ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ)ಯಿಂದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಇಲಾಖೆಗಳ ಕೇಂದ್ರ ಕಚೇರಿ ಅಥವಾ ದೇಶದ ಯಾವುದೇ ಭಾಗಕ್ಕೆ ಬೇಕಾದರೂ ನೇಮಕ ಮಾಡಬಹುದಾಗಿದೆ. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳ ದಾಖಲೆ/ ಪ್ರಮಾಣಪತ್ರಗಳು ಹಿಂದಿ ಅಥವಾ ಇಂಗ್ಲಿಷ್ ಹೊರತಾಗಿ ಬೇರೆ ಭಾಷೆಯಲ್ಲಿದ್ದರೆ ಆ ದಾಖಲೆಗಳಿಗೆ ಗೆಜೆಟೆಡ್ ಅಧಿಕಾರಿ/ ನೋಟರಿ ದೃಢೀಕರಣ ಮಾಡಿದ ಪ್ರತಿ ಸಲ್ಲಿಸಬೇಕು.
ಹುದ್ದೆ ವಿವರ
* ಅಸಿಸ್ಟೆಂಟ್ ಡೈರೆಕ್ಟರ್ 3
ಫರಿದಾಬಾದ್ನ ಕೇಂದ್ರ ರಸಗೊಬ್ಬರ ಗುಣಮಟ್ಟ ನಿಯಂತ್ರಣ ಮತ್ತು ತರಬೇತಿ ಸಂಸ್ಥೆ (ಸಿಎಫ್ಕ್ಯುಸಿಟಿಐ)ಯಲ್ಲಿ ಈ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 3 ವರ್ಷದ ವೃತ್ತಿ ಅನುಭವ ಕೇಳಲಾಗಿದೆ.
* ಅಸಿಸ್ಟೆಂಟ್ ಡೈರೆಕ್ಟರ್ (ವೀಡ್ ಸೈನ್ಸ್) 1
ಫರಿದಾಬಾದ್ನಲ್ಲಿರುವ ಸಸ್ಯ ಸಂರಕ್ಷಣೆ ಮತ್ತು ಕ್ವಾರಂಟೈನ್ ಹಾಗೂ ಶೇಖರಣಾ ನಿರ್ದೇಶನಾಲಯದಲ್ಲಿ ಹುದ್ದೆ ಇದ್ದು, ಕೃಷಿ (ಅಗ್ರೋನೋಮಿ)ಯಲ್ಲಿ ಎಂಎಸ್ಸಿ ಪದವಿ ಪಡೆದಿರುವ 3 ವರ್ಷದ ವೃತ್ತಿ ಅನುಭವ ಇರುವ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಹರು.
* ರಿಸರ್ಚ್ ಆಫೀಸರ್ (ಇಂಪ್ಲಿಮೆಂಟೇಷನ್) 8
ಗೃಹ ವ್ಯವಹಾರ ಸಚಿವಾಲಯದ ಅಧಿಕೃತ ಭಾಷೆಗಳ ಇಲಾಖೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಇಂಗ್ಲಿಷ್ ಒಂದು ವಿಷಯವಾಗಿ ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಹರಾಗಿದ್ದು, ಗರಿಷ್ಠ 30 ವರ್ಷ ವಯೋಮಿತಿ ನಿಗದಿಯಾಗಿದೆ.
* ಸೀನಿಯರ್ ಗ್ರೇಡ್ (ಮಾಹಿತಿ ಮತ್ತು ಪ್ರಸಾರ ಸೇವೆ ಹಿಂದಿ, ಇಂಗ್ಲಿಷ್, ಪಂಜಾಬಿ, ತೆಲುಗು, ಒರಿಯಾ, ಬೆಂಗಾಲಿ, ಮರಾಠಿ, ಗುಜರಾತಿ, ಅಸ್ಸಾಮಿ, ಮಣಿಪುರಿ) 34
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಭಾರತೀಯ ಮಾಹಿತಿ ಸೇವೆಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಮಾಸ್ಕಮ್ಯುನಿಕೇಷನ್, ರ್ಜನಲಿಸಂನಲ್ಲಿ ಪದವಿ/ ಡಿಪ್ಲೊಮಾ/ ಸ್ನಾತಕೋತ್ತರ ಪದವಿ ಪಡೆದಿರುವ ಗರಿಷ್ಠ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಹರು. ಒಬ್ಬ ಅಭ್ಯರ್ಥಿ ಎಷ್ಟು ಭಾಷೆಗೆ ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದ್ದು, ಆ ಭಾಷೆಯನ್ನು 10ನೇ ತರಗತಿ ವರೆಗೆ ಅಧ್ಯಯನ ಮಾಡಿರಬೇಕು.
ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ 25 ರೂ. ಶುಲ್ಕವಿದೆ.
ಆಯ್ಕೆ ಪ್ರಕ್ರಿಯೆ: ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾದಲ್ಲಿ, ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಹಾಗೂ ವೃತ್ತಿ ಅನುಭವ ಆಧರಿಸಿ ಶಾರ್ಟ್ ಲಿಸ್ಟ್ ಸಿದ್ಧಪಡಿಸಲಾಗುವುದು. ನಂತರ ನೇಮಕಾತಿ ಪರೀೆ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಅಥವಾ ಕೇವಲ ಸಂದರ್ಶನ ಮೂಲಕವೂ ಆಯ್ಕೆ ಮಾಡಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 12.8.2021
ಅಧಿಸೂಚನೆಗೆ: https://bit.ly/371oUZc
ಮಾಹಿತಿಗೆ: http://www.upsc.gov.in
ವಿಜ್ಞಾನ ವಿಷಯದಲ್ಲಿ ಪಿಯುಸಿಯಾದವರಿಗೆ ಸೈನಿಕ ಶಾಲೆಯಲ್ಲಿ ಹುದ್ದೆ: 81 ಸಾವಿರ ರೂ.ವರೆಗೆ ಸಂಬಳ
ಕನ್ನಡ ಬಲ್ಲ ಮಹಿಳೆಯರಿಗೆ ಉದ್ಯೋಗಾವಕಾಶ: ಅಂಗನವಾಡಿಯಲ್ಲಿ 285 ಹುದ್ದೆಗಳಿಗೆ ಆಹ್ವಾನ