More

    ಸೇನಾಪಡೆಯಲ್ಲಿ 40 ಲೆಫ್ಟಿನೆಂಟ್ ಹುದ್ದೆಗೆ ಆಹ್ವಾನ: ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ

    ಭಾರತೀಯ ಸೇನೆಯಲ್ಲಿ ಕೆಲಸಕ್ಕೆ ಸೇರಬೇಕೆಂಬ ಹಂಬಲ ಇಟ್ಟುಕೊಂಡ ಅಭ್ಯರ್ಥಿಗಳಿಗೆ ಡೆಹ್ರಾಡೂನ್‍ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮಿಯಿಂದ (ಐಎಂಎ) ಒಳ್ಳೆಯ ಅವಕಾಶ ಲಭ್ಯವಾಗಿದೆ. ಮಿಲಿಟರಿ ಅಕಾಡೆಮಿಯಲ್ಲಿ 2022ರ ಜನವರಿಯಲ್ಲಿ ಪ್ರಾರಂಭಿಸಲಾಗುತ್ತಿರುವ 134ನೇ ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್‍ಗೆ (ಟಿಜಿಸಿ-134) ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ನೀಡಲಾಗುವ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ ಸೇನೆಯಲ್ಲಿ ಲೆಫ್ಟಿನೆಂಟ್ ಹಂತದ ಹುದ್ದೆಗಳನ್ನು ನೀಡಲಾಗುವುದು. ತರಬೇತಿಯ ಅವಧಿಯು 49 ವಾರಗಳಾಗಿರುತ್ತದೆ. ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳು ವಿವಾಹವಾಗುವಂತಿಲ್ಲ.

    ಯಾವ ವಿಭಾಗ? ಎಷ್ಟು ಸ್ಥಾನ?
    * ಸಿವಿಲ್/ ಬಿಲ್ಡಿಂಗ್ ಕನ್‍ಸ್ಟ್ರಕ್ಷನ್ ಟೆಕ್ನಾಲಜಿ – 10
    * ಆರ್ಕಿಟೆಕ್ಚರ್ – 1
    * ಮೆಕಾನಿಕಲ್ – 2
    * ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ – 3
    * ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್/ ಕಂಪ್ಯೂಟರ್ ಟೆಕ್ನಾಲಜಿ/ ಎಂಎಸ್ಸಿ ಕಂಪ್ಯೂಟರ್ ಸೈನ್ಸ್ – 8
    * ಇನ್​ಫಾರ್ಮೇಷನ್ ಟೆಕ್ನಾಲಜಿ – 3
    * ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮ್ಯುನಿಕೇಷನ್ – 2
    * ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್ – 1
    * ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ – 1
    * ಮೈಕ್ರೋ ಎಲೆಕ್ಟ್ರಾನಿಕ್ಸ್ ಆ್ಯಂಡ್ ಮೈಕ್ರೋವೇವ್ – 1
    * ಏರೋನಾಟಿಕಲ್/ ಏರೋಸ್ಪೇಸ್ – 1
    * ಏವಿಯೋನಿಕ್ಸ್ – 1
    * ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್‍ಸ್ಟ್ರುಮೆಂಟೇಷನ್ – 2
    * ಫೈಬರ್ ಆಪ್ಟಿಕ್ಸ್ – 1
    * ಪ್ರೊಡಕ್ಷನ್ – 1
    * ಇಂಡಸ್ಟ್ರಿಯಲ್/ ಮ್ಯಾನುÁ್ಯಕ್ಚರಿಂಗ್/ ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್ – 1
    * ವರ್ಕ್‍ಶಾಪ್ ಟೆಕ್ನಾಲಜಿ – 1

    ಶೈಕ್ಷಣಿಕ ಅರ್ಹತೆ: ಇಂಜಿನಿಯರಿಂಗ್ ಪದವಿ ಪಡೆದಿರುವ ಅಥವಾ ಅಂತಿಮ ವರ್ಷದ ಪದವಿ ಅಧ್ಯಯನ ಮಾಡುತ್ತಿರುವ (2022ರ ಜನವರಿ 1ಕ್ಕೆ ಪದವಿ ಪ್ರಮಾಣಪತ್ರ ಪಡೆಯುವಂತಿರಬೇಕು) ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ವಯೋಮಿತಿ: 1.1.2022ಕ್ಕೆ ಅನ್ವಯವಾಗುವಂತೆ ಕನಿಷ್ಠ 20 ವರ್ಷ, ಗರಿಷ್ಠ 27 ವರ್ಷ. (2.1.1995 ರಿಂದ 1.1.2002ರ ನಡುವೆ ಜನಿಸಿರಬೇಕು)

    ಸ್ಟೈಪೆಂಡ್: ಐಎಂಎ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ 56,100 ರೂ. ಸ್ಟೈಪೆಂಡ್ ನೀಡಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 15.9.2021
    ಅಧಿಸೂಚನೆಗೆ: https://bit.ly/3D0dvax
    ಮಾಹಿತಿಗೆ: http://www.joinindianarmy.nic.in

    ಚಿಕ್ಕಮಗಳೂರು, ಕೋಲಾರದ ಅಂಗನವಾಡಿಯಲ್ಲಿ ಮಹಿಳೆಯರಿಗೆ 258 ಹುದ್ದೆಗಳಿಗೆ ಆಹ್ವಾನ

    ಮೆಸ್ಕಾಂನಲ್ಲಿ ಡಿಪ್ಲೊಮಾ, ಪದವೀಧರರಿಂದ 200 ಅಪ್ರೆಂಟೀಸ್​ಗಳಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts