More

    ಈ ವರ್ಷ ಹೆಚ್ಚು ಬಳಕೆಯಾದ ಎಮೋಜಿ ಯಾವುದು ಎಂದು ಗೆಸ್‌ ಮಾಡುವಿರಾ? ಇಲ್ಲಿದೆ ನೋಡಿ ಉತ್ತರ…

    ನವದೆಹಲಿ: ಈಗ ಏನಿದ್ದರೂ ಶಬ್ದಗಳಿಗಿಂತ ಹೆಚ್ಚಾಗಿ ಎಮೋಜಿ ಮೂಲಕವೇ ತನ್ನ ಭಾವನೆ ಹೇಳಿಕೊಳ್ಳುವ ಯುಗ. ಯಾರಾದರೂ ಏನಾದರೂ ಮೆಸೇಜ್‌ ಮಾಡಿದಾಗ ಟಪಕ್‌ ಎಂದು ಒಂದು ಎಮೋಜಿ ಕಳುಹಿಸಿದರೆ ಆಯಿತು. ಹೇಗೆ ಅದು ರೆಡಿಮೇಡ್‌ ಇರುವ ಕಾರಣ, ಖುಷಿ, ದುಃಖ, ಕೋಪ, ಹಾಸ್ಯ, ಸಿಕ್ಕಾಪಟ್ಟೆ ಖುಷಿ ಎಲ್ಲದ್ದಕ್ಕೂ ಎಮೋಜಿಯೇ ಬೇಕು. ಧನ್ಯವಾದ ಸಲ್ಲಿಸಲು, ಓಕೆ ಎನ್ನಲು, ಬೇಡ ಎನ್ನಲು, ಇಷ್ಟವಿಲ್ಲ, ಇಷ್ಟವಿದೆ ಎನ್ನಲು, ಬಿದ್ದು ಬಿದ್ದು ನಗುವಂಥ ಸನ್ನಿವೇಶ ಎದುರಾದಾಗ… ಹೀಗೆ ಎಲ್ಲದ್ದಕ್ಕೂ ಎಮೋಜಿಗಳಿವೆ.

    ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಮ್‌ ಹಾಗೂ ಮೆಸೆಂಜರ್, ವಾಟ್ಸ್‌ಆ್ಯಪ್‌ ಎಲ್ಲದರದಲ್ಲಿಯೂ ಈಗ ಇದರದ್ದೇ ಹವಾ. ಹಾಗಿದ್ದ ಮೇಲೆ ಅತಿ ಹೆಚ್ಚು ಬಳಕೆಯಾಗಿರುವ ಎಮೋಜಿ ಯಾವುದು ಇರಬಹುದು ಎಂದು ನಿಮಗೆ ಅನ್ನಿಸುತ್ತದೆ? ಯುವಕರಾಗಿದ್ದರೆ ಹಾರ್ಟ್‌ ಎನ್ನಬಹುದು, ಸ್ವಲ್ಪ ವಯಸ್ಸಾದವರಾದರೆ ಸ್ಮೈಲ್‌ ಎನ್ನಬಹುದು.

    ಆದರೆ ನಿಜಕ್ಕೂ ಅತಿ ಹೆಚ್ಚು ಬಳಕೆಯಾಗಿರುವ ಎಮೋಜಿ ಎಂದರೆ ಸಂತೋಷದ ಕಣ್ಣೀರಿನ ಮುಖ ಹೊಂದಿರುವ ಎಮೋಜಿ.

    ಈ ವರ್ಷ ಹೆಚ್ಚು ಬಳಕೆಯಾದ ಎಮೋಜಿ ಯಾವುದು ಎಂದು ಗೆಸ್‌ ಮಾಡುವಿರಾ? ಇಲ್ಲಿದೆ ನೋಡಿ ಉತ್ತರ...

    ಯೂನಿಕೋಡ್ ಕನ್ಸೋರ್ಟಿಯಮ್​ ಎಂಬ ಸಂಸ್ಥೆ 2021ರ ಅತ್ಯಂತ ಜನಪ್ರಿಯ ಎಮೋಜಿಗಳ ಕುರಿತು ದತ್ತಾಂಶ ಬಿಡುಗಡೆ ಮಾಡಿದ್ದು ಇದರಲ್ಲಿ ಸಂತೋಷದ ಕಣ್ಣೀರಿನ ಎಮೋಜಿಗೆ ಮೊದಲ ಸ್ಥಾನ ಸಿಕ್ಕಿದೆ. ನಂತರದ ಸ್ಥಾನಗಳು ಹೀಗಿವೆ;

    ಹೃದಯದ ಎಮೋಜಿ (2); ನೆಲದ ಮೇಲೆ ನಗುತ್ತಾ ಉರುಳುತ್ತಿರುವುದು (3): ಹೆಬ್ಬೆರಳುಗಳು (ಲೈಕ್‌, ಡಿಸ್‌ಲೈಕ್‌ ಇತ್ಯಅದಿ-4), ಜೋರಾಗಿ ಅಳುವ ಮುಖ (5). ನಮಸ್ತೆ (6), ಮುತ್ತು ನೀಡುತ್ತಿರುವುದು (7), ಸಂತೋಷದ ಮುಖ (8), ಹೃದಯದಿಂದ ನಗುತ್ತಿರುವ ಮುಖ (9), ನಗುತ್ತಿರುವ ಮುಖದ ಜೊತೆಗೆ ಹೃದಯ ಕಣ್ಣುಗಳು ಮತ್ತು ನಗುತ್ತಿರುವ ಕಣ್ಣುಗಳೊಂದಿಗೆ ನಗುತ್ತಿರುವ ಮುಖ ಹೊಂದಿರುವ ಎಮೋಜಿಗಳು (10) ಸ್ಥಾನದಲ್ಲಿವೆ.

    ಅಪ್ಪು ಫೋಟೋ ಪಕ್ಕ ಹಾರಿಬಂದು ಕುಳಿತ ಪಾರಿವಾಳ: ಶಿವಮೊಗ್ಗದಲ್ಲೊಂದು ಅಚ್ಚರಿ, ಅಭಿಮಾನಿಗಳು ಭಾವುಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts