More

    ಪ್ರೊಫೆಸರ್​, ಲ್ಯಾಬ್​ ಅಸಿಸ್ಟೆಂಟ್​ ಆಕಾಂಕ್ಷಿಗಳಿಗೆ ಉತ್ತಮ ಅವಕಾಶ: ಇಂದು, ನಾಳೆ ಸಂದರ್ಶನ

    ಕರ್ನಾಟಕದ ಮೈಸೂರಿನಲ್ಲಿರುವ ಪ್ರಾದೇಶಿಕ ಶಿಕ್ಷಣ ಸಂಸ್ಥೆ (ರೀಜನಲ್ ಇನ್‍ಸ್ಟಿಟ್ಯೂಟ್ ಆಫ್ ಎಜುಕೇಷನ್)ನಲ್ಲಿ ವಿವಿಧ ಹುದ್ದೆಗಳಿಗೆ 2021-22ನೇ ಶೈಕ್ಷಣಿಕ ಸಾಲಿನ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.
    ಒಟ್ಟು ಹುದ್ದೆಗಳು: 10

    ಹುದ್ದೆ ವಿವರ
    – ಅಸಿಸ್ಟೆಂಟ್ ಪ್ರೊಫೆಸರ್
    * ಮ್ಯಾಥಮೆಟಿಕ್ಸ್ – 2
    * ಪೆಡಗೊಜಿ ಆಫ್​ ಸೋಷಿಯಲ್ ಸೈನ್ಸ್ – 1
    * ಸೈಕಾಲಜಿ/ ಗೈಡೆನ್ಸ್ ಕೌನ್ಸೆಲಿಂಗ್ – 1
    * ಕೆಮಿಸ್ಟ್ರಿ – 1
    – ಲ್ಯಾಬ್ ಅಸಿಸ್ಟೆಂಟ್ (ಬಾಟ್ನಿ, ಫಿಜಕ್ಸ್, ಸೈಕಾಲಜಿ, ಕೆಮಿಸ್ಟ್ರಿ) – 4

    ಶೈಕ್ಷಣಿಕ ಅರ್ಹತೆ: ಬಿಎಸ್ಸಿ (ಪಿಸಿಎಂ, ಸಿಬಿಜಡ್), ಗಣಿತಶಾಸ (ಡಿಫರೆನ್ಷಿಯಲ್ ಈಕ್ವೇಷನ್/ ಗ್ರಾಫ್​ ಥಿಯರಿ/ ಮೆಷರ್ ಥಿಯರಿ/ ಅನಲಿಸಿಸ್/ ಲೀನಿಯರ್ ಆಲ್‍ಜೀಬ್ರಾ)ದಲ್ಲಿ ಸ್ನಾತಕೋತ್ತರ ಪದವಿ, ಇತಿಹಾಸ, ಸೈಕೋಲಜಿ, ಸ್ಪೆಷಲ್ ಎಜುಕೇಷನ್, ಕೆಮಿಸ್ಟ್ರಿಯಲ್ಲಿ ಎಂ.ಇಡಿ, ಎಂಎ, ಎಂಎಸ್ಸಿ ಜತೆಗೆ ನೆಟ್/ ಕೆಸೆಟ್/ ಎಂ.ಫಿಲ್/ ಪಿಎಚ್.ಡಿ ಮಾಡಿರಬೇಕು. ಪದವಿಗಳಲ್ಲಿ ಕನಿಷ್ಠ ಶೇ.55 ಅಂಕ ಪಡೆದಿರಬೇಕು. ಮೀಸಲಾತಿ ಅಭ್ಯರ್ಥಿಗಳಿಗೆ ಶೇ.5 ಅಂಕ ವಿನಾಯಿತಿ ಇದೆ.

    ವೇತನ: ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಮಾಸಿಕ 45,000 ರೂ. ವೇತನ ನೀಡಲಾಗುವುದು. ಲ್ಯಾಬ್ ಅಸಿಸ್ಟೆಂಟ್ ಹುದ್ದೆಗಳಿಗೆ ಮಾಸಿಕ 17,000 ರೂ. ನೀಡಲಾಗುವುದು.

    ವಯೋಮಿತಿ: ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಕೇಂದ್ರ ಸರ್ಕಾರ, ಎನ್‍ಸಿಇಆರ್​ಟಿ/ ಯುಜಿಸಿ ನಿಯಮಾನುಸಾರ ವಯೋಮಿತಿ ಇದೆ. ಲ್ಯಾಬ್ ಅಸಿಸ್ಟೆಂಟ್ ಹುದ್ದೆಗಳಿಗೆ ಗರಿಷ್ಠ 30 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.

    ಸಂದರ್ಶನ ನಡೆಯುವ ದಿನಾಂಕ: ಮಾ.29 ಮತ್ತು 30 ರಂದು ಬೆಳಗ್ಗೆ 10 ಗಂಟೆಯಿಂದ.
    ಸಂದರ್ಶನ ನಡೆಯುವ ಸ್ಥಳ: http://Regional Institute of Education(NCERT), Manasagangothri, Mysuru – 570006 Karnataka.

    ಅಧಿಸೂಚನೆಗೆ: https://bit.ly/3chGo6X
    ಮಾಹಿತಿಗೆ: http://www.riemysore.ac.in

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ವಿವಿಧ ವಿಷಯಗಳಲ್ಲಿ ಇಂಜಿನಿಯರಿಂಗ್​ ಮುಗಿಸಿರುವಿರಾ? ನಿಮಗಾಗಿ ಕಾದಿವೆ 120 ಹುದ್ದೆಗಳು

    ವಿವಿಧ ಪದವೀಧರರಿಗೆ ಎನ್​ಐಎಫ್​ಟಿಯಲ್ಲಿ ಭರ್ಜರಿ ಅವಕಾಶ: ಪ್ರೊಫೆಸರ್​ ಹುದ್ದೆಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts