More

    ಕಾಮಗಾರಿ ಹಿನ್ನೆಲೆಯಲ್ಲಿ ಹಲವಾರು ರೈಲುಗಳ ಸಂಚಾರ ಕೆಲದಿನ ರದ್ದು: ಇಲ್ಲಿದೆ ಮಾಹಿತಿ…

    ಬೆಂಗಳೂರು: ರೈಲ್ವೆ ಇಲಾಖೆಯಿಂದ ಕೆಲವೊಂದು ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವಾರು ರೈಲುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೆಲವು ರೈಲುಗಳ ಸಂಚಾರ ರದ್ದತಿ ಕುರಿತು ಮೊದಲೇ ಮಾಹಿತಿ ಇಲ್ಲದ್ದರಿಂದ ಪ್ರಯಾಣಿಕರು ಪರದಾಡುವಂತಾಗಿದೆ

    ಯಾವ್ಯಾವ ರೈಲುಗಳು ಸ್ಥಗಿತಗೊಂಡಿವೆ?
    – ಬೆಂಗಳೂರು ಹಾಗೂ ಮಂಗಳೂರಿನ ನಡುವೆ ಸಂಚರಿಸುವ ರೈಲನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

    – ಸುಬ್ರಹ್ಮಣ್ಯ ರಸ್ತೆ ಹಾಗೂ ಮಂಗಳೂರು ಸೆಂಟ್ರಲ್‌ ಮಧ್ಯದ ಪ್ರಯಾಣಿಕರ ವಿಶೇಷ ರೈಲು (ಸಂಖ್ಯೆ 06488/06489), ಮಂಗಳೂರು ಸೆಂಟ್ರಲ್ ಹಾಗೂ ಕಬಕ ಪುತ್ತೂರು ಪ್ರಯಾಣಿಕರ ರೈಲುಗಳು (06487/06486) ಮಾ.17 ರಿಂದ 20ರವರೆಗೆ ಸಂಚರಿಸುವುದಿಲ್ಲ.

    – ಯಶವಂತಪುರ–ಮಂಗಳೂರು ಎಕ್ಸ್‌ಪ್ರೆಸ್‌ ರೈಲು(16575/16576) ಮಾ.17 ಮತ್ತು 18ರಂದು ಇರುವುದಿಲ್ಲ. ಯವಂತಪುರ–ಮಂಗಳೂರು ಎಕ್ಸ್‌ಪ್ರೆಸ್‌(16539/16540) ರೈಲು ಮಾ.19 ಮತ್ತು 20ರಂದು ಸಂಚರಿಸುವುದಿಲ್ಲ.

    – ಪಡೀಲ್ ಮತ್ತು ಕುಲಶೇಖರ ನಿಲ್ದಾಣಗಳ ನಡುವೆ ಜೋಡಿ ಮಾರ್ಗದ ಕಾಮಗಾರಿ ನಿರ್ವಹಿಸಲು ಮಾರ್ಚ್​ 17 ಮತ್ತು 18ರಂದು ಒಟ್ಟು 18 ರೈಲುಗಳ ಸಂಚಾರ ರದ್ದಾಗಿದೆ.

    – ಪುಣೆ – ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲು (11097/11098) ಮಾ.19ರಂದು ಮತ್ತು 21ರಂದು ರದ್ದಾಗಿದೆ. ಯಶವಂತಪುರ ಹಾಗೂ ಕಾರವಾರ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ (16515/16516) ಮಾ.18 ಮತ್ತು 19ರಂದು ಇರುವುದಿಲ್ಲ.

    – ಬೆಂಗಳೂರು–ಕಾರವಾರ ಎಕ್ಸ್‌ಪ್ರೆಸ್‌ (16595/16596), ಯಶವಂತಪುರ–ಕಣ್ಣೂರು ಎಕ್ಸ್‌ಪ್ರೆಸ್‌ (16511/16511), ಕೆಎಸ್ಆರ್ ಬೆಂಗಳೂರು – ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ (16585/16586) ರೈಲುಗಳು ಸಂಚಾರ ಮಾ.19 ಮತ್ತು 20ರಂದು ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.

    ಅನುಮತಿ ಸಿಕ್ಕ ಕೂಡಲೇ ದಿಢೀರ್ ನಿರ್ಧಾರ ಕೈಗೊಂಡಿರಬಹುದು. ರೈಲು ಸಂಚಾರ ರದ್ದಾಗಿರುವುದು ತಾತ್ಕಾಲಿಕ ಅಷ್ಟೆ. ಜೋಡಿ ಮಾರ್ಗದ ಕಾಮಗಾರಿ ಒಮ್ಮೆ ಪೂರ್ಣಗೊಂಡರೆ ಅನುಕೂಲ ಆಗಲಿದೆ. ಪ್ರಯಾಣಿಕರು ಸಹಕರಿಸಬೇಕು’ ಎಂದು ನೈರುತ್ಯ ರೈಲ್ವೆ ವಿಭಾಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಕೆಲಸ ಬೇಕೆಂದರೆ ಸೊಸೆಯನ್ನು ಹೊರಹಾಕು ಎಂದ ದೇವಾಲಯ- ಕಲಾವಿದನ ಬಾಳಲ್ಲಿ ಇದೆಂಥ ದುರಂತ?

    ‘ಜೇಮ್ಸ್’​ ಸಂಭ್ರಮಕ್ಕೆ ಅಡ್ಡಿಯಾದ ಹಿಜಾಬ್​: ಕಾರ್ಯಕ್ರಮ ಕ್ಯಾನ್ಸಲ್​- ಅಪ್ಪು ಅಭಿಮಾನಿಗಳ ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts