More

    ನಾವು ಅಧಿಕಾರಕ್ಕೆ ಬಂದ್ರೆ ಇಬ್ಬರು ಮುಖ್ಯಮಂತ್ರಿ, ಮೂವರು ಉಪ ಮುಖ್ಯಮಂತ್ರಿ- ಇದು ಚುನಾವಣಾ ಭರವಸೆ!

    ಲಖನೌ: ಪಂಚರಾಜ್ಯಗಳ ಚುನಾವಣೆ ಇನ್ನೇನು ಸಮೀಪಿಸುತ್ತಿದೆ. ಅದರಲ್ಲಿಯೂ ಉತ್ತರ ಪ್ರದೇಶದತ್ತ ಎಲ್ಲರ ದೃಷ್ಟಿ ನೆಟ್ಟಿದೆ. ಇಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಸರ್ವ ಪಕ್ಷಗಳೂ ತಯಾರಿ ನಡೆಸುತ್ತಿರುವ ಬೆನ್ನಲ್ಲೇ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿಚಿತ್ರ ಎನಿಸುವಂಥ ಭರವಸೆ ನೀಡಿದ್ದಾರೆ.

    ಭಾಗಿದಾರಿ ಪರಿವರ್ತನ್ ಮೋರ್ಚಾ’ ಪಕ್ಷವನ್ನು ಶುರು ಮಾಡಿರುವ ಅಸಾದುದ್ದೀನ್ ಓವೈಸಿ ಚುನಾವಣಾ ಪ್ರಚಾರಕ್ಕೆ ಇಳಿದಿದ್ದು, ಉತ್ತರ ಪ್ರದೇಶದಲ್ಲಿ ಮೈತ್ರಿ ಪಕ್ಷವು ಅಧಿಕಾರಕ್ಕೆ ಬಂದರೆ, ಇಬ್ಬರು ಮುಖ್ಯಮಂತ್ರಿ ಹಾಗೂ ಮೂವರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಲಾಗುವುದು ಎಂದು ಹೇಳಿದ್ದಾರೆ.

    ಭಾಗಿದಾರಿ ಪರಿವರ್ತನ್ ಮೋರ್ಚಾ ವಿವಿಧ ಪಕ್ಷಗಳ ಮೈತ್ರಿಕೂಟವಾಗಿದೆ. ನಾವಯ ಉತ್ತರ ಪ್ರದೇಶದ ಎಲ್ಲಾ 403 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲಿದ್ದೇವೆ. ನೀವೆಲ್ಲಾ ನಮಗೆ ಮತ ಹಾಕಬೇಕು. ಒಂದು ವೇಳೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಉತ್ತರ ಪ್ರದೇಶವು ಇಬ್ಬರು ಸಿಎಂ, ಮೂವರು ಡಿಸಿಎಂಗಳನ್ನು ಕಾಣಲಿದೆ. ಇದರಿಂದ ಎಲ್ಲಾ ಸಮಸ್ಯೆ ಪರಿಹಾರವಾಗಲಿದೆ ಎಂದು ಹೇಳಿದ್ದಾರೆ.

    ಸಿಎಂ ಮತ್ತು ಡಿಸಿಎಂಗಳು ಯಾರಾಗಲಿದ್ದಾರೆ ಎಂಬ ಮಾಹಿತಿಯನ್ನೂ ನೀಡಿರುವ ಓವೈಸಿ, ಇಬ್ಬರು ಮುಖ್ಯಮಂತ್ರಿಗಳ ಪೈಕಿ ಒಬ್ಬರು ಹಿಂದುಳಿದ ವರ್ಗ, ಮತ್ತೊಬ್ಬರು ದಲಿತ ಸಮುದಾಯಕ್ಕೆ ಸೇರಿರುತ್ತಾರೆ. ಮೂವರು ಡಿಸಿಎಂಗಳ ಪೈಕಿ ಒಬ್ಬರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ ಎಂದಿದ್ದಾರೆ.

    ಉತ್ತರ ಪ್ರದೇಶದ ಮಾಜಿ ಸಚಿವ ಕುಶ್ವಾಹಾ ಅವರನ್ನು ಭಾಗಿದಾರಿ ಪರಿವರ್ತನ್ ಮೋರ್ಚಾದ ಸಂಚಾಲಕರನ್ನಾಗಿ ನೇಮಿಸಲಾಗಿದೆ. ಈ ಪಕ್ಷದಲ್ಲಿ ಪರಿವರ್ತನ್ ಮೋರ್ಚಾದಲ್ಲಿ ಉತ್ತರ ಪ್ರದೇಶದ ಮಾಜಿ ಸಚಿವರಾದ ಬಾಬು ಸಿಂಗ್ ಕುಶ್ವಾಹಾ ಅವರ ಜನ್ ಅಧಿಕಾರ್ ಪಾರ್ಟಿ, 1970ರ ಅವಧಿಯಲ್ಲಿ ಕಾನ್ಶೀರಾಂ ಅವರಿಂದ ಸ್ಥಾಪನೆಯಾದ ಅಖಿಲ ಭಾರತ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದ ನೌಕರರ ಒಕ್ಕೂಟಗಳಿವೆ.

    ಸಿದ್ಧಾಂತ್‌ ಜತೆಗಿನ ಆ ಕಿಸ್ಸಿಂಗ್‌ ಸೀನ್‌- ಅಬ್ಬಬ್ಬಾ ಸುಸ್ತಾದೆ, ಎಂದಿಗೂ ಹೀಗಾಗಿರಲಿಲ್ಲ ಎಂದು ಅನುಭವ ಬಿಚ್ಚಿಟ್ಟ ನಟಿ ದೀಪಿಕಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts