More

    ಆಯುರ್ವೇದ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ, ಎಸ್‍ಎಸ್‍ಎಲ್‍ಸಿ ಆದವರಿಗೂ ಕೆಲಸ

    ದೆಹಲಿಯಲ್ಲಿರುವ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆï ಆಯುರ್ವೇದದಲ್ಲಿರುವ (ಎಐಐಎ) ವಿವಿಧ ಹುದ್ದೆಗಳಿಗೆ ಬ್ರಾಡ್‍ಕ್ಯಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟಂಟ್ಸ್ ಇಂಡಿಯಾ ಲಿಮಿಟೆಡ್ ಮೂಲಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ಹುದ್ದೆಗಳು: 56.

    ಎಐಐಎಗೆ ಆನ್‍ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅಭ್ಯರ್ಥಿಗಳ ಭಾವಚಿತ್ರ, ಸಹಿ, ಜನ್ಮದಿನಾಂಕ ದಾಖಲೆ, ಶೈಕ್ಷಣಿಕ ದಾಖಲೆಗಳನ್ನು ಸ್ಕಾನ್ ಮಾಡಿ 100 ಕೆಬಿ ಗಾತ್ರದಲ್ಲಿರುವ ದಾಖಲೆಗಳನ್ನು ಅಪ್​ಲೋಡ್​ ಡಲು ಸೂಚಿಸಲಾಗಿದೆ.

    ಹುದ್ದೆ, ಸಂಖ್ಯೆ, ವೇತನ ಈ ರೀತಿಯಾಗಿದೆ:
    ಪರ್ಸೋನಲ್ ಅಸಿಸ್ಟೆಂಟ್ – ಹುದ್ದೆ ಸಂಖ್ಯೆ 1- ವೇತನ 25,000 ರೂ
    ಡೇಟಾ ಎಂಟ್ರಿ ಆಪರೇಟರ್- 3- 20,430 ರೂ.
    ಆಪರೇಷನ್ ಥಿಯೇಟರ್ ನರ್ಸ್- 3- 37,500 ರೂ.
    ಸ್ಟಾಫ್​ ನರ್ಸ್-11- 37,500 ರೂ.
    ಮ್ಯುಸಿಯಂ ಕೀಪರ್-1- 24,000 ರೂ.
    ಮಿಡ್-ವೈಫ್​- 4- 37,500 ರೂ.
    ಪಂಚಕರ್ಮ ಟೆಕ್ನಿಷಿಯನ್- 7- 24,000 ರೂ.
    ಪಂಚಕರ್ಮ ಅಟೆಂಡೆಂಟ್- 12- 16,000 ರೂ.
    ಲಿಫ್ಟ್​ ಆಪರೇಟರ್- 4- 18,797 ರೂ.
    ಲಾಂಡ್ರಿ ಸೂಪರ್‍ವೈಸರ್- 1- 18,797 ರೂ.
    ಸಿಎಸ್‍ಎಸ್‍ಡಿ ಅಟೆಂಡೆಂಟ್- 1- 18,797 ರೂ.
    ವಾರ್ಡ್ ಅಟೆಂಡೆಂಟ್- 2 – 15,492 ರೂ.
    ವರ್ಕರ್ಸ್- 2- 18,797 ರೂ.
    ಗ್ಯಾಸ್ ಮನಿಫೋಲ್ಡ್ ಟೆಕ್ನಿಷಿಯನ್- 4- 18,797 ರೂ.

    ವಿದ್ಯಾರ್ಹತೆ: 8ನೇ ತರಗತಿ, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಐಟಿ, ಐಟಿಐ ಡಿಪೆÇ್ಲಮಾ, ಡಿ.Áರ್ಮ್(ಆಯುರ್ವೇದ), ನರ್ಸಿಂಗ್‍ನಲ್ಲಿ ಡಿಪ್ಲೋಮಾ/ಬಿಎಸ್ಸಿ/ ಎಂಎಸ್ಸಿ, ಯಾವುದೇ ಪದವಿ, ಬಿಕಾಂ ಓದಿರುವುದರ ಜತೆಗೆ ವೃತ್ತಿ ಅನುಭವ ಅವಶ್ಯ. ಪರ್ಸನಲ್ ಅಸಿಸ್ಟೆಂಟ್ ಹುದ್ದೆಗೆ ಶಾರ್ಟ್‍ಹ್ಯಾಂಡ್ ತಿಳಿದಿರಬೇಕು.

    ವಯೋಮಿತಿ: ವರ್ಕಸ್ ಹುದ್ದೆಗೆ ಗರಿಷ್ಠ 32 ವರ್ಷ, ಉಳಿದೆಲ್ಲ ಹುದ್ದೆಗಳಿಗೆ ಗರಿಷ್ಠ 30 ವರ್ಷ.

    ಅರ್ಜಿ ಶುಲ್ಕ: ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗ, ಮಹಿಳಾ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 750 ರೂ. (ಪ್ರತಿ ಪ್ರತ್ಯೇಕ ಹುದ್ದೆಗೆ ಅರ್ಜಿ ಸಲ್ಲಿಸುವುದಾದರೆ 500ರೂ. ಪ್ರತ್ಯೇಕವಾಗಿ ಪಾವತಿಸಬೇಕು), ಎಸ್‍ಸಿ, ಎಸ್‍ಟಿ, ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 450 ರೂ. (ಇನ್ನೊಂದು ಹುದ್ದೆಗೆ ಅರ್ಜಿ ಸಲ್ಲಿಸುವುದಾದರೆ 300ರೂ. ಪ್ರತ್ಯೇಕ).

    ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು. ಪರೀಕ್ಷೆಗಳ ದಿನಾಂಕವನ್ನು ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಮೇಲ್ ಅಥವಾ ಸಂದೇಶ ಮೂಲಕ ತಿಳಿಸಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 29.3.2021 
    ಅಧಿಸೂಚನೆಗೆ: https://bit.ly/2P1976A
    ಮಾಹಿತಿಗೆ: http://www.becil.com

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಕೊಂಕಣ ರೈಲ್ವೆಯಲ್ಲಿ ತಾಂತ್ರಿಕ ಸಹಾಯಕರ ಹುದ್ದೆ ಅರ್ಜಿ ಆಹ್ವಾನ- ₹30 ಸಾವಿರ ಆರಂಭಿಕ ವೇತನ

    ವಿವಿಧ ಪದವೀಧರರಿಗೆ ಕೇಂದ್ರ ಸರ್ಕಾರದಲ್ಲಿದೆ 25 ಹುದ್ದೆಗಳು- 45 ವರ್ಷಗಳವರೆಗೂ ಇದೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts