್ರೊಫೆಷನಲ್ಸ್ ಹುದ್ದೆಗೆ ಅರ್ಜಿ ಆಹ್ವಾನ

    ಪದವೀಧರರಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೇಮಕಾತಿ: 60 ಸಾವಿರ ರೂ.ವರೆಗೆ ಸಂಬಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts