More

    ಎರಡನೇ ಪತ್ನಿಗೆ ನಾಮಿನಿ ಮಾಡಿದ ಮಾತ್ರಕ್ಕೆ ಮೊದಲಿನಾಕೆಯ ಹಕ್ಕು ಕಳೆದುಹೋಗಲ್ಲ

    ಎರಡನೇ ಪತ್ನಿಗೆ ನಾಮಿನಿ ಮಾಡಿದ ಮಾತ್ರಕ್ಕೆ ಮೊದಲಿನಾಕೆಯ ಹಕ್ಕು ಕಳೆದುಹೋಗಲ್ಲನಮ್ಮ ತಂದೆ ನಿವೃತ್ತ ಸರ್ಕಾರಿ ನೌಕರ ಆಗಿದ್ದು ಈಗ ಮೃತರಾಗಿದ್ದಾರೆ, ಪ್ರಶ್ನೆ ಏನೆಂದರೆ ತಂದೆ ಬದುಕಿದ್ದಾಗ ನಿವೃತ್ತಿಯಿಂದ ಬಂದ ಹಣವನ್ನು ಬ್ಯಾಂಕಿನಲ್ಲಿ ಡಿಪಾಸಿಟ್ ಇಟ್ಟು ಎರಡನೇ ಹೆಂಡತಿ ಮತ್ತು ಮಕ್ಕಳಿಗೆ ನಾಮಿನಿ ಮಾಡಿದ್ದಾರೆ.ಈಗ ಹಿರಿಯ ಹೆಂಡತಿ ಮತ್ತು ಮಕ್ಕಳು ಡಿಪಾಸಿಟ್ ಹಣ ಮತ್ತು ಬ್ಯಾಂಕ್ ಅಕೌಂಟ್‌ನಲ್ಲಿ ಇರುವ ಹಣದಲ್ಲಿ ಕಾನೂನು ಪ್ರಕಾರ ಪಾಲು ಪಡೆಯಬಹುದೆ?

    ಉತ್ತರ: ಮೃತ ಹಿಂದೂ ಪುರುಷನ ಸ್ಥಿರ ಮತ್ತು ಚರ ಆಸ್ತಿಗಳಲ್ಲಿ ಆತನ ಪತ್ನಿ, ಮತ್ತು ಮಕ್ಕಳಿಗೆ ಸಮಭಾಗ ಇರುತ್ತದೆ. ಮೊದಲ ಹೆಂಡತಿ ಬದುಕಿದ್ದಾಗ ಎರಡನೇ ಮದುವೆ ಆಗಿದ್ದರೆ, ಎರಡನೇ ಹೆಂಡತಿಗೆ ಯಾವ ಭಾಗವೂ ಬರುವುದಿಲ್ಲ. ಆದರೆ, ಎರಡನೇ ಮಗುವಿನಿಂದ ಜನಿಸಿದ ಮಕ್ಕಳಿಗೆ ಭಾಗ ಇರುತ್ತದೆ.

    ನಿಮ್ಮ ತಂದೆಯ ಹೆಸರಿನಲ್ಲಿರುವ ಡಿಪಾಸಿಟ್‌ ಹಣದಲ್ಲಿ, ನಿಮ್ಮ ತಾಯಿಗೆ ( ಮೊದಲ ಹೆಂಡತಿಗೆ) ಮತ್ತು ನಿಮ್ಮ ತಂದೆಯ ಮೊದಲ ಹೆಂಡತಿಯ ಮತ್ತು ಎರಡನೇ ಹೆಂಡತಿಯ ಮಕ್ಕಳಿಗೆ ಸಮಪಾಲು ಇರುತ್ತದೆ. ನಾಮಿನಿ ಆದ ಮಾತ್ರಕ್ಕೆ ವಾರಸುದಾರರ ಹಕ್ಕನ್ನು ಚ್ಯುತಿಗೊಳಿಸುವಂತಿಲ್ಲ. ನೀವು ನಿಮ್ಮ ತಾಯಿ ಮತ್ತು ನಿಮ್ಮ ತಂದೆಯ ದೊಡ್ಡ ಹೆಂಡತಿಯ ಮಕ್ಕಳೆಲ್ಲ ಸೇರಿ , ನಿಮ್ಮ ಚಿಕ್ಕಮ್ಮ ಮತ್ತು ಆಕೆಯ ಹಾಗೂ ನಿಮ್ಮ ತಂದೆಯ ಮಕ್ಕಳ ವಿರುದ್ಧ ವಿಭಾಗದ ದಾವೆ ಸಲ್ಲಿಸಿ. ನಿಮ್ಮ ಭಾಗ ಸಿಕ್ಕೇ ಸಿಗುತ್ತದೆ.

    ಮದುವೆಯಾಗುವುದಾಗಿ ಸಂಬಂಧ ಬೆಳೆಸಿದ: ಕಿಡ್ನಿಯನ್ನು ಮಾರಿ ದುಡ್ಡಿನ ಜತೆ ಎಸ್ಕೇಪ್​ ಆದ!

    ರಾತ್ರಿ ಓಡಾಡುವವರು ವೇಶ್ಯೆಯರು, ರೇಪ್​ಗೆ​ ಅರ್ಹರು ಎಂದು ಭೀಕರ ಕೊಲೆ ಸಮರ್ಥಿಸಿಕೊಂಡ ಪಾದ್ರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts